PFI ಮೇಲೆ NIA ದಾಳಿ ಹಿನ್ನಲೆ – ಕೇರಳದಲ್ಲಿ ಪ್ರತಿಭಟನೆ ಕಲ್ಲು ತೂರಾಟ ..
PFI ಸಂಘಟನೆಯ ಮೇಲೆ ರಾಷ್ಟ್ರೀಯ ತನಿಖಾ ದಳ ಅತಿ ದೊಡ್ದ ದಾಳಿ ನಡೆಸಿದ್ದ ನಂತರ ಇಂದು ಕೇರಳದಲ್ಲಿ ಪಿಎಫ್ ಐ ಕಾರ್ಯಕರ್ತರಿಂದ ಬಂದ್ ಪ್ರತಿಭಟನೆಗಳು ನಡೆಯುತ್ತಿದ್ದು. ಪೊಲೀಸರು ಮತ್ತು ಕೇರಳ ಸಾರಿಗೆ ಮೇಲೆ ಕಲ್ಲು ತೂರಟಗಳು ವರದಿಯಾಗಿವೆ.
ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ನಿನ್ನೆ ರಾಷ್ಟ್ರೀಯ ಕಾರ್ಯಾಚರಣೆಗಳಲ್ಲಿ ಪಿಎಫ್ಐ ಸದಸ್ಯರನ್ನು ಬಂಧಿಸಿರುವುದನ್ನು ವಿರೋಧಿಸಿ ಪ್ರತಿಭಟನೆಯ ರೂಪವಾಗಿ ಕೇರಳದಲ್ಲಿ ಎಲ್ಲಾ ಸರ್ಕಾರಿ ಸೇವೆಗಳನ್ನು ಸ್ಥಗಿತಗೊಳಿಸುವಂತೆ ಪಿಎಫ್ಐ ಕರೆ ನೀಡಿದೆ. ಇಂದು ಬೆಳಿಗ್ಗೆ ಆರು ಗಂಟೆಗಳಿಂದ ಪ್ರತಿಭಟನೆ ಪ್ರಾರಂಭವಾಗಿ ಸಂಜೆ ಆರು ಗಂಟೆಯವರೆಗೆ ಮುಷ್ಕರ್ ನಡೆಯಲಿದೆ.
ರಾಜ್ಯದ ಹಲವೆಡೆ ಕಲ್ಲು ತೂರಾಟದ ಘಟನೆಗಳು ವರದಿಯಾಗಿದ್ದೂ ಇಂದು ಮುಂಜಾನೆ ಕೊಲ್ಲಂ ಜಿಲ್ಲೆಯ ಪಲ್ಲಿಮುಕ್ಕು ಪ್ರದೇಶದಲ್ಲಿ ಪ್ರತಿಭಟನಾಕಾರರು ಇಬ್ಬರು ಪೊಲೀಸ್ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಕೋಝಿಕ್ಕೋಡ್, ಕೊಚ್ಚಿ, ಅಲಪ್ಪುಳ ಮತ್ತು ಕೊಲ್ಲಂನಲ್ಲಿ ಕೇರಳ ಕೆಎಸ್ಆರ್ಟಿಸಿ ಬಸ್ಗಳ ಮೇಲೆ ದಾಳಿ ನಡೆದಿದೆ.
ಆಂಟನಿ ಮತ್ತು ನಿಖಿಲ್ ಎಂಬ ಇಬ್ಬರು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಶಂಕಿತರ ಬೈಕ್ ನಂಬರ್ ದಾಖಲಿಸಿಕೊಂಡಿದ್ದು, ಶೀಘ್ರದಲ್ಲೇ ಅವರನ್ನು ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ.