ನಿಂಬು ಪಾನಕ ಮಾರುತ್ತಿದ್ದ ಮಹಿಳೆ ಈಗ ಪೊಲೀಸ್ ಇನ್ ಸ್ಪೆಕ್ಟರ್… ಇವರ ‘ಯಶೋಗಾಥೆ’ ನಿಜಕ್ಕೂ ಸ್ಪೂರ್ತಿದಾಯಕ
ಕೇರಳ : 18 ವರ್ಷದವರಿದ್ದಾಗಲೇ ತನ್ನ ಮನೆಯವರ ವಿರೋಧದ ನಡುವೆಯು ಪ್ರೀತಿಸಿ ಮದುವೆಯಾಗಿದ್ದ ಮಹಿಳೆಗೆ ಪತಿ ಕೈಕೊಟ್ಟಿದ್ದ.. ನಂತರ ಪುಟ್ಟ ಮಗುವಿನ ಜೊತೆಗೆ ಒಂಟಿಯಾಗಿ, ಐಸ್ ಕ್ರೀಂ ಹಾಗೂ ನಿಂಬು ಪಾನಕಗಳನ್ನ ಮಾರಾಟ ಮಾಡುತ್ತಾ ಜೀವನ ಸಾಗಿಸುತ್ತಾ ಜೀವನ ಸಾಗಿಸುತ್ತಿದ್ದ ಮಹಿಳೆ ಇಂದು ಪೊಲೀಸ್ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ..
ಜೀವನದಲ್ಲಿ ಸಾಕಷ್ಟು ಏಳು ಬೀಳುಗಳನ್ನ ಕಂಡಿರುವ ಮಹಿಳೆ ಸವಾಲುಗಳನ್ನ ಮೆಟ್ಟಿ ನಿಂತು ಇಂದು ತಮ್ಮ ಗುರಿ ತಲುಪಿದ್ದಾರೆ. ಅಂದ್ಹಾಗೆ ಇವರ ಹೆಸರು ಆನಿ ಶಿವ.. ಇವರಿಗೆ ಶುಭಾಶಯ ಕೋರಿ ಕೇರಳ ಪೊಲೀಸ್ ಇಲಾಖೆ ಟ್ವೀಟ್ ಮಾಡಿದೆ. ಇಚ್ಛಾಶಕ್ತಿ ಹಾಗೂ ಆತ್ಮವಿಶ್ವಾಸಕ್ಕೆ ಇವರು ನಿಜವಾದ ಮಾದರಿ. ಕುಟುಂಬಸ್ಥರು ಹಾಗೂ ಪತಿಯಿಂದ ತ್ಯಜಿಸಲ್ಪಟ್ಟು ಆರು ತಿಂಗಳ ಮಗುವಿನ ಜೊತೆ ಬೀದಿಗೆ ಬಂದಿದ್ದ ಈ ಯುವತಿ ಇಂದು ಪೊಲೀಸ್ ಠಾಣೆ ಸಬ್ ಇನ್ಸ್ಪೆಕ್ಟರ್ ಆಗಿದ್ದಾರೆ ಎಂದು ಬರೆದುಕೊಂಡಿದ್ದಾರೆ.
ಎಲ್ಲಾ ಅಡೆತಡೆಗಳನ್ನ ಎದುರಿಸಿ ಇದೀಗ ಆನಿ ಶಿವ ವಾರ್ಕಳ ಠಾಣೆಯಲ್ಲಿಯೇ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಆಗಿ ನೇಮಕಗೊಂಡಿದ್ದಾರೆ. ಅಲ್ಲದೇ ಕೆಲ ದಿನಗಳ ಹಿಂದಷ್ಟೇ ನನಗೆ ನಾನು ವಾರ್ಕಳ ಠಾಣೆಯಲ್ಲಿಯೇ ಸೇವೆ ಸಲ್ಲಿಸಲಿದ್ದೇನೆ ಎಂಬ ವಿಚಾರ ತಿಳಿಯಿತು. ಪುಟ್ಟ ಕಂದಮ್ಮನನ್ನ ಹಿಡಿದು ನಾನು ಕಣ್ಣೀರು ಹಾಕುತ್ತಿದ್ದ ಸ್ಥಳವಿದು ಎಂದು ಆನಿ ಶಿವಾ ಹೇಳಿಕೊಂಡಿದ್ದಾರೆ. ಈ ದಿಟ್ಟ ಮಹಿಳಾ ಅಧಿಕಾರಿಗೆ ಈಗ ನೆಟ್ಟಿಗರು ಮೆಚ್ಚುಗೆ , ಶುಭಾಶಯಗಳನ್ನ ತಿಳಿಸುತ್ತಿದ್ದಾರೆ.
‘ವಿಕ್ರಾಂತ್ ರೋಣ’ನ ಡಬ್ಬಿಂಗ್ ನಲ್ಲಿ ಬ್ಯುಸಿಯಾದ ಕಿಚ್ಚ ..!
ಹೆದರಿಸಿ ಹಣ ನೀಡದೇ ಮಟನ್ ಬಿರಿಯಾನಿ ಕಟ್ಟಿಸಿಕೊಂಡ ಪೊಲೀಸರು – VIRAL








