“ರಾತ್ರಿ ಓಡಾಡುವ ಮಹಿಳೆಯರು ವೇಶ್ಯೆಯರು, ಅತ್ಯಾಚಾರಕ್ಕೆ ಅರ್ಹರು” – ಯುವತಿಯ ಅತ್ಯಾಚಾರ, ಕೊಲೆ ಸಮರ್ಥಿಸಿಕೊಂಡ ಕೇರಳದ ಪಾದ್ರಿ!
ಕೇರಳ : ಕೇರಳದ ವಿವಾದಾತ್ಮಕ ಇಸ್ಲಾಮಿಕ್ ಪಾದ್ರಿಯೊಬ್ಬರು ಮಹಿಳೆಯರು , ಅತ್ಯಾಚಾರ ಪ್ರಕರಣದ ಕುರಿತಾಗಿ ವಿವಾದಾತ್ಮಕ ಹೇಳಿಕೆ ನೀಡಿದ್ದು, ನೆಟ್ಟಿಗರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಈ ಪಾದ್ರಿ ಪದೇ ಪದೇ ಮಹಿಳೆಯರ ಕುರಿತಾಗಿ ವಿವಾದಾತ್ಮಕ ಹೇಳಿಕೆಗಳನ್ನ ನೀಡುತ್ತಲೇ ಇರುತ್ತಾರೆ.. ಇದೀಗ ರಾತ್ರಿ 9 ಗಂಟೆಯ ಮನೆಯಿಂದ ಹೊರಗೆ ಹೋಗುವ ಮಹಿಳೆಯರು ವೇಶ್ಯೆಯರು, ಅವರು ಅತ್ಯಾಚಾರಕ್ಕೆ ಮಾತ್ರವಲ್ಲದೇ ಕೊಲೆಯಾಗಲು ಕೂಡ ಅರ್ಹರು ಎಂದಿದ್ದಾರೆ. ಕೇರಳದ ಪ್ರಸಿದ್ಧ ಧರ್ಮಗುರು ಎನ್ನಲಾಗಿರುವ ಮೌಲಾನಾ ಸ್ವಾಲಿಹ್ ಬಾಥೆರಿಯ ಈ ಹೇಳಿಕೆ ಇದೀಗ ಬಾರೀ ವಿವಾದ ಸೃಷ್ಟಿಸಿದೆ. ಅತ್ಯಾಚಾರದ ಕುರಿತಂತೆ ಈ ಪಾದ್ರಿ ಹೇಳಿಕೆ ನೀಡಿರುವ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ನೆಟ್ಟಿಗರನ್ನ ಕೆರಳಿಸಿದೆ. ಈ ಪಾದ್ರಿ ಹಚಿನ್ಸನ್-ಗಿಲ್ಫೋರ್ಡ್ ಪ್ರೊಜೆರಿಯಾ ಸಿಂಡ್ರೋಮ್ ಎಂಬ ಸಮಸ್ಯೆಯಿಂದ ಬಳಲುತ್ತಿದ್ದು, ಇದೇ ಕಾರಣಕ್ಕೆ 27ನೇ ವಯಸ್ಸಿನಲ್ಲೂ ಬಾಲಕನ ಥರ ಕಾಣಿಸುತ್ತಾರೆ.
ಜೋಕಾಲಿಯಿಂದ 6,300 ಅಡಿ ಕೆಳಗೆ ಬಿದ್ದ ಮಹಿಳೆಯರು – VIDEO VIRAL
ಅಂದ್ಹಾಗೆ ಈ ಧರ್ಮಗುರು 2011 ರಲ್ಲಿ ಯುವತಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿದ್ದ ಪ್ರಕರಣವನ್ನ ಸಮರ್ಥಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ ಈ ಪ್ರಕರಣದಲ್ಲಿ ಅಪರಾಧಿಯ ವಿರುದ್ಧ ನ್ಯಾಯಾಲಯ ನೀಡಿದ್ದ ತೀರ್ಪನ್ನು ಟೀಕಿಸಿರುವ ಇವರು ಯುವತಿ ರಾತ್ರಿ ವೇಳೆ ಪ್ರಯಾಣಿಸುತ್ತಿದ್ದ ಕಾರಣ ಆರೋಪಿ ಗೋವಿಂದಚಾಮಿ ಅತ್ಯಾಚಾರ ಮಾಡಿದ್ದಾನೆ. ಇದು ಸರಿಯಾಗಿದೆ. ರಾತ್ರಿ ತಿರುಗಾಡುವ ಪ್ರತಿ ಹುಡುಗಿಯೂ ವೇಶ್ಯೆಯೇ ಎಂದಿದ್ದಾರೆ.
ಎರ್ನಾಕುಲಂನ ಮಾಲ್ ನಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಮನೆಗೆ ರೈಲಿನಲ್ಲಿ ಹೋಗುತ್ತಿದ್ದ ವೇಳೆ ಆಕೆಯ ಮೇಲೆ ಅತ್ಯಾಚಾರ ನಡೆದಿತ್ತು. ಆಗ ಭಯದಲ್ಲಿ ಯುವತಿ ರೈಲಿನಿಂದ ಕೆಳಕ್ಕೆ ಜಿಗಿದಿದ್ದಳು, ನಂತರ ಈತನೂ ಕೂಡ ಆಕೆಯ ಹಿಂದೆ ಜಿಗಿದು ಕಲ್ಲಿನಿಂದ ಹೊಡೆದು ಅತ್ಯಾಚಾರ ಮಾಡಿದ್ದ. ಈ ಭೀಕರ ಘಟನೆ ನಡೆದ 5 ದಿನಗಳ ನಂತರ ಯುವತಿ ಮೃತಪಟ್ಟಿದ್ದಳು. 2016 ರಲ್ಲಿ ಗೋವಿಂದಚಾಮಿಗೆ ಮರಣದಂಡನೆಯಾಗಿತ್ತು. ಆದರೆ ಸೂಕ್ತ ಸಾಕ್ಷಾಧಾರಗಳ ಕೊರತೆಯಿಂದ ಕೋರ್ಟ್ ಈ ಶಿಕ್ಷೆಯನ್ನು 7 ವರ್ಷಗಳ ಜೈಲು ಶಿಕ್ಷೆಗೆ ಇಳಿಸಿತ್ತು.