Kerala Viral : 2 ದಿನಗಳ ಕಾಲ ಬೆಟ್ಟದ ಇಳಿಜಾರಿನ ಬಂಡೆಯಲ್ಲಿ ಸಿಲುಕಿ , ಅನ್ನ ನೀರಿಲ್ಲದೇ ಪರದಾಡಿದ ಯುವಕನ ರಕ್ಷಣೆ ಮಾಡಿದ ಸೇನೆ,,,, ರೋಚಕ,,,,
ಕೇರಳ : ಚಾರಣಕ್ಕೆ ತೆರಳಿದ್ದ ಯುವಕನೊಬ್ಬ ಬೆಟ್ಟದಿಂದ ಕಾಲು ಜಾರಿ ಬಿದ್ದಿದ್ದ.. ಆದ್ರೆ ಈತನ ಅದೃಷ್ಟ ಚನಾಗಿತ್ತು… ಈತ ಬೆಟ್ಟದ ಬಂಡೆಯ ಸೀಳಿನಲ್ಲಿ ಸಿಲುಕಿ 43 ಗಂಟೆಗಳ ಕಾಲ ಸುಡವ ಬಂಡೆಯ ಮೇಲೆ ಇಕ್ಕಟ್ಟಿನ ಸ್ಥಲದಲ್ಲೇ ಅನ್ನ ನೀರಿಲ್ಲದೇ ಪರದಾಡಿದ್ದ..
Crime: ಪ್ರಿಯಕರನಿಗಾಗಿ 5 ಜನರನ್ನು ಕೊಲೆ ಮಾಡಿದ ಹಂತಕಿ ಅಂದರ್
23 ವರ್ಷದ ಬಾಬುವನ್ನ ಇದೀಗ ಸೇನಾ ತಂಡ ಕಾಪಾಡಿದೆ.. ಇಂತಹ ಸಿನಿಮೀಯ ಘಟನೆ ನಡೆದಿರುವುದು ಕೇರಳದ ಪಲಕ್ಕಾಡ್ ಜಿಲ್ಲೆಯ ಕುರುಂಬಚಿ ಎಂಬ ಸ್ಥಳದಲ್ಲಿ..
ಫೆಬ್ರವರಿ 7ರಂದು ಬೆಳಗ್ಗೆ 7 ಗಂಟೆಗೆ ಬಾಬು ಹಾಗೂ ಅವನ ಮೂವರು ಸ್ನೇಹಿತರು ಟ್ರಿಕ್ಕಿಂಗ್ ಗೆ ತೆರಳಿದ್ದರು. ಬೆಟ್ಟ ಹತ್ತಿ ನಾಲ್ಕೂ ಜನ ಸ್ನೇಹಿತರು ಹಿಂತಿರುಗುವಾಗ ಬಾಬು ಕಾಲು ಜಾರಿ ಕೆಳಗೆ ಬಿದ್ದಿದ್ದ. ಆದ್ರೆ ಅದೃಷ್ಟವಶಾತ್, ಬೆಟ್ಟದ ಇಳಿಜಾರಿನಲ್ಲಿ ಇದ್ದ ಒಂದು ಸಂದಿಯೊಳಗೆ ಬಾಬು ಸಿಕ್ಕಿ ಹಾಕಿಕೊಂಡಿದ್ದ.
National: ಬಿಕಿನಿ, ಘೂಂಗ್‌ಹಟ್, ಒಂದು ಜೋಡಿ ಜೀನ್ಸ್ ಅಥವಾ ಹಿಜಾಬ್ ಧರಿಸುವ ಹಕ್ಕು ಮಹಿಳೆಗೆ ಇದೆ: ಪ್ರಿಯಂಕಾ ಗಾಂಧಿ
ಬಾಬು ಸಿಲುಕಿಕೊಂಡಿದ್ದನ್ನ ನೋಡಿದ ಆತನ ಸ್ನೇಹಿತರು ತಮ್ಮಿಂದ ನೆಲ್ಲಾ ಸಾಧ್ಯವೋ ಅವೆಲ್ಲಾ ಪ್ರಯತ್ನ ಮಾಡಿದ್ದಾರೆ.. ಸ್ಥಳೀಯರ ನೆರವು ಪಡೆದರೂ , ಏನೇ ಮಾಡಿದರು ಬಾಬುಗೆ ಸಹಾಯ ಮಾಡಲು ಸಾಧ್ಯವಾಗಲಿಲ್ಲ..
ಗ್ರಾಮದ ಜನರು ಹಾಗೂ ಪೊಲೀಸರಿಗೆ ಮಾಹಿತಿ ನೀಡಿದರು. ಮಾಹಿತಿ ಪಡೆದ ಮಾಲಂಪುಳ ಪೊಲೀಸರು ನಿಗದಿತ ಸ್ಥಳಕ್ಕೆ ಬಂದರೂ , ಮಧ್ಯರಾತ್ರಿಯಾಗಿದ್ದರಿಂದ ರಕ್ಷಿಸುವ ಕಾರ್ಯಾಚರಣೆ ಕೈಗೊಳ್ಳಲು ಸಾಧ್ಯವಾಗಲಿಲ್ಲ. ಬೆಳಗ್ಗೆ ಬೆಳಕು ಹರಿಯುತ್ತಿದ್ದಂತೆಯೇ ರಕ್ಷಣಾ ಕಾರ್ಯಾಚರಣೆಯನ್ನು ಕೈಗೆತ್ತಿಕೊಳ್ಳಲಾಯಿತು.
For the past 26 hours and counting, rescue officials are in #Kerala trying to get to this 23-year-old trekker stuck in a cavity on the side of a hill. So far, they haven't been able to reach him. Kerala CM has now asked Indian Army for help. pic.twitter.com/tOf7dBKfCQ
— Sanyukta (@dramadhikari) February 8, 2022
ಬಳಿಕ ಡ್ರೋನ್ ಸಹಾಯದಿಂದ ಬಾಬು ಇರುವ ಸ್ಥಳ ಪತ್ತೆ ಹಚ್ಚಲಾಯಿತು. ನಂತರವೇ ಕೊಚ್ಚಿ ನಗರ ಕೋಸ್ಟ್ ಗಾರ್ಡ್ ಹೆಲಿಕಾಪ್ಟರ್ ನ ಸಹಾಯದ ಮೊರೆ ಹೋಗಲಾಯಿತಾದರೂ , ಹೆಲಿಕಾಪ್ಟರ್ ಬಂದರೂ ಬೆಟ್ಟದಲ್ಲಿ ಬಾಬು ಸಿಲುಕಿದ್ದ ಸ್ಥಳಕ್ಕೆ ಹೋಗಲು ಸಾಧ್ಯವಾಗಿರಲಿಲ್ಲ.. ನಂತರ ಪಾಲಕ್ಕಾಡ್ ಕಮಿಷನರ್ ಮೃನ್ಮಯಿ ಜೋಶಿ ಶಶಾಂಕ್ ಅವರು ನೌಕಾದಳ ಹೆಲಿಕಾಪ್ಟರ್ ಸಹಾಯ ಕೋರಿದರು.
Hijab | ಕೋಮುಸಂಘರ್ಷ ಹುಟ್ಟುಹಾಕುತ್ತಿರುವವರ ವಿರುದ್ಧ ಕ್ರಮಕ್ಕೆ ಸಿದ್ದು ಆಗ್ರಹ
ನೇವಿ ಹೆಲಿಕಾಪ್ಟರ್ ಸ್ಥಳಕ್ಕೆ ಬಂದು ಬಾಬು ಸಿಲುಕಿರಬಹುದಾದ ಸ್ಥಳಕ್ಕೆ ಹಗ್ಗವನ್ನು ಜೋತು ಬಿಟ್ಟು ಅದರಿಂದ ಬಾಬುನನ್ನು ಕಾಪಾಡಲು ಪ್ರಯತ್ನಿಸಿದರೂ ಆ ಪ್ರಯತ್ನವೂ ಸಫಲವಾಗಲಿಲ್ಲ.. ಕೊನೆಗೆ ಈ ಬಗ್ಗೆ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಮಾಹಿತಿ ತಿಳಿಸಿ ಭಾರತೀಯ ಸೇನೆಯ ಸಹಾಯ ಕೋರಿದರು.
ಅದಾದ ನಂತರ ಸ್ಥಳಕ್ಕೆ ಆಗಮಿಸಿದ ಸೇನಾ ತಂಡ ಕಡೆಗೂ ಬಾಬುವನ್ನ ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದೆ.. ಈ ಸಿನಿಮಾನಿ ಘಟನೆಯ ವಿಡಿಯೋ , ಫೋಟೋಗಳು ಸೋಷಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ..








