Kevin Pietersen | ಆಕ್ರಮಣಕಾರಿ ಬ್ಯಾಟಿಂಗ್ ಟೆಸ್ಟ್ ಗೆ ಮಾರಕ
ಟೆಸ್ಟ್ ಕ್ರಿಕೆಟ್‌ನಲ್ಲಿ ಕೆಲ ಸಮಯದಿಂದ ಆಕ್ರಮಣಕಾರಿ ಬ್ಯಾಟಿಂಗ್‌ನ ಟ್ರೆಂಡ್ ಆಗುತ್ತಿದೆ. ಮೊದಲೆಲ್ಲಾ ಹೀಗೆ ಆಡಿದರೆ ಈತ ಟೆಸ್ಟ್ ಬ್ಯಾಟ್ಸ್ ಮನ್ ಅಲ್ಲವೇ ಅಲ್ಲ ಎನ್ನುತ್ತಿದ್ದರು.
ಆದರೆ ಈಗ ವೇಗವಾಗಿ ರನ್ ಗಳಿಸಿ ತಂಡಕ್ಕೆ ನೆರವಾಗುವುದು ಆರಂಭವಾಗಿದೆ.
ಭಾರತದ ರಿಷಬ್ ಪಂತ್ ಮತ್ತು ಶುಭಮನ್ ಗಿಲ್ ಅವರಂತಹ ಬ್ಯಾಟ್ಸ್‌ಮನ್‌ಗಳಿಂದ ಹಿಡಿದು ಇಂಗ್ಲೆಂಡ್‌ನ ಜಾನಿ ಬೈರ್ ಸ್ಟೋ ಮತ್ತು ಬೆನ್ ಸ್ಟೋಕ್ಸ್‌ವರೆಗೆ ಟೆಸ್ಟ್ ಬ್ಯಾಟಿಂಗ್ ನಲ್ಲಿ ಆಕ್ರಮಣಕಾರಿ ಕಾಣುತ್ತಿದೆ.
ಇಲ್ಲಿಯವರೆಗೆ, ಈ ಬ್ಯಾಟ್ಸ್‌ಮನ್‌ಗಳು ಹೆಚ್ಚಿನ ಸಂದರ್ಭಗಳಲ್ಲಿ ಯಶಸ್ವಿಯಾಗಿದ್ದಾರೆ, ಆದರೆ ಮಾಜಿ ಇಂಗ್ಲೆಂಡ್ ಕ್ರಿಕೆಟಿಗ ಕೆವಿನ್ ಪೀಟರ್ಸನ್ ಇ ರೀತಿ ಬ್ಯಾಟಿಂಗ್ ಟೆಸ್ಟ್ ಕ್ರಿಕೆಟ್‌ಗೆ ಮಾರಕ ಎಂದು ಕರೆದಿದ್ದಾರೆ.
ಪೀಟರ್ಸನ್ ಟ್ವೀಟ್‌ನಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಆಕ್ರಮಣಕಾರಿ ಬ್ಯಾಟಿಂಗ್‌ನ ಎರಡು ದೊಡ್ಡ ಸಂಭಾವ್ಯ ಅಪಾಯಗಳನ್ನು ಸೂಚಿಸಿದ್ದಾರೆ.
ಅವರು ಬರೆದಿದ್ದಾರೆ, ‘ಟೆಸ್ಟ್ ಪಂದ್ಯದಲ್ಲಿ ಶತಕಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ ಏಕೆಂದರೆ ಒಬ್ಬ ಬ್ಯಾಟ್ಸ್‌ಮನ್ ತನ್ನ ವಿಕೆಟ್‌ಗೆ ಎಷ್ಟು ಪ್ರಾಮುಖ್ಯತೆಯನ್ನು ನೀಡುತ್ತಾನೆ ಮತ್ತು ಅದನ್ನು ಉಳಿಸಲು ಅವನು ಎಷ್ಟು ಜವಾಬ್ದಾರಿಯನ್ನು ತೋರಿಸಿದ್ದಾನೆ ಎಂಬುದನ್ನು ತೋರಿಸುತ್ತದೆ.
ಈಗ ಬ್ಯಾಟ್ಸ್‌ಮನ್‌ಗಳು ತುಂಬಾ ಆಕ್ರಮಣಕಾರಿ ಬ್ಯಾಟಿಂಗ್ ವಿಧಾನವನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಅವರು ತಮ್ಮ ವಿಕೆಟ್‌ಗಳ ಪ್ರಾಮುಖ್ಯತೆಯನ್ನು ಕಡಿಮೆ ಮಾಡುತ್ತಿದ್ದಾರೆ ಮತ್ತು ಈ ಹೊಸ ತಂತ್ರದ ಹಿಂದೆ ತಮ್ಮನ್ನು ತಾವು ಅಡಗಿಸಿಕೊಳ್ಳುತ್ತಿದ್ದಾರೆ ಎಂದು ನಾನು ಹೆದರುತ್ತೇನೆ” ಎಂದು ಬರೆದಿದ್ದಾರೆ.
ಇತ್ತೀಚೆಗಷ್ಟೇ ಮುಕ್ತಾಯಗೊಂಡ ಇಂಗ್ಲೆಂಡ್-ನ್ಯೂಜಿಲೆಂಡ್ ಟೆಸ್ಟ್ ಸರಣಿಯಲ್ಲಿ ಬ್ಯಾಟಿಂಗ್ ಅತ್ಯಂತ ಆಕ್ರಮಣಕಾರಿ ರೀತಿಯಲ್ಲಿ ಕಂಡುಬಂದಿದೆ.
ಇಂಗ್ಲೆಂಡ್‌ನ ಜಾನಿ ಬೈರ್‌ಸ್ಟೋವ್ ಮತ್ತು ಬೆನ್ ಸ್ಟೋಕ್ಸ್ ಅವರು ಬ್ಯಾಟಿಂಗ್ ಮಾಡುವಾಗ ತಮ್ಮ ತಂಡಕ್ಕೆ ಅಸಾಧ್ಯವಾದ ಗೆಲುವು ಸಾಧಿಸಿದರು.
ಎಡ್ಜ್‌ಬಾಸ್ಟನ್‌ನಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್‌ನಲ್ಲಿ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ರಿಷಬ್ ಪಂತ್ ಮತ್ತು ಜಾನಿ ಬೈರ್‌ಸ್ಟೋವ್ ಕೂಡ ಶತಕ ಬಾರಿಸಿದ್ದಾರೆ.