ಕೇರಳ ವಿಧಾನಸಭಾ ಚುನಾವಣೆ : ಪಿಣರಾಯಿ ವಿಜಯನ್ ಒಟ್ಟಾರೇ ಆಸ್ತಿ ಎಷ್ಟು..?
ಕೇರಳ : ಏಪ್ರಿಲ್ 6ರಂದು ಕೇರಳದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಕಣ್ಣೂರು ಜಿಲ್ಲೆಯ ಧರ್ಮದಾಮ್ ಕ್ಷೇತ್ರದಿಂದ ಸಿಎಂ ಪಿಣರಾಜಿ ವಿಜಯನ್ ಸ್ಪರ್ಧಿಸುತ್ತಿದದ್ದು, ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ತಮ್ಮ ಒಟ್ಟು ಆಸ್ತಿಯ ಮೌಲ್ಯವನ್ನ ಘೋಷಣೆ ಮಾಡಿದ್ದಾರೆ.
ಪಿಣರಾಯ್ ವಿಜಯನ್, ತಮ್ಮ ಒಟ್ಟಾರೇ ಆಸ್ತಿ ಮೌಲ್ಯ 54 ಲಕ್ಷವೆಂದು ಘೋಷಿಸಿದ್ದಾರೆ. 2 ಫ್ಲಾಟ್ ಮನೆ, ಸೇರಿದಂತೆ 51.95 ಲಕ್ಷ ಮೊತ್ತದ ಸ್ಥಿರಾಸ್ತಿ ಇದೆ. ಥಲಾಸೆರಿ ಶಾಖೆಯ SBI ಬ್ಯಾಂಕ್ ಖಾತೆಯಲ್ಲಿ ಸುಮಾರು 78 ರೂಪಾಯಿ ನಗದು ಇದ್ದು, ಮಲಯಾಳಂ ಕಮ್ಯೂನಿಕೇಷನ್ ಲಿಮಿಟೆಡ್ ನಲ್ಲಿ 10 ಸಾವಿರ ಮೊತ್ತದ 1 ಸಾವಿರ ಷೇರುಗಳು, ಕೆಐಎಎಲ್ ನಲ್ಲಿ 1 ಲಕ್ಷ ರೂ. ಮೊತ್ತದ ಷೇರು ಸೇರಿದಂತೆ 2.04 ಲಕ್ಷ ಮೊತ್ತದ ಚರಾಸ್ತಿ ಇದೆ.
ಅತ್ಯಾಚಾರ , ಕೊಲೆ ಪ್ರಕರಣದ ಸಂತ್ರಸ್ತರ ತಾಯಿ ಕೇರಳ ಸಿಎಂ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧೆ..!
ಇನ್ನೂ ಅವರ ಪತ್ನಿ ಕಮಲಾ ಥಲಾಸೆರಿ ಶಾಖೆಯ ಎಸ್ ಬಿಐ ಬ್ಯಾಂಕ್ ಖಾತೆಯಲ್ಲಿ 5, 47, 803,21 ರೂ ನಗದು ಹೊಂದಿದ್ದು, ಒಟ್ಟಾರೇ 35 ಲಕ್ಷ ಮೊತ್ತದ ಆಸ್ತಿ ಹೊಂದಿದ್ದಾರೆ.