Kerala: ಅದಾನಿ ಬಂದರು ವಿರೋಧಿಸಿ ಪೊಲೀಸ್ ಠಾಣೆ ಮೇಲೆ ದಾಳಿ – 36 ಪೊಲೀಸರಿಗೆ ಗಾಯ…
ಕೇರಳದಲ್ಲಿ ಅದಾನಿ ಬಂದರು ನಿರ್ಮಾಣ ವಿರೋಧಿಸಿ ನಡೆದ ಪ್ರತಿಭಟನೆ ಹಿಂಸಾತ್ಮಕ ಸ್ವರೂಪ ಪಡೆದುಕೊಂಡಿದೆ. ಭಾನುವಾರ ರಾತ್ರಿ ವಿಜಿಂಜಂ ಪೊಲೀಸ್ ಠಾಣೆ ಮೇಲೆ ಪ್ರತಿಭಟನಾಕಾರರು ದಾಳಿ ನಡೆಸಿದ್ದಾರೆ. ಗಲಭೆಯಲ್ಲಿ 36 ಪೊಲೀಸರು ಗಂಭೀರವಾಗಿ ಗಾಯಗೊಂಡಿದ್ದಾರೆ. ಎಲ್ಲರೂ ಸ್ಥಳಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ವಿಝಿಂಜಂನಲ್ಲಿರುವ ಸ್ಥಳಿಯತು ಅದಾನಿ ಬಂದರು ನಿರ್ಮಾಣ ವಿರುದ್ಧ ನಿಂತಿದ್ದು, ಇದನ್ನು ವಿರೋಧಿಸಿ 120 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಭಾನುವಾರ ಪೊಲೀಸರು 5 ಪ್ರತಿಭಟನಾಕಾರರನ್ನ ಬಂಧಿಸಿದ ಬಳಿಕ ಆಕ್ರೋಶಗೊಂಡ ಜನರು ಠಾಣೆ ಮೇಲೆ ದಾಳಿ ನಡೆಸುತ್ತಿದ್ದಾರೆ.
ಉದ್ರಿಗ್ತಗೊಂಡ ಜನಸಮೂಹವು ಪೊಲೀಸರ ಮೇಲೆ ದೊಣ್ಣೆ ಮತ್ತು ಕಲ್ಲುಗಳಿಂದ ಹಲ್ಲೆ ನಡೆಸಿದೆ. ಪೊಲೀಸ್ ವಾಹನಗಳಿಗೆ ಬೆಂಕಿ ಹಚ್ಚಿದ್ದರಿಂದ 4 ಪೊಲೀಸ್ ಜೀಪುಗಳು, 2 ವ್ಯಾನ್ಗಳು ಮತ್ತು 20 ದ್ವಿಚಕ್ರ ವಾಹನಗಳು ಜಖಂಗೊಂಡಿವೆ. ಪೊಲೀಸ್ ಠಾಣೆಯಲ್ಲಿ ಪೀಠೋಪಕರಣಗಳು ಮತ್ತು ಪ್ರಮುಖ ದಾಖಲೆಗಳನ್ನು ಸಹ ನಾಶಪಡಿಸಲಾಗಿದೆ.
ಪೊಲೀಸ್ ಠಾಣೆ ಮೇಲೆ ದಾಳಿ ನಡೆದ ನಂತರ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಪ್ರದೇಶದಲ್ಲಿ 200 ಹೆಚ್ಚುವರಿ ಪೊಲೀಸರನ್ನು ಇಲಾಖೆ ನಿಯೋಜಿಸಿದೆ.
ಇಡೀ ಘಟನೆಗೆ ಕಾರಣ…
ವಿಝಿಂಜಂನ ಜನರು ಅದಾನಿ ಬಂದರು ನಿರ್ಮಾಣವನ್ನು ನಿಲ್ಲಿಸಲು ಮತ್ತು ಕರಾವಳಿ ಸವೆತದ ಅಧ್ಯಯನವನ್ನು ಒತ್ತಾಯಿಸುತ್ತಿದ್ದಾರೆ. ಇವರಲ್ಲಿ ಸ್ಥಳೀಯ ನಿವಾಸಿಗಳು, ಮೀನುಗಾರರು ಮತ್ತು ಲ್ಯಾಟಿನ್ ಕ್ಯಾಥೋಲಿಕ್ ಡಯಾಸಿಸ್ನ ಸದಸ್ಯರು ಸೇರಿದ್ದಾರೆ. 120 ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಹಿಂಸಾಚಾರವೂ ನಡೆಯಿತು. ಇದಕ್ಕಾಗಿ ಭಾನುವಾರವೇ ವಿಝಿಂಜಂ ಪೊಲೀಸರು ಲ್ಯಾಟಿನ್ ಆರ್ಚ್ ಬಿಷಪ್ ಥಾಮಸ್ ಜೆ ನೆಟ್ಟೊ ಮತ್ತು ಇತರ ಪಾದ್ರಿಗಳು ಸೇರಿದಂತೆ 50 ಪ್ರತಿಭಟನಾಕಾರರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಎಫ್ಐಆರ್ನಲ್ಲಿ ಸಂಚು ರೂಪಿಸಿ ಹಿಂಸಾಚಾರದಲ್ಲಿ ಭಾಗಿಯಾಗಿರುವ ಬಗ್ಗೆ ಹೇಳಲಾಗಿದೆ. ಇದಾದ ಬಳಿಕ ಪೊಲೀಸರು 5 ಮಂದಿಯನ್ನು ಬಂಧಿಸಿದ್ದು, ಹಿಂಸಾಚಾರ ಭುಗಿಲೆದ್ದಿದೆ.
Kerala: Vizhinjam Port Protest; 36 Policemen Injured In Vizhinjam Police Station Attack