ಶಾಕಿಂಗ್ : ಕೇರಳದಲ್ಲಿ 14 ಜನರಿಗೆ ’ಝಿಕಾ’ ವೈರಸ್ ಪತ್ತೆ
ಕೇರಳ : ಇಡೀ ವಿಶ್ವ ಹಾಗೂ ದೇಶದಲ್ಲಿ ಕೋವಿಡ್ ಹಾವಳಿ ಜೊತೆಗೆ ಬ್ಲಾಕ್ ಫಂಗಸ್ , ಹಸಿಇರು ಫಂಗಸ್ ಯೆಲ್ಲೋ ಫಂಗಸ್ ಆತಂಕದ ನಡುವೆ ಡೆಲ್ಟಾ ಹಾವಳಿ ಮಿತಿ ಮೀರುತ್ತಿದೆ.. ಕೊರೊನಾ 3ನೇ ಅಲೆಯ ಎಚ್ಚರಿಕೆ ಇದೆ.. ಈ ನಡುವೆ ಇಡೀ ವಿಶ್ವಾದ್ಯಂತ ಡೆಲ್ಟಾಗಿಂತಲೂ ಹೆಚ್ಚು ಅಪಾಯಕಾರಿ ವೈರಸ್ ಲ್ಯಾಂಡ್ಬಾ ಆತಂಕ ಶುರುವಾಗಿದೆ ಆದ್ರೆ ಭಾರತದಲ್ಲಿ ಈ ವೈರಸ್ ಇನ್ನೂ ಪತ್ತೆಯಾಗಿಲ್ಲ.. ಆದ್ರೆ ಎಚ್ಚರಿಕೆ ವಹಿಸಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ.
ಇದೆಲ್ಲದರ ಆತಂಕದ ನಡುವೆ ಇದೀಗ ಹೊಸ ಭೀತಿ ಎದುರಾಗಿದೆ.. ಹೌದು ಈಗ ಝಿಕಾ ವೈರಸ್ನ ಆತಂಕ ಶುರುವಾಗಿದೆ. ಕೇರಳದಲ್ಲಿ 14 ಮಂದಿಗೆ ಝಿಕಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಇತ್ತೀಚೆಗೆ ಗರ್ಭಿಣಿಯೊಬ್ಬರಲ್ಲಿ ಸೋಂಕು ದೃಢಪಟ್ಟಿತ್ತು. ಇದೀಗ, ಇನ್ನೂ 13 ಮಂದಿಗೆ ಸೋಂಕು ತಗುಲಿರುವುದನ್ನು ಪುಣೆಯ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ ಖಚಿತಪಡಿಸಿದೆ.
ಅಮೆರಿಕಾದಲ್ಲಿ 150 ದಿನದಲ್ಲಿ 300 ಮಿಲಿಯನ್ ಡೋಸ್ ಲಸಿಕೆ ಹಂಚಿಕೆ
ಈ ಹಿನ್ನೆಲೆಯಲ್ಲಿ ಕೇರಳ ರಾಜ್ಯದಲ್ಲಿ ಹೈಅಲರ್ಟ್ ಘೋಷಿಸಲಾಗಿದೆ. 24 ವರ್ಷದ ಗರ್ಭಿಣೆಗೆ ಸೋಂಕು ತಗುಲಿರುವುದು ದೃಢಪಡುವ ಮೂಲಕ ಕೇರಳದಲ್ಲಿ ಮೊದಲ ಪ್ರಕರಣ ದಾಖಲಾಗಿತ್ತು. ಆ ಬಳಿಕ ಇಬ್ಬರು ವೈದ್ಯರು ಸೇರಿ 13 ಮಂದಿಯ ಪ್ರಯೋಗಾಲಯದ ಮಾದರಿಯನ್ನು ಪುಣೆಯ ಎನ್ಐವಿಗೆ ಕಳುಹಿಸಲಾಗಿತ್ತು. ಇದೀಗ, ಆ 13 ಮಂದಿಯಲ್ಲೂ ಸೋಂಕು ದೃಢಪಟ್ಟಿದೆ ಎಂದು ಕೇರಳ ಸರ್ಕಾರ ತಿಳಿಸಿದೆ.
ಜ್ವರ, ದದ್ದುಗಳು ಮತ್ತು ಕೀಲು ನೋವು ಮುಂತಾದ ಝಿಕಾ ವೈರಸ್ನ ರೋಗಲಕ್ಷಣಗಳು ಡೆಂಗ್ಯೂಗೆ ಹೋಲುತ್ತವೆ. ಝಿಕಾ ಹರಡುವಿಕೆಯನ್ನು ನಿಯಂತ್ರಿಸಲು ಕ್ರಿಯಾ ಯೋಜನೆಯನ್ನು ರೂಪಿಸಲಾಗಿದೆ ಎಂದು ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ.
ಕೊರೊನಾ ರಿಪೋರ್ಟ್ : ನಿನ್ನೆ 43,393 ಮಂದಿಗೆ ಸೋಂಕು
ಕೇರಳ – ಡೆಲ್ಟಾ ಬೆನ್ನಲ್ಲೇ ಜಿಕಾ ವೈರಸ್ ಆತಂಕ – ಏನಿದು ಜಿಕಾ ವೈರಸ್? ಏನಿದರ ಲಕ್ಷಣ?