ಅತ್ಯಾಚಾರ , ಕೊಲೆ ಪ್ರಕರಣದ ಸಂತ್ರಸ್ತರ ತಾಯಿ ಕೇರಳ ಸಿಎಂ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧೆ..!
2017ರಲ್ಲಿ ನಡೆದಿದ್ದ ವಾಲಯಾರ್ ಅತ್ಯಾಚಾರ ಪ್ರಕರಣದ ಸಂತ್ರಸ್ತರ ತಾಯಿ ಇದೀಗ ಕೇರಳದ ಸಿಎಂ ವಿರುದ್ಧ ವಿಧಾಸಭಾ ಚುನಾವಣೆಯಲ್ಲಿ ಹೋರಾಡಲು ಅಖಾಡಕ್ಕೆ ಇಳಿದಿದ್ದಾರೆ. 2017ರಲ್ಲಿ ಇಬ್ಬರು ದಲಿತ ಸಹೋದರಿಯರನ್ನ ಅತ್ಯಾಚಾರಗೈದು ಹತ್ಯೆ ಮಾಡಲಾಗಿತ್ತು. ಇದೀಗ ಅವರ ತಾಯಿ ಈ ಬಾರಿಯ ವಿಧಾನಸಬಾ ಚುನಾವಣೆಯಲ್ಲಿ ಪಿಣರಾಯಿ ವಿಜಯನ್ ವಿರುದ್ಧ ಹೋರಾಡಲು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಾರೆ. ಧರ್ಮಾಡಾಮ್ ನಲ್ಲಿ ಪಿಣರಾಯಿ ವಿಜಯನ್ ವಿರುದ್ಧ ಹೋರಾಟ ನಡೆಸಲಿದ್ದಾರೆ.
ಪ್ರಕರಣದ ಹಿನ್ನೆಲೆ
ಕೇರಳದ ಪಾಲಕ್ಕಾಡ್ ನಲ್ಲಿನ ವಲಯಾರ್ ನಲ್ಲಿ ಕಟ್ಟಡ ಕಾರ್ಮಿಕರ ಇಬ್ಬರು ಹೆಣ್ಣು ಮಕ್ಕಳು ನಿಗೂಢ ರೀತಿ ಸಾವಿಗೀಡಾಗಿದ್ದರು. 2017ರ ಜನವರಿ 13ರಂದು 13 ವರ್ಷದ ಬಾಲಕಿಯ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಅದಾದ 2 ತಿಂಗಳ ನಂತರ ಮೃತ ಬಾಲಕಿ ಸಹೋದರಿಯೂ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಆದ್ರೆ ಇದು ಆತ್ಮಹತ್ಯೆ ಅಲ್ಲ ಕೊಲೆ ಎಂಬ ಆರೋಪಗಳು ಕೇಳಿಬಂದಿದ್ದವು. ವಲಯಾರ್ ಸಹೋದರಿಯರ ಹತ್ಯೆ ಖಂಡಿಸಿ ಪ್ರತಿಭಟನೆ ನಡೆದಿದ್ದವು.
ಅತ್ಯಾಚಾರ ಸಂತ್ರಸ್ತೆಗೆ ವಿಷಪ್ರಾಶನ : ಉತ್ತರಪ್ರದೇಶದಲ್ಲಿ ಮತ್ತೊಂದು ಘೋರ..!
ಆದ್ರೆ ಈ ಪ್ರಕರಣ ತನಿಖೆ ಸೂಕ್ತವಾಗಿ ನಡೆಸಲಿಲ್ಲ. ಎಲ್ಲೋ ಒಂದ್ ಕಡೆ ಸರಿಯಾಗಿ ಪೊಲೀಸರು ತನಿಖೆ ನಡೆಸದೇ ಇರುವುದಕ್ಕೆ ಕೇರಳ ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರದ ಕೈವಾಡವಿದೆ ಎಂದು ಆರೋಪ ಮಾಡಿದ್ದಾರೆ. ಅಷ್ಟೇ ಅಲ್ಲ ಇತ್ತೀಚೆಗೆ ಸಂತ್ರಸ್ತೆಯರ ತಾಯಿ ತಲೆ ಬೋಳಿಸಿ ಅತ್ಯಾಗ್ರವನ್ನೂ ಮಾಡಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದರು.
15 ವರ್ಷದ ಬಾಲಕಿಯ ಮೇಲೆ 2 ವಾರ ಸಾಮೂಹಿಕ ಅತ್ಯಾಚಾರ : 20 ಜನರ ಬಂಧನ
ಇದೀಗ ಕಣ್ಣೂರು ಜಿಲ್ಲೆಯ ಧರ್ಮದಂ ವಿಧಾನಸಭಾ ಕ್ಷೇತ್ರದಿಂದ ತಾವು ಕಣಕ್ಕಿಳಿಯಲಿದ್ದು, ತಮ್ಮ ಮಕ್ಕಳಿಗೆ ನ್ಯಾಯ ದೊರೆಯದ ಕಾರಣ ಪ್ರತಿಭಟನಾ ರೂಪದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಣೆ ಮಾಡಿದ್ದಾರೆ.
ಅಲ್ಲದೇ ನನಗೆ ಯಾವುದೇ ಸಂಘ ಪರಿವಾರ, ಪಕ್ಷಗಳ ಬೆಂಬಲ ಬೇಡ. ನನ್ನ ಮಕ್ಕಳಿಗೆ ನ್ಯಾಯ ಸಿಗಬೇಕು. ನನ್ನಂತೆ ಇರುವ ಎಷ್ಟೋ ಕುಟುಂಬಗಳ ಪರವಾಗಿ ಸ್ಪರ್ಧಿಸುತ್ತಿದ್ದೇನೆ. ವಲಯಾರ್ ಸಮರ ಸಮಿತಿ ಪ್ರತಿನಿಧಿಯಾಗಿ ಸ್ವತಂತ್ರವಾಗಿ ಕಣಕ್ಕಿಳಿಯಲಿದ್ದೇನೆ. ಈ ಮೂಲಕ ಮುಖ್ಯಮಂತ್ರಿಗಳ ಮುಂದೆ ನ್ಯಾಯ ಕೇಳುತ್ತಿದ್ದೇನೆ ಎಂದು ಹೇಳಿದ್ದಾರೆ.