ನಟಿ ಕೀರ್ತಿ ಸುರೇಶ್ ಗೆ ಕೋವಿಡ್-19 ಪಾಸಿಟಿವ್
ಭಾರತದ ಮತ್ತೊಬ್ಬ ಸೆಲೆಬ್ರಿಟಿ ನಟಿ ಕೀರ್ತಿ ಸುರೇಶ್ ಕೋವಿಡ್ ಸೋಂಕಿಗೆ ಒಳಗಾಗಿದ್ದಾರೆ. ಸಾಮಾನ್ಯರಿಂದ ಸೆಲೆಬ್ರಿಟಿ ವರೆಗೆ ಕರೋನಾ ಬಿಟ್ಟು ಬಿಡದೆ ಕಾಡುತ್ತಿದೆ. ಈಗ ಮಹಾನಟಿ ಖ್ಯಾತಿಯ ಕೀರ್ತೀ ಸುರೇಶ್ ಅವರಿಗೆ ಕೋವಿಡ್ ಸೋಂಕು ಧೃಡಪಟ್ಟಿದೆ.
ಈ ಕುರಿತು ದಕ್ಷಿಣ ಭಾರತದ ಖ್ಯಾತ ನಟಿ ಟ್ವಿಟರ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. “ನನಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಲಘು ಲಕ್ಷಣಗಳಿರುವ ಅನುಭವವಾಗುತ್ತಿದೆ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನೂ ತೆಗೆದುಕೊಳ್ಳುತ್ತಿದ್ದೇನೆ. ಸಧ್ಯ ನಾನು ಐಸೋಲೇಟ್ ಆಗಿದ್ದೇನೆ. ನನ್ನ ಸಂಪರ್ಕದಲ್ಲಿದ್ದವರು ಕೋವಿಡ್ ಟೆಸ್ಟ್ ಪಡೆದುಕೊಳ್ಳಿ . ಒಂದು ವೇಳೆ ಲಸಿಕ ಪಡೆದಿಲ್ಲವೆಂದರೆ ಆದಷ್ಟು ಶೀಘ್ರವಾಗಿ ಪಡೆದುಕೊಳ್ಳಿ ಎಂದು ಟ್ವೀಟರ್ ನಲ್ಲಿ ಬರೆದುಕೊಂಡಿದ್ದಾರೆ.
ನಟಿ ಬೇಗ ಗುಣಮುಖರಾಗುವಂತೆ ಅಭಿಮಾನಿಗಳು ಟ್ವೀಟರ್ ನಲ್ಲಿ ಹಾರೈಸುತ್ತಿದ್ದಾರೆ. ಸದ್ಯ ಕೀರ್ತಿ ಸುರೇಶ್, ಮಹೇಶ್ ಬಾಬು ಅಭಿನಯದ ‘ಸರ್ಕಾರು ವಾರಿ ಪಟ’ … ಜೊತೆಗೆ ಚಿರಂಜೀವಿ ಅಭಿನಯದ ‘ಭೋಲಾ ಶಂಕರ್’ (ಭೋಲ ಶಂಕರ್) ಚಿತ್ರದಲ್ಲಿ ನಟಿಸುತ್ತಿದ್ದಾರೆ.
— Keerthy Suresh (@KeerthyOfficial) January 11, 2022
ಈಗಾಗಲೇ ಟಾಲಿವುಡ್ನ ಹಲವಾರು ನಟರಿಗೆ ಕರೋನಾ ಸೋಂಕು ತಗುಲಿದೆ. ಮಹೇಶ್ ಬಾಬು, ತ್ರಿಶಾ, ರಾಜೇಂದ್ರ ಪ್ರಸಾದ್, ನವೀನ್ ಪೋಲಿಸೆಟ್ಟಿ, ಬಂಡ್ಲಗಣೇಶ್, ಮಂಚು ಮನೋಜ್, ಮಂಚು ಲಕ್ಷ್ಮಿ, ಹಿರಿಯ ನಟಿಯರಾದ ಶೋಭನಾ, ಮೀನಾ, ಖುಷ್ಬು ಮತ್ತು ಇತರರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.
ಇಂದು ಭಾರತದ ಪ್ರಖ್ಯಾತ ಗಾಯಕಿ ಗಾನ ಕೋಗಿಲೆ ಲತಾ ಮಂಗೇಶ್ಕರ್ ಅವರಿಗೂ ಕೋವಿಡ್ ಸೋಂಕು ತಗುಲಿದೆ. ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.