ಕೇಶವ್ ಮಹಾರಾಜ್ ಹ್ಯಾಟ್ರಿಕ್ ಸಾಧನೆ… ವಿಂಡೀಸ್ ವಿರುದ್ಧ ಟೆಸ್ಟ್ ಸರಣಿ ಗೆದ್ದ ದಕ್ಷಿಣ ಆಫ್ರಿಕಾ
ಕೇಶವ್ ಮಹಾರಾಜ್ ಹ್ಯಾಟ್ರಿಕ್ ವಿಕೆಟ್ ಸಾಧನೆಯೊಂದಿಗೆ ದಕ್ಷಿಣ ಆಫ್ರಿಕಾ ತಂಡ ಎರಡನೇ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು 158 ರನ್ ಗಳಿಂದ ಪರಾಭವಗೊಳಿಸಿತು. ಇದ್ರರೊಂದಿಗೆ ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿಕೊಂಡಿತು.
ಸೇಂಟ್ ಲೂಸಿಯಾದ ಡರೇನ್ ಸಮಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಗೆಲ್ಲಲು 324 ರನ್ ಗಳ ಸವಾಲನ್ನು ಬೆನ್ನಟ್ಟಿದ್ದ ವೆಸ್ಟ್ ಇಂಡೀಸ್ ತಂಡ ಎರಡನೇ ಇನಿಂಗ್ಸ್ ನಲ್ಲಿ 165 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಗಳನ್ನು ಕಳೆದುಕೊಂಡು ಸೋಲು ಅನುಭವಿಸಿತು.
ವೆಸ್ಟ್ ಇಂಡೀಸ್ ಪರ ಕಿರಾನ್ ಪಾವೆಲ್ 51 ರನ್, ಕೈಲ್ ಮೇಯರ್ಸ್ಋ 34 ರನ್ ಹಾಗೂ ಜರ್ಮೆನ್ ಬ್ಲ್ಯಾಕ್ ವುಡ್ 25 ರನ್ ಮತ್ತು ಕೇಮರ್ ರಾಚ್ 27 ರನ್ ಗಳಿಸಲಷ್ಟೇ ಶಕ್ತರಾದ್ರು. ಇನ್ನುಳಿದ ಬ್ಯಾಟ್ಸ್ ಮೆನ್ ಗಳು ಒಂದಂಕಿ ಮೊತ್ತಕ್ಕೆ ಸೀಮಿತವಾದ್ರು.
ದಕ್ಷಿಣ ಆಫ್ರಿಕಾ ಕಾಗಿಸೊ ರಬಾಡ ಮೂರು ವಿಕೆಟ್ ಪಡೆದ್ರು. ಇನ್ನೊಂದೆಡೆ ಸ್ಪಿನ್ನರ್ ಕೇಶವ್ ಮಹಾರಾಜ್ ಐದು ವಿಕೆಟ್ ಉರುಳಿಸಿ ವೆಸ್ಟ್ ಇಂಡೀಸ್ ತಂಡಕ್ಕೆ ಆಘಾತದ ಮೇಲೆ ಆಘಾತ ನೀಡಿದ್ರು.
ದಕ್ಷಿಣ ಆಫ್ರಿಕಾ ಮೊದಲ ಇನಿಂಗ್ಸ್ ನಲ್ಲಿ 298 ರನ್ ಗಳಿಸಿದ್ರೆ, ವೆಸ್ಟ್ ಇಂಡೀಸ್ 149 ರನ್ ಗಳಿಸಿತು. ಅದೇ ರೀತಿ ದಕ್ಷಿಣ ಆಫ್ರಿಕಾ ಎರಡನೇ ಇನಿಂಗ್ಸ್ ನಲ್ಲಿ 174 ರನ್ ಗಳಿಗೆ ಆಲೌಟ್ ಆಗಿ ವೆಸ್ಟ್ ಇಂಡೀಸ್ ತಂಡಕ್ಕೆ ಗೆಲ್ಲಲುಉ 324 ರನ್ ಗಳ ಸವಾಲನ್ನು ನೀಡಿತ್ತು. ಇದಕ್ಕುತ್ತರವಾಗಿ ವೆಸ್ಟ್ ಇಂಡೀಸ್ 165 ರನ್ ಗಳಿಸಿತು.
ಇದ್ರೊಂದಿಗೆ ದಕ್ಷಿಣ ಆಫ್ರಿಕಾ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು 2-0ಯಿಂದ ಗೆದ್ದುಕೊಂಡು ಸರಣಿಯನ್ನು ಕೈವಶಮಾಡಿಕೊಂಡಿತ್ತು. ಕಾಗಿಸೋ ರಬಾಡ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ್ರೆ, ಕ್ವಿಂಟನ್ ಡಿಕಾಕ್ ಅವರು ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದ್ರು.