ಕೇರಳದಲ್ಲಿ ‘ಝಿಕಾ’ ಆರ್ಭಟ – ಮತ್ತೆ 5 ಹೊಸ ಪ್ರಕರಣಗಳು ಪತ್ತೆ : 28ಕ್ಕೆ ಏರಿಕೆ
ಕೇರಳ : ಕೇರಳದಲ್ಲಿ ಕೊರೊನಾ ಆರ್ಭಟದ ನಡುವೆ ಸೊಳ್ಳೆಗಳಿಂದ ಹರಡುವ ‘ಝಿಕಾ ವೈರಸ್’ ನ ಹಾವಳಿಯೂ ಹೆಚ್ಚಾಗಿದೆ. ಕೇರಳದಲ್ಲಿ ಮತ್ತೆ 5 ಮಂದಿಗೆ ಝಿಕಾ ವೈರಸ್ ಪತ್ತೆಯಾಗಿದೆ. ನಾಲ್ವರು ಮಹಿಳೆಯರು ಸೋಂಕುಗೆ ಗುರಿಯಾಗಿದ್ದು, ರಾಜ್ಯದಲ್ಲಿ ಝಿಕಾ ವೈರಸ್ ಪೀಡಿತರ ಸಂಖ್ಯೆ 28 ಕ್ಕೆ ಏರಿಕೆಯಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಕೇರಳ ಆರೋಗ್ಯ ಸಚಿವರಾದ ವೀಣಾ ಜಾರ್ಜ್ ‘ಹೊಸ ಪ್ರಕರಣಗಳ ಪೈಕಿ ಇಬ್ಬರು ಇಲ್ಲಿನ ಅನಾಯರಾ ಎಂಬ ಪ್ರದೇಶದವರಾಗಿದ್ದು, ಇಲ್ಲಿಂದ ಮೂರು ಕಿ.ಮೀ ವ್ಯಾಪ್ತಿಯಲ್ಲಿ ಝಿಕಾ ವೈರಸ್ ನ ಕ್ಲಸ್ಟರ್ ನ್ನು ಗುರುತಿಸಲಾಗಿದೆ’ ಎಂದು ತಿಳಿಸಿದ್ಧಾರೆ.
ದೇಶದ್ರೋಹ ಕಾನೂನು ಪ್ರಶ್ನಿಸಿ ಸಲ್ಲಿಸಿರುವ ಹೊಸ ಅರ್ಜಿ ಪರಿಶೀಲನೆಗೆ ಸುಪ್ರೀಂ ಅಸ್ತು
ಉಳಿದ ಸೋಂಕಿತರು ಈಸ್ಟ್ ಫೋರ್ಟ್, ಕುನ್ನುಕುಳಿ ಹಾಗೂ ಪಟ್ಟೋಮ್ ನ ನಿವಾಸಿಗಳಾಗಿದ್ದು ರಾಷ್ಟ್ರೀಯ ವೈರಾಣು ಸಂಸ್ಥೆಯಲ್ಲಿ ಮಾದರಿಗಳನ್ನು ಪರೀಕ್ಷೆಗೊಳಪಡಿಸಲಾಗಿತ್ತು.
ಮಹಾರಾಷ್ಟ್ರ : ಇಂದಿನಿಂದ ಗರ್ಭಿಣಿಯರಿಗೂ ಕೊರೋನಾ ಲಸಿಕೆ ವಿತರಣೆ
ನಾಲ್ಕು ಮಾದರಿಗಳನ್ನು ಖಾಸಗಿ ಆಸ್ಪತ್ರೆಯಿಂದ ಸಂಗ್ರಹಿಸಿ ಕೊಂಡೊಯ್ಯಲಾಗಿದ್ದರೆ, ಒಂದನ್ನು ಆರೋಗ್ಯ ಇಲಾಖೆ ನಿಗಾ ವಹಿಸಿ ಸಂಗ್ರಹಿಸಿ ಕಳಿಸಿಕೊಟ್ಟಿದೆ. ಇದೇ ವೇಳೆ ಇನ್ನೂ 16 ಮಾದರಿಗಳ ಪರೀಕ್ಷೆ ವರದಿ ನೆಗೆಟೀವ್ ಬಂದಿದ್ದು, ರಾಜ್ಯದಲ್ಲಿ ಒಟ್ಟು ಝಿಕಾ ಪ್ರಕರಣಗಳ ಸಂಖ್ಯೆ 28 ಕ್ಕೆ ಏರಿಕೆಯಾಗಿದೆ.