ಅಮೆರಿಕದ ಉಪಾಧ್ಯಕ್ಷೆಯಾಗಿ ಕಮಲಾ ಹ್ಯಾರಿಸ್ ಐತಿಹಾಸಿಕ ಆಯ್ಕೆ ಬಗ್ಗೆ ಪುಸ್ತಕ..!
ಅಮೆರಿಕಾದಲ್ಲಿ ಮೊದಲ ಮಹಿಳಾ ಉಪಾಧ್ಯಕ್ಷೆಯಾಗಿ ಅಧಿಕಾರ ವಹಿಸಿಕೊಂಡಿರುವ ಭಾರತ ಮೂಲದ ಕಮಲಾ ಹ್ಯಾರಿಸ್ ಅವರ ಬಗ್ಗೆ ಪುಸ್ತಕ ಬರೆಯುವುದಕ್ಕೆ ತಯಾರಿಗಳು ನಡೆದಿವೆ.. ಹೌದು.. ಅಮೆರಿಕಾದ ಅಧ್ಯಕ್ಷೆಯಾಗಿ ಅವರ ಆಯ್ಕೆ ಮತ್ತು ಅಮೆರಿಕದಲ್ಲಿ ಭಾರತೀಯ ಅಮೆರಿಕನ್ ಸಮುದಾಯದ ಉದಯದ ಬಗ್ಗೆ ಪುಸ್ತಕ ಬರೆಯಲು ಪ್ರಮುಖ ಭಾರತ ಸಂಜಾತ ವಿದ್ವಾಂಸರು, ರಾಜತಾಂತ್ರಿಕರು, ಉದ್ಯಮಿಗಳು ಒಗ್ಗೂಡಿದ್ದಾರೆ.
ಜನ ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಪಾಡಿಕೊಳ್ಳದಿರುವುದು ಆತಂಕಕ್ಕೆ ಕಾರಣ – ಮೋದಿ
ಈ ಬಗ್ಗೆ ಮಾತನಾಡಿರುವ ಭಾರತೀಯ ಅಮೆರಿಕನ್ ಉದ್ಯಮಿ ಎಂ.ಆರ್ ರಂಗಸ್ವಾಮಿ ಅವರು, ಕಮಲಾ ಹ್ಯಾರಿಸ್ ಅವರು ಉಪಾಧ್ಯಕ್ಷೆಯಾಗಿ ಆಯ್ಕೆಯಾದದ್ದು ಐತಿಹಾಸಿಕ ಘಳಿಗೆ. ಅವರ ಹೋರಾಟ, ಕಠಿಣ ಪರಿಶ್ರಮವನ್ನು ಈ ಲೇಖನದಲ್ಲಿ ಉಲ್ಲೇಖಿಸಲಾಗಿದೆ. ಕಮಲಾ ಹ್ಯಾರಿಸ್ ಅವರ ಕಥೆಯು ಮೊದಲ ಮತ್ತು ಎರಡನೇ ಪೀಳಿಗೆಯ ಭಾರತೀಯ ಅಮೆರಿಕನ್ನರಿಗೆ ವಿವಿಧ ಕ್ಷೇತ್ರಗಳಲ್ಲಿ ಸಾಧಿಸಲು ಸ್ಪೂರ್ತಿ ನೀಡಲಿದೆ ಎಂದು ಹೇಳಿದ್ದಾರೆ. ಅಲ್ಲದೇ ಅಮೆರಿಕದಲ್ಲಿ ಭಾರತೀಯರ ಉಗಮ, ಏಳಿಗೆಯೂ ಸ್ಪೂರ್ತಿದಾಯಕವಾಗಿದೆ ಎಂದು ಹೇಳಿದರು. ಅಂದ್ಹಾಗೆ ರಂಗಸ್ವಾಮಿ ಅವರು ‘ಕಮಲಾ ಹ್ಯಾರಿಸ್ ಆ್ಯಂಡ್ ರೈಸ್ ಆಫ್ ಇಂಡಿಯನ್ ಅಮೆರಿಕನ್ಸ್’ ಪುಸ್ತಕದ ಲೇಖಕರಲ್ಲಿ ಒಬ್ಬರು.’ಇಂಡಿಯಾಸ್ಪೋರಾದ’ ಸ್ಥಾಪಕರೂ ಆಗಿದ್ದಾರೆ.
ಡೆಲ್ಟಾ ಪ್ಲಸ್ – ಓರ್ವ ಸೋಂಕಿತ ವ್ಯಕ್ತಿಯಿಂದ ಎಷ್ಟು ಮಂದಿಗೆ ಸೋಂಕು ಹರಡಬಹುದು..?