‘ವಿಕ್ರಾಂತ್ ರೋಣ’ನ ಡಬ್ಬಿಂಗ್ ನಲ್ಲಿ ಬ್ಯುಸಿಯಾದ ಕಿಚ್ಚ ..!
ಸದ್ಯ ಲಾಕ್ ಡೌನ್ ಸಡಿಲಿಕೆ ಬೆನ್ನಲ್ಲೇ ಚಿತ್ರಗಳ ಶೂಟಿಂಗ್ ಗೂ ಅನುಮತಿ ಸಿಕ್ಕಿದೆ.. ಈ ನಡುವೆ ಮತ್ತೊಮ್ಮೆ ಶೂಟಿಂಗ್ ಅರ್ಧಕ್ಕೆ ನಿಂತಿದ್ದ ಸಿನಿಮಾಗಳ ಕೆಲಸ ಆರಂಭಗೊಂಡಿದೆ.. ಅದ್ರಂತೆ ಬಹುನಿರೀಕ್ಷಿತ ಸ್ಯಾಂಡಲ್ ವುಡ್ ಸಿನಿಮಾವಾಗಿರುವ ಕಿಚ್ಚ ಸುದೀಪ್ ಅಭಿನಯದ ‘ವಿಕ್ರಾಂತ್ ರೋಣ’ ಸಿನಿಮಾ ಸಹ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ತೊಡಗಿದೆ.. ಚಿತ್ರೀಕರಣ ಮುಗಿದು ಸಿನಿಮಾ ರಿಲೀಸ್ ಗೆ ರೆಡಿಯಾಗ್ತಿದ್ದು, ಕಿಚ್ಚ ಸುದೀಪ್ ಅವರು ಡಬ್ಬಿಂಗ್ ಕೆಲಸ ಆರಂಭಿಸಿದ್ದಾರೆ.
ಹೌದು.. ಸಿನಿಮಾದ ಡಬ್ಬಿಂಗ್ ಕೆಲಸ ನಡೆಯುತ್ತಿದ್ದು, ಪ್ರಮುಖ ಕಲಾವಿದರು ತಮ್ಮ ಪಾತ್ರಗಳ ಧ್ವನಿಮುದ್ರಿಕೆ ಮಾಡುತ್ತಿದ್ದಾರೆ. ಇದೀಗ, ವಿಕ್ರಾಂತ್ ರೋಣ ಚಿತ್ರದ ನಾಯಕ ಕಿಚ್ಚ ಸುದೀಪ್ ಅವರು ತಮ್ಮ ಪಾತ್ರಕ್ಕೆ ಡಬ್ಬಿಂಗ್ ಶುರು ಮಾಡಿದ್ದಾರೆ. ಇದಲ್ಲದೆ ಲಾಕ್ ಡೌನ್ ನಿಂದ ಅರ್ಧಕ್ಕೆ ನಿಂತು ಹೋಗಿ ಮತ್ತೆ ಆರಂಭವಾಗಿರುವ ರಿಯಾಲಿಟಿ ಶೋ ಗು ಮತ್ತೆ ಎಂಟ್ರಿಕೊಟ್ಟು ವೀಕೆಂಡ್ ಸಂಚಿಕೆಯಲ್ಲೂ ಅಭಿಮಾನಿಗಳಿಗೆ ಮೊದಲಿನಂತೆಯೇ ದರ್ಶನ ನಿಡಿದ್ದಾರೆ.. ಶೋ ಅರ್ಧಕ್ಕೆ ನಿಂತು ಹೋಗುವ ಮೊದಲ 3 ವಾರಗಳ ಕಾಲ ಕಿಚ್ಚ ಅವರು ವೀಕೆಂಡ್ ಸಂಚಿಕೆಯಲ್ಲಿ ಅನಾರೋಗ್ಯದ ಹಿನ್ನೆಲೆ ಕಾಣಿಸಿಕೊಂಡಿರಲಿಲ್ಲ.. ಇದೀಗ ಸಂಪೂರ್ಣವಾಗಿ ಚೇತರಿಸಿಕೊಂಡು ಸಿನಿಮಾ ರಿಯಾಲಿಟಿ ಶೋಗಳಲ್ಲಿ ಮತ್ತೊಮ್ಮೆ ಬ್ಯುಸಿಯಾಗಿದ್ದಾರೆ.
ಈ ಬಗ್ಗೆ ಟ್ವಿಟ್ ಮಾಡಿರುವ ಕಿಚ್ಚ ಸುದೀಪ್ ಅವರು ‘ಬಹಳ ದಿನಗಳ ನಂತರ ಸಿನಿಮಾವೊಂದಕ್ಕೆ ನಾನು ಡಬ್ಬಿಂಗ್ ಮಾಡ್ತಿದ್ದೇನೆ. ಕೊನೆಗೂ ವಿಕ್ರಾಂತ್ ರೋಣ ಚಿತ್ರದ ನನ್ನ ಪಾತ್ರಕ್ಕೆ ಧ್ವನಿ ನೀಡಿದೆ. ತುಂಬಾ ಅದ್ಭುತವಾಗಿ ಮೂಡಿ ಬಂದಿದೆ, ನಾವು ಬಯಸಿದಂತೆ ತಯಾರಾಗಿರುವುದು ಸಂತಸ ತಂದಿದೆ’ ಎಂದು ತಿಳಿಸಿದ್ದಾರೆ.
ಇನ್ನೂ ಇತ್ತೀಚಿಗಷ್ಟೆ ನಟಿ ನೀತಾ ಅಶೋಕ್ ವಿಕ್ರಾಂತ್ ರೋಣ ಡಬ್ಬಿಂಗ್ ಮುಗಿಸಿದ್ದರು. ಇನ್ಸ್ಟಾಗ್ರಾಂನಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡು ‘ಡಬ್ಬಿಂಗ್ ವೇಳೆ ವಿಕ್ರಾಂತ್ ರೋಣ ಸಿನಿಮಾ ನೋಡಿದ ನನಗೆ ನಿರೀಕ್ಷೆ, ಉತ್ಸಾಹ, ಸಂತೋಷ, ಕುತೂಹಲ, ರೋಮಾಂಚನ ಎಲ್ಲವೂ 10,000 ಪಟ್ಟು ಹೆಚ್ಚಾಗಿದೆ. ಅನೂಪ್ ಭಂಡಾರಿ ಸರ್ ನಿಮ್ಮ ಕಲ್ಪನೆಗೆ ನನ್ನ ಸಲ್ಯೂಟ್. ಸಂಪೂರ್ಣವಾಗಿ ಸಿನಿಮಾ ನೋಡಿದ್ಮೇಲೆ ರೋಮಾಂಚನ ಉಂಟಾಗುತ್ತದೆ’ ಎಂದು ಬರೆದುಕೊಂಡಿದ್ದರು.
ಇನ್ನೂ ವಿಕ್ರಾಂತ್ ರೋಣ ಸಿನಿಮಾ ಯಾವಾಗ ರಿಲೀಸ್ ಆಗುತ್ತೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.. ಆದ್ರೆ ಅದಕ್ಕೂ ಮೊದಲು ೀಗಾಗಲೇ ಬಿಡುಗಡೆಗೆ ರೆಡಿಯಾಗಿರುವ ಕಿಚ್ಚ ಸುದೀಪ್ ಅವರ ಅಭಿನಯದ ಮತ್ತೊಂದು ಬಹುನಿರೀಕ್ಷೆಯ ಸಿನಿಮಾ ಕೋಟಿಗೊಬ್ಬ 3 ರಿಲೀಸ್ ಆಗಬೇಕಿದೆ..
ಕೊರೊನಾ , ಲಾಕ್ ಡೌನ್ ಇರಲಿಲ್ಲ ಅಂದ್ರೆ ಇಷ್ಟೊತ್ತಿಗೆ ಯಾವಾಗಲೋ ಸಿನಿಮಾ ತೆರೆಕಾಣಬೇಕಾಗಿತ್ತು.. ಈ ಸಿನಿಮಾದ ನಂತರ ವಿಕ್ರಾಂತ್ ರೋಣ ರಿಲೀಸ್ ಆಗಲಿದೆ. ಅಂದ್ಹಾಗೆ ಈ ಸಿನಿಮಾಗೆ ಮೊದಲು ‘ಪ್ಯಾಂಟಮ್’ ಎಂಬ ಟೈಟಲ್ ಇಡಲಾಗಿತ್ತು.. ನಂತರದಲ್ಲಿ ಟೈಟಲ್ ಬದಲಾಯಿಸಿ ‘ವಿಕ್ರಾಂತ್ ರೋಣ’ ೆಮದು ಮರುನಾಮಕರಣ ಮಾಡಲಾಯ್ತು..