ಜೋಕಾಲಿಯಿಂದ 6,300 ಅಡಿ ಕೆಳಗೆ ಬಿದ್ದ ಮಹಿಳೆಯರು – VIDEO VIRAL
ರಷ್ಯಾ : ತುಂಬಾ ಜನರಿಗೆ ಅಡ್ವೆಂಚರಸ್ ಹುಚ್ಚು ಇರುತ್ತೆ… ಕೆಲವೊಮ್ಮೆ ಇದೇ ಹುಚ್ಚಿನಿಂದ ಜೀವಕ್ಕೆ ಕುತ್ತು ತಂದುಕೊಳ್ಳುವಂತಹ ಸಾಹಸಕ್ಕೂ ಕೈಹಾಕುತ್ತಾರೆ.. ಇದೀಗ ರಷ್ಯಾದ ಮಾಸ್ಕೋದಲ್ಲಿ ನಡೆದಿರುವ ಒಂದು ಘಟನೆ ನೆಟ್ಟಿಗರನ್ನ ಬೆಚ್ಚಿಬೀಳಿಸಿದೆ..
ಅತಿ ಎತ್ತರದಲ್ಲಿ ಕೆಳಗಡೆ ಪ್ರಪಾತದ ನಟ್ಟ ನಡುವೆ ಕಟ್ಟಲಾಗಿದ್ದ ಜೋಕಾಲಿಯಾಲಿಯಾಡುತ್ತಿದ್ದವರು ಏಕಾಏಕಿ ಕೆಳಗೆ ಬಿದ್ದಿದ್ದಾರೆ.. ಕ್ಷಣಮಾತ್ರದಲ್ಲಿ ಅಲ್ಲಿ ಜೋಷ್ ನಲ್ಲಿ ಖುಷಿಖುಷಿಯಾಗಿದ್ದವರ ಎದೆ ಝಲ್ ಎಂದಿದೆ.. ಮಹಿಳೆಯರಿಬ್ಬರು ಬೆಟ್ಟದ ಮೇಲ್ಭಾಗದಿಂದ ಜೋಕಾಲಿಯಿಂದ ಕೆಳಗೆ ಬಿದ್ದಿದ್ದಾರೆ.. ಈ ಅಪಾಯಕಾರಿ ವೀಡಿಯೋಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
https://twitter.com/Random_Uncle_UK/status/1415209072090042372
ಈ ಘಟನೆ ರಷ್ಯಾದ ರಿಪಬ್ಲಿಕ್ ಆಫ್ ಡಾಗೆಸ್ತಾನ್‍ನ ಸುಲಕ್ ಕ್ಯಾನ್ಯನ್ ನಲ್ಲಿ ನಡೆದಿದ್ದು, ವೀಡಿಯೋದಲ್ಲಿ ಇಬ್ಬರು ಮಹಿಳೆಯರು ಬೆಟ್ಟದ ತುದಿಯಲ್ಲಿ ಜೋಕಾಲಿಯಾಡುತ್ತಿರುವುದನ್ನು ಕಾಣಬಹುದಾಗಿದೆ. ಇಬ್ಬರು ಮಹಿಳೆಯರು ಜೋಕಾಲಿ ಆಡಬೇಕೆಂದು ನಿರ್ಧರಿಸಿ ಜೋಕಾಲಿ ಮೇಲೆ ಕುಳಿತುಕೊಂಡಾಗ ಹಿಂದಿನಿಂದ ವ್ಯಕ್ತಿಯೊಬ್ಬರು ಜೋಕಾಲಿಯನ್ನು ತಳ್ಳುತ್ತಿರುತ್ತಾರೆ. ಈ ವೇಳೆ ಇದ್ದಕ್ಕಿದಂತೆ ಜೋಕಾಲಿ ತಿರುಗಿ ಇಬ್ಬರು 6,300 ಅಡಿಯಿಂದ ಕೆಳಗೆ ಬಿದ್ದಿದ್ದಾರೆ. ಆದ್ರೆ ಪವಾಡವೆಂಬಂತೆ ಇವರಿಬ್ಬರಿಗೂ ಕೇವಲ ಸಣ್ಣ-ಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.