ವರದಕ್ಷಿಣೆ ವಿರುದ್ಧ ಹೋರಾಟಕ್ಕೆ ಕೇರಳ ರಾಜ್ಯಪಾಲರ ಸಾಥ್ – ಒಂದು ದಿನದ ಉಪವಾಸ
ಸಮಾಜದಲ್ಲಿ ಇನ್ನೂ ಕಾಡುತ್ತಿರುವ ವರದಕ್ಷಿಣೆ ಪಿಡುಗಿನಿಂದ ಅನೇಕ ಮಹಿಳೆಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.. ಇನ್ನೂವರೆಗೂ ಹಲವರು ಚಿತ್ರಹಿಂಸೆ ಅನುಭವಿಸುತ್ತಿದ್ದಾರೆ.. ಇನ್ನೂ ಕೆಲವರಿಗೆ ಚಿತ್ರಹಿಂಸೆ ಕೊಟ್ಟು ಸಾಯಿಸಿರುವಂತಹ ಪ್ರಕರಣಗಳು ಬೆಳಕಿಗೆ ಬಮದಿದವೆ.. ಇನ್ನೂ ಇತ್ತೀಚೆಗೆ ಕೇರಳದಲ್ಲಿ ವರಕ್ಷಿಣೆ ಕಿರುಕುಳದಿಂದ ಗೃಹಿಣಿಯರ ಆತ್ಮಹತ್ಯೆ , ಕೊಲೆ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿದೆ..
ಇದೀಗ ವರದಕ್ಷಿಣೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ ಕೇರಳದ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ಬುಧವಾರ ನಡೆಯಲಿರುವ ‘ವರದಕ್ಷಿಣೆ ವಿರೋಧಿ ಉಪವಾಸ ದಿನ’ದಲ್ಲಿ ಪಾಲ್ಗೊಳ್ಳಲಿದ್ದು, ತಾವೂ ಕೂಡ ಒಂದು ದಿನದ ಉಪವಾಸವಿರುದಾಗಿ ಹೇಳುವ ಮೂಲಕ ಸಾಮಾಜಿಕ ಪಿಡುಗಾಗಿರುವ ವರದಕ್ಷಿಣೆ ವಿರುದ್ಧ ಹೋರಾಟಕ್ಕೆ ಸಾಥ್ ನೀಡುತ್ತಿದ್ಧಾರೆ.
ಅಮೆರಿಕದ ಉಪಾಧ್ಯಕ್ಷೆಯಾಗಿ ಕಮಲಾ ಹ್ಯಾರಿಸ್ ಐತಿಹಾಸಿಕ ಆಯ್ಕೆ ಬಗ್ಗೆ ಪುಸ್ತಕ..!
ಗಾಂಧಿ ಸ್ಮಾರಕ ನಿಧಿ ಮತ್ತು ಇತರ ಸಂಘಟನೆಗಳ ಸಹಯೋಗದಲ್ಲಿ ಇಲ್ಲಿನ ಗಾಂಧಿ ಭವನದಲ್ಲಿ ಮುಂಜಾನೆಯಿಂದ ಸಂಜೆವರೆಗೆ ನಡೆಯಲಿರುವ ಒಂದು ದಿನದ ಉಪವಾಸ ಕಾರ್ಯಕ್ರಮದಲ್ಲಿ ರಾಜ್ಯಪಾಲರು ಭಾಗವಹಿಸಲಿದ್ದಾರೆ. ಗಾಂಧಿ ವಿಚಾರಧಾರೆಗಳನ್ನು ಅನುಸರಿಸುವ ರಾಜ್ಯವ ವಿವಿಧ ಸಂಘಟನೆಗಳು ಕರೆ ನೀಡಿದ ’ವರದಕ್ಷಿಣೆ ವಿರೋಧಿ ಉಪವಾಸ ದಿನ’ದಲ್ಲಿ ಪಾಲ್ಗೊಳ್ಳುವ ರಾಜ್ಯಪಾಲರು, ಸಂಜೆ ನಡೆಯುವ ಕಾರ್ಯಕ್ರಮದಲ್ಲೂ ಭಾಗವಹಿಸಲಿದ್ದಾರೆ ಎಂದು ರಾಜಭವನದ ಮೂಲಗಳು ತಿಳಿಸಿವೆ.
ಅಲ್ಲದೇ ವರದಕ್ಷಿಣೆ ವಿರುದ್ಧ ಜಾಗೃತಿ ಮೂಡಿಸಲು ಯಾವುದೇ ’ಸಂಘಟಿತ’ ಸ್ವಯಂಪ್ರೇರಿತ ಚಳವಳಿಯಲ್ಲಿ ಪಾಲ್ಗೊಳ್ಳುವುದಾಗಿ ಕಳೆದ ತಿಂಗಳು ರಾಜ್ಯಪಾಲರು ಕಾರ್ಯಕ್ರಮವೊಂದರಲ್ಲಿ ತಿಳಿಸಿದ್ದರು.ಅದರಂತೆ ಬುಧವಾರ ಕಾರ್ಯಕ್ರಮದಲ್ಲಿ ಬಾಗವಹಿಸಲಿದ್ದಾರೆ.