ಕೀನ್ಯಾ.. ಪೂರ್ವ ಆಫ್ರಿಕಾದಲ್ಲಿನ ಸುಂದರ ದೇಶ..
ಈ ದೇಶದ ಅಧಿಕೃತ ಹೆಸರು ರಿಪಬ್ಲಿಕ್ ಆಫ್ ಕೀನಿಯಾ..
ವಿಶ್ವದ 48 ನೇ ದೊಡ್ಡ ದೇಶವಾಗಿದೆ..
ಈ ದೇಶದಲ್ಲಿ ಒಟ್ಟು 68 ಭಾಷೆಗಳನ್ನ ಜನರು ಮಾತನಾಡುತ್ತಾರೆ..
ಈ ದೇಶದ ಒಟ್ಟಾರೆ ಜನಸಂಖ್ಯೆ ಸುಮಾರು 5 ಕೋಟಿ – ಜನಸಂಖ್ಯೆ ವಿಚಾರದಲ್ಲಿ ವಿಶ್ವದಲ್ಲಿ 38ನೇ ಸ್ಥಾನದಲ್ಲಿದೆ..
ಕೀನ್ಯಾದ ನೆರೆ ರಾಷ್ಟ್ರಗಳು – ಸೌತ್ ಸುಡಾನ್ , ಇಥಿಯೋಪಿಯಾ , ಸೊಮಾಲಿಯಾ , ಉಗಾಂಡಾ , ತಂಜಾನಿಯಾ…
ಈ ದೇಶದ ರಾಜಧಾನಿ – ನೈರೋಬಿಯಾ
ಅಧಿಕೃತ ಭಾಷೆ – ಸ್ವಾಹಿಲಿ
ಇಲ್ಲಿ ಒಂದು ಜನಾಂಗವಿದೆ.. ಮಸಾಯಿ ಜನಾಂಗ. ಈ ಜನಾಂಗವು ತನ್ನ ಸಂಸ್ಕೃತಿ , ಧರಿಸುವ ಉಡುಪು , ಜೀವನ ಶೈಲಿಯಿಂದ ಜನಪ್ರಿಯತೆ ಪಡೆದಿದೆ.. ಕೀನ್ಯಾ ಮತ್ತೆ , ತಂಜಾನಿಯಾಗಳಲ್ಲಿ ಈ ಜನಂಗಾದ ಸುಮಾರು 10 ಲಕ್ಷ ಜನರಿದ್ದಾರೆ.. ಈ ಸಮುದಾಯದ ಜನರು ಸರ್ಕಾರದ ಯಾವುದೇ ನೀತಿ ನಿಮಯಗಳನ್ನ ಪಾಲಿಸುವುದಿಲ್ಲ.. ಈ ಸಸಮುದಾಯದಲ್ಲಿ ಇವರೇ ಮಾಡಿಕೊಂಡಿರುವ ಕೆಲ ಮೌಖಿಕ ನಿಯಮಗಳಿವೆ..
ಕೆಲ ಇಜ್ಞಾನಿಗಳು ಹೇಳುವಂತೆ ಬ್ರಹ್ಮಾಮಡದಲ್ಲಿ ಮೊದಲು ಮುನ್ಯರು ಬಂದ ದೇಶ ಕೀನ್ಯಾ ಎನ್ನಲಾಗುತ್ತದೆ.
ಈ ದೇಶದಲ್ಲಿ ಮನುಷ್ಯರ ಅತ್ಯಂತ ಹಳೆಯದಾದ ಅಸ್ತಿ ಪಂಜರ ಸಿಕ್ಕಿದ್ದು, ಇಲ್ಲಿಂದಲೇ ಮನುಷ್ಯರ ಸಂತತಿಯ ಪ್ರಾರಂಭ ಆಗಿರುವ ಸಾಧ್ಯತೆಗಳಿದೆ ಎನ್ನಲಾಗುತ್ತದೆ..
100 ವರ್ಷಕ್ಕಿಂತ ಹೆಚ್ಚು ಕಾಲ ಈ ದೇಶ ಬ್ರೇಜನ್ ನ ಗುಲಾಮವಾಗಿತ್ತು.. 12 – ಡಿಸೆಂಬರ್ -1963 ಕ್ಕೆ ಈ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿತ್ತು..
ಈ ದೇಶದಲ್ಲಿ ಕರೇಜಿನ್ ಎಂಬ ಸಮುದಾಯವಿದೆ.. ಈ ಸಮುದಾಯವನ್ನ The Running Tribe ಅಂತಲೂ ಕರೆಯಲಾಗುತ್ತದೆ..
ಇವರು ದಿನ ರಾತ್ರಿ ಓಡುವುದನ್ನ ರೂಢಿಸಿಕೊಂಡಿದ್ದಾರೆ..
ಈ ದೇಶದಲ್ಲಿ ಸುಮಾರು 16 ಲಕ್ಷ ಜನರು ಪ್ರತಿ ರಾತ್ರಿ ರಸ್ತೆಯಲ್ಲಿ ಓಡುವುದನ್ನ ಕಾಣಬಹುದು. ಆದ್ರೆ ಅರೆ ನಗ್ನಾವಸ್ಥೆಯಲ್ಲಿ..!!
ಹೌದು.. 11 ಗಂಟೆಯ ನಂತರ ಈ ಜನರು ಹೀಗೆ ಓಡುತ್ತಾರೆ.. ತೀರ ಕಡಿಮೆ ಉಡುಪು ಧರಿಸಿ ಓಡುತ್ತಾರೆ.. ಆದ್ರೆ ಈ ರೀತಿ ಅರೆ ನಗ್ನಾವಸ್ಥೆಯಲ್ಲಿ ಓಡುವುದನ್ನ ಕೇಳಿದ್ರೆ ನಮಗೆ ವಿಚಿತ್ರ ಎನ್ನಿಸಿದ್ರು ಇಲ್ಲಿ ಇದು ಕಾಮನ್..
ಹಾಫ್ ಮ್ಯಾರಥಾನ್ ಆಗಿರಲಿ ಫುಲ್ ಮ್ಯಾರಥಾನ್ ಆಗಿರಲಿ ಗೆದ್ದವರ ಪೈಕಿ ಹೆಚ್ಚಿನವರು ಕೀಣ್ಯಾದ ಓಟಗಾರರೇ ಆಗಿದ್ದಾರೆ..
ಇಲ್ಲಿನ ಪುರುಷರು ಒಬ್ಬ ಪತ್ನಿಗಿಂತಲೂ ಹೆಚ್ಚು ಮಹಿಳೆಯರನ್ನ ಮದುವೆಯಾಗಬಹುದು.. ಇಲ್ಲಿ ಇದು ಅಧಿಕೃತವೂ ಹೌದು.. ಇಲ್ಲಿನ ಪುರುಷರು ತಮಗಿಷ್ಟ ಬಂದಷ್ಟು ಜನರನ್ನ ಮದುವೆಯಾಗಬಹುದು.. ಮಹಿಳೆಯರು ( ಪತ್ನಿಯರು) ಗಂಡಂದಿರನ್ನ ತಡೆಯುವಂತಿಲ್ಲ..
ಇಲ್ಲಿ ವರದಕ್ಷಿಣೆ ನೀಡುವುದನ್ನೂ ಕೂಡ ಶುಭ ಎಂದು ಪರಿಗಣಿಸಲಾಗುತ್ತೆ.. ಅಂದ್ಹಾಗೆ 10 ಹಸುಗಳಿಂದ ವರದಕ್ಷಿಣೆ ಕೊಡುವುದು ಶುರುವಾಗತ್ತದೆ.. ಅಂದ್ರೆ ವರದಕ್ಷಿಣೆಯಲ್ಲಿ ಕಡಿಮೆಯಂದ್ರು 10 ಹಸುಗಳನ್ನ ನೀಡಲೇ ಬೇಕು..
ಕೆಲ ಸರ್ವೇ ಗಳ ಅನ್ವಯ ಬಡತನದ ಹೊರತಾಗಿಯೂ ಅತಿ ಹೆಚ್ಚು ಖುಷಿಯಾಗಿರುವ ದೇಶಗಳ ಸೂಚ್ಯಾಂಕದಲ್ಲಿ ಕೀನ್ಯಾ 2ನೇ ಸ್ಥಾನದಲ್ಲಿದೆ..
ಈ ದೇಶದಲ್ಲಿ ಪ್ಲಾಸ್ಟಿಕ್ ಬಳಕೆಯವಿರುದ್ಧ ಕಠಿಣ ಕಾನೂನಿದೆ..
ಈ ದೇಶದಲ್ಲಿ ಪ್ಲಾಸ್ಟಿಕ್ ಬ್ಯಾಕ್ , ಉತ್ಪನ್ನಗಳ ಮಾರಾಟ ಅಥವ ಖರೀದಿಸುವುದು ಕಂಡು ಬಂದರೆ ಅಂತವರಿಗೆ ಕಡಿಮೆ ಅಂದ್ರು 4 ವರ್ಷಗಳ ಕಾಲ ಜೈಲು ಶಿಕ್ಷೆಗೆ ಗುರಿಪಡಿಸಲಾಗುತ್ತದೆ.. ಇಲ್ಲದೇ ಹೋದಲ್ಲಿ 25 ಲಕ್ಷ ರೂಪಾಯಿ ದಂಡ ವಿಧಿಸಲಾಗುತ್ತದೆ..
ಈ ದೇಶದಲ್ಲಿ ಬೇಟೆಯಾಡುವುದು ದೊಡ್ಡ ಅಪರಾಧವಾಗಿದೆ.. ಅಪ್ಪಿ ತಪ್ಪಿ ಮನುಷ್ಯರಿಂದ ಪ್ರಾಣಿಗಳಿಗೆ ತೊಂದರೆಯಾದ್ರೆ , ಜೀವನ ಪೂರ್ತಿ ಜೈಲಿನಲ್ಲಿ ಕೊಳೆಬೇಕಾಗುತ್ತದೆ..
ಇಲ್ಲಿನ ಕರೆನ್ಸಿ – ಕೀನ್ಯಾನ್ ಶೀಲಿಂಗ್ – ಭಾರತದ 0.67 ರೂಪಾಯಿಗೆ ಸಮ