1009 ಸೋಲು, 65ನೇ ವಯಸ್ಸಿನಲ್ಲಿ ಮಿಲೇನಿಯರ್ ಆದ KFC – ಸಂಸ್ಥಾಪಕ ಹಾರ್ನಾಲ್ಡ್ ಸ್ಯಾಂಡರ್ಸ್ ಸಾಹಸಗಾಥೆ..!
ಈ ಜೀವನದಲ್ಲಿ ಯಾವುದೂ ತುಂಬಾನೆ ಕಷ್ಟವೇನಲ್ಲ. ಆದ್ರೂ ಜನರು ತಮ್ಮ ಧೈರ್ಯ ಆಸ್ತಾ, ಇಚ್ಛೆಯನ್ನ ಕಳೆದುಕೊಳ್ತಾರೆ. ತಾವು ಅಂದುಕೊಂಡಿದ್ದನ್ನ ಸಾಧಿಸದೇ ಮುಂದೆ ಪ್ರಯತ್ನವನ್ನೇ ನಿಲ್ಲಿಸುತ್ತಾರೆ. ಆದ್ರೆ ನಾವು ಮನಸಾರೆ ಏನಾದ್ರೂ ಕೋರಿಕೊಂಡ್ರೆ, ಸಾಧಿಸಲೇ ಬೇಕು ಅಂತ ಹರೆಟರೆ ನಾವ್ ಏನ್ ಬೇಕಾದ್ರೂ ಸಾಧಿಸಬಹುದು. ಎಂಥಹ ಕಾರ್ಯವನ್ನ ಸಹ ಮಾಡಬಹುದು.
ನೀವು ಜೀವನದಲ್ಲಿ ಎಷ್ಟು ಸಲ ಸೋತಿರಬಹುದು. 15 , 22, ಹೋಗ್ಲಿ 100 ಸಲ ಸೋತಿರಬಹುದಾ… ಇಷ್ಟಕ್ಕೆ ಸಾಕಪ್ಪ.. ಇನ್ ನನ್ನ ಕೈಯಲ್ಲಿ ಇದು ಸಾಧ್ಯವೇ ಇಲ್ಲ ನೋ ಚಾನ್ಸ್ ಅಂತ ಸೋಲಿಗೆ ಶರಣಾಗ್ತೀರಾ.. ಆದ್ರೆ ಒಬ್ಬ ವ್ಯಕ್ತಿ 1009 ಸಲ ತಿರಸ್ಕಾರ ಗೊಂಡ್ರೂ ಸೋಲಿನ ಮುಂದೆ ಶರಣಾಗೋಕೆ ಒಪ್ಪದೇ ಸತತ ಪ್ರಯತ್ನದಿಂದ ಇಂದು ಇಡೀ ಜಗತ್ತೇ ಕೊಂಡಾಡುತ್ತಿರುವಂತಹ ಸಾಧನೆ ಮಾಡಿದ್ದಾರೆ.
ಹೌದು ಈ ವ್ಯಕ್ತಿ ಜೀವನ ಪೂರ್ತಿ ಕಂಡಿದೆಲ್ಲಾ, ಸೋಲೇ ಆದ್ರೂ… ಛಲ ಬಿಡದೇ ಸತತ ಪ್ರಯತ್ನ ಮಾಡಿದ್ರು.. ಇವತ್ತು ಜಗತ್ತೇ ತನ್ನನ್ನ ನೆನಪಿಸಿಕೊಳ್ಳಬೇಕು ಅಂತಹ ಸಾಧನೆ ಮಾಡಿದ್ದಾರೆ. ಆದ್ರೆ ಅವರಿಗೆ ಜಯ, ಗೆಲುವು ಸಿಕ್ಕಿದ್ದಾದ್ರೂ ಯಾವಾಗ.. 65 ವಯಸ್ಸಿನ ಬಳಿಕ. ಎಸ್ ಸ್ವಚ್ಛ ಮನಸ್ಸು, ಮಾಡೋ ಹುಮ್ಮಸ್ಸು, ಇಚ್ಛೆ ಇದ್ರೆ , ಗಟ್ಟಿ ನಿರ್ಧಾರ , ಏಕಾಗ್ರತೆ ಒಂದಿದ್ರೆ, ನಿಮ್ಮ ಸಾಧನೆಯ ಹಾದಿ ಎಷ್ಟೇ ಕಠಿಣವಾಗಿದ್ರೂ, ಯಾವುದೂ ನಿಮ್ಮನ್ನ ತಡೆಯೋಕೆ ಸಾಧ್ಯವೇ ಇಲ್ಲ.
ಅಷ್ಟಕ್ಕೂ ನಾವಿವತ್ತೂ ಮಾತನಾಡೋಕೆ ಹೊರಟಿರೋದು KFC ಫೌಂಡರ್ ಕೊಲೆನಾಲ್ ಹರ್ನಾಲ್ಡ್ ಸ್ಯಾಂಡರ್ಸ್. ಎಸ್ KFC – ( KENTUCKY FRIED CHICKEN ) ಕೆಂಟುಕಿ ಫ್ರೈಡ್ ಚಿಕನ್.. ಇಡೀ ವಿಶ್ವದ ಪ್ರಖ್ಯಾತ ಫುಡ್ ರೆಸ್ಟೋರೆಂಟ್ ಚೈನ್.. ವಿಶ್ವದ ಮೂಲೆಮೂಲೆಯಲ್ಲಿ 145 ಕ್ಕೂ ಅಧಿಕ ಕಡೆಗಳಲ್ಲಿ 20 ಸಾವಿರಕ್ಕೂ ಅಧಿಕ ಬ್ರಾಂಚ್ ಗಳಿವೆ.
ಸ್ಯಾಂಡರ್ಸ್ ಫೇಲ್ಯೂರ್ – ಸಕ್ಸಸ್ ಕಥೆ..!
ಜೀವನ ಪೂರ್ತಿ ಸೋಲು, ಹತಾಶೆ, ಅವಮಾನ, ನಿರಾಸೆ, ಬೇಸರದಲ್ಲಿಯೇ ಬದುಕಿದವರು ಸ್ಯಾಂಡರ್ಸ್. ಸ್ಯಾಂಡರ್ಸ್ 1890 ರ ಸೆಪ್ಟೆಂಬರ್ ನಲ್ಲಿ ಇಂಡಿಯಾನಾದ ಹ್ಯಾಂಡ್ರಿವಿಲ್ ನಲ್ಲಿ ಜನಿಸಿದ್ರು. ಅವರಿಗೆ 5 ವರ್ಷವಿದ್ದಾಗಲೇ ಅವರ ತಂದೆ ಡೇವಿಡ್ ಸ್ಯಾಂಡರ್ಸ್ ಇಹಲೋಕ ತ್ಯಜಿಸಿದ್ದರು. ಇದಾದ ಬಳಿಕ ಮನೆಯ ಜವಾಬ್ದಾರಿ ತಾಯಿ ಮಾರ್ಗರೀಟಾ ಹೆಗಲಿಗೆ ಬಿತ್ತು. ಬಳಿಕ ಮಕ್ಕಳ ಪೋಷಣೆಗಾಗಿ ಆಕೆ ಹೊರಗೆ ಕೆಲಸಕ್ಕೆ ಹೋಗುವ ಅನಿವಾರ್ಯತೆ ಬಿತ್ತು. ಈ ಸಮಯದಲ್ಲಿ ತಬನ್ನ ತಮ್ಮ ತಂಗಿಯ ಪೋಷಣೆಯ ಜವಾಬ್ದಾರಿ 7ನೇ ವಯಸ್ಸಿನಲ್ಲಿದ್ದ ಪುಟ್ಟ ಸ್ಯಾಂಡರ್ಸ್ ಹೆಗಲಿಗೆ ಬಿದ್ದಿತ್ತು. ಇನ್ನೂ ಎಲ್ಲರೂ ಆಟವಾಡುವ ಓದುವ ವಯಸ್ಸಲ್ಲಿ ಸ್ಯಾಂಡರ್ಸ್ ತಮ್ಮ ತಾಯಿ ಜೊತೆ ಸೇರಿ ಅಡಿಗೆ ಕಲಿತು ಅಡಿಗೆ ಮಾಡೋದ್ರಲ್ಲಿ ಆಗಲೇ ಪರಿಣಿತಿ ಹೊಂದಿದ್ದರು.
‘ಮಿಸ್ ಇಂಡಿಯಾ’ 2020ರ ಕಿರೀಟ ಮುಡಿಗೇರಿಸಿಕೊಂಡ ತೆಲಂಗಾಣ ಸುಂದರಿ..!
ಹೀಗಿರೋವಾಗ್ಲೇ ಸ್ಯಾಂಡರ್ಸ್ ತಾಯಿ 1902 ರಲ್ಲಿ 2ನೇ ವಿವಾಹವಾದ್ರೂ. ಆದ್ರೆ ಸ್ಯಾಂಡರ್ಸ್ ವಿರುದ್ಧ ಅವರ ಮಲತಂದೆಗೆ ಅತೀವ ದ್ವೇಷವಿತ್ತು. ಇದರಿಂದಾಗಿ ಸ್ಯಾಂಡರ್ಸ್ 1903 ಅಂದ್ರೆ ತಮ್ಮ 13ನೇ ವಯಸ್ಸಲ್ಲಿ ಮನೆ ಬಿಟ್ಟು ಹೊರಬಂದ್ರು. ಬಳಿಕ 7ನೇ ತರಗತಿಗೆ ವಿದ್ಯಾಭ್ಯಾಸವನ್ನ ನಿಲ್ಲಿಸಿದ ಸ್ಯಾಂಡರ್ಸ್ ಇಂಡಿಯಾನದ ಓಲಿಗೆ ತೆರಳಿ ಕೆಲ ದಿನಗಳ ವರೆಗೂ ಅಲ್ಲಿ ಕುದುರೆಗೆ ಬಣ್ಣ ಹಚ್ಚುವ ಕೆಲಸ ಮಾಡಿದ್ರೂ. ಬಳಿಕ ಅಲ್ಲಿಯೂ ಕೆಲಸ ಕಳೆದುಕೊಂಡು 1906ರಲ್ಲಿ ಅವರು ತಮ್ಮ ಆಲ್ಬೋನಿಯಾಗೆ ತೆರಳಿ ತಮ್ಮ ಸಂಬಂಧಿಕರೊಂದಿಗೆ ಜೀವನ ನಡೆಸಲು ಪ್ರಾರಂಭಿಸಿದ್ರು.
ಅಲ್ಲಿ ಅವರ ಅಂಕಲ್ ಸಹಾಯದಿಂದ ಕಂಡಕ್ಟರ್ ಆಗಿ ಕೆಲಸ ಮಾಡಿದರು, ಬಳಿಕ ರೈಲ್ವೇ ಇಲಾಖೆಯಲ್ಲಿ ಫೈರ್ ಮ್ಯಾನ್ ಆಗಿ ಕೆಲಸಕ್ಕೆ ಸೇರಿದರು. ಇದಾದ ನಂತರ 1909ರಲ್ಲಿ ತಮ್ಮ 18ನೇ ವಯಸ್ಸಲ್ಲೇ ಜೋಸಿಫಿನ್ ಎಂಬಾಕೆಯನ್ನ ಪ್ರೀತಿಸಿ ಮದುವೆಯಾಗಿದ್ದರು. ಬಳಿಕ ಮಗುವಿನ ಜನಮ್ ನೀಡಿದ್ದರು. ಇದಾದ ಬಳಿಕ ಇನ್ನೇನು ಜೀವನದಲ್ಲಿ ಖುಷಿ ಸಂತೋಷವೇ ಸಿಕ್ತು ಎಂದುಕೊಳ್ಳುವಷ್ಟರೆಲ್ಲೇ ಸಹೋದ್ಯೋಗಿ ಜೊತೆ ಗಲಾಟೆ ಮಾಡಿಕೊಂಡ ಸ್ಯಾಂಡರ್ಸ್ ಕೆಲಸವೂ ಹೋಯ್ತು.
ಬಳಿಕ 20ನೇ ವಯಸ್ಸಲ್ಲಿ ಪತ್ನಿಯೂ ಸಹ ಸ್ಯಾಂಡರ್ಸ್ ಕೈ ಬಿಟ್ಟು ಮಕ್ಕಳ ಜೊತೆಗೆ ಮನೆ ಬಿಟ್ಟು ತೆರಳಿದ್ರು. ಇಲ್ಲಿ ಇನ್ನೇನು ಜೀವನ ಟ್ರ್ಯಾಕ್ ಗೆ ಬರುತ್ತಿದೆ ಅಂದ್ಕೊಂಡಿದ್ದ ಸ್ಯಾಂಡರ್ಸ್ ಜೀವನ ಮತ್ತಷ್ಟು ಕಠಿಣ ಹಂತವನ್ನ ತಲುಪಿತ್ತು. ಇದಾದ ನಂತರ ಸ್ಯಾಂಡರ್ಸ್ ಟೈರ್ ಬ್ಯುಸಿನೆಸ್, ಇನ್ಸುರೆನ್ಸ್, ಕ್ರೆಡಿಟ್ ಕಾರ್ಡ್ ಮಾರಾಟ, ಸೇರಿ ಅನೇಕ ಕೆಲಸಗಳನ್ನ ಮಾಡಿದ್ರು. ಎಲ್ಲಾ ಕಡೆ ಫೇಲ್ ಆದ್ರೂ. ನಂತರ 22 ನೇ ವಯಸ್ಸಲ್ಲಿ ಆರ್ಮಿ ಸೇರಿದ ಅವರು ಅಲ್ಲಿಂದಲೂ ಹೊರ ಬರಬೇಕಾಯ್ತು.
ನಂತರ ಮತ್ತೆ ಮತ್ತೆ ಸಿಕ್ಕಿದ ಕೆಲಸಗಳನ್ನೆಲ್ಲಾ ಮಾಡುತ್ತಾ ಹೊಟ್ಟೆ ಪಾಡು ನೋಡಿಕೊಳ್ತಿದ್ದ ಸ್ಯಾಂಡರ್ಸ್ 1930ರಲ್ಲಿ ತಮ್ಮ ಬಳಿ ಇದ್ದ ಚೂರು ಪಾರು ಹಣ ಸೇರಿಸಿ ಕೆಂಟುಕಿ ಕಾರ್ಬಿನ್ ಎನ್ನುವಂತಹ ಸ್ಥಳದಲ್ಲಿ ಅಮೆರಿಕಾದ ರೂಟ್ 25 ಬಳಿ ಒಂದು ಗ್ಯಾಸ್ ಸ್ಟೇಶನ್ ತೆರೆದರು. ಸ್ವಲ್ಪ ದಿನಗಳ ನಂತರ ಅಲ್ಲೇ ಪಕ್ಕದಲ್ಲಿ ಒಂದು ಸಣ್ಣ ರೆಸ್ಟೋರೆಂಟ್ ತೆರೆಯುವತ್ತಾರೆ. ಅಲ್ಲಿ ವಿಭಿನ್ನ ಶೈಲಿಯ ತಮ್ಮದೇ ರೆಸಿಪಿಯ ಚಿಕನ್ ಡಿಶಸ್ ಮಾಡಲಿಕ್ಕೆ ಪ್ರಾರಂಭಿಸುತ್ತಾರೆ. ಕೆಲವೇ ದಿನಗಳಲ್ಲಿ ಈ ರೆಸಿಪಿ ಸ್ಥಳೀಯರಿಗೆ ಪ್ರಯಾಣಿಕರಿಗೆ ಬಹಳ ಇಷ್ಟವಾಗುತ್ತೆ. ಇದರಿಂದ ಸಂತೋಷಗೊಂಡ ಸ್ಯಾಂಡರ್ಸ್, ಬ್ಯುಸಿನೆಸ್ ನ ಇನ್ನಷ್ಟು ಅಭಿವೃದ್ಧಿ ಪಡಿಸೋ ಯೋಜನೆ ಮಾಡ್ತಾರೆ.
ಇದೇ ಸಲುವಾಗಿ ಕಾರ್ನಲ್ ಯೂನಿವರ್ಸಿಟಿಯಲ್ಲಿ 8 ವಾರಗಳ ಹೋಟೆಲ್ ಮ್ಯಾನೇಜ್ ಮೆಂಟ್ ಕೋರ್ಸ್ ಮಾಡ್ತಾರೆ. ಈ ವೇಳೆ ಸ್ಯಾಂಡರ್ಸ್ ಗೆ 42 ವರ್ಷ ವಯಸ್ಸಾಗಿರುತ್ತೆ. ಈ ನಡುವೆ ಸ್ಯಾಂಡರ್ಸ್ ನ ಚಿಕನ್ ರೆಸಿಪಿಗೆ ಮರುಳಾಗಿದ್ದ ಕೆಂಟುಕಿ ಗವರ್ನರ್ ರೂಬಿ ಲಫ್ಟೂನ್ ಅವರು ಸ್ಯಾಂಡರ್ಸ್ ಅವರಿಗೆ ಕೆಂಟುಕಿ ಕರ್ನಲ್ ಎಂಬು ಬಿರುದು ನೀಡ್ತಾರೆ. ಆಗಲಿಂದಲೇ ಹರ್ನಾಲ್ಡ್ ಡೇವಿಡ್ ಸ್ಯಾಂಡರ್ಸ್ ಹೆಸರಿನ ಹಿಂದೆ ಕಕರ್ನಲ್ ಸೇರಿಕೊಂಡಿದೆ. ಇನ್ನೇನು ಜೀವನ ಚೆನ್ನಾಗಿ ನಡೆಯುತ್ತಿದೆ ಅನ್ನೋವಾಗ್ಲೇ ಹೈವೇ ನಿರ್ಮಾಣದ ಕಾರಣದಿಂದಾಗಿ ಸ್ಯಾಂಡರ್ಸ್ ಬ್ಯುಸಿನೆಸ್ ಎತ್ತಂಗಡಿ ಮಾಡಬೇಕಾಗುತ್ತೆ. ಮತ್ತೆ ಅದೇ ನಿರಾಸೆ, ಜೀವನದ ಮೇಲೆ ಜಿಗುಪ್ಸೆ, ಹತಾಶೆ ಅವರನ್ನ ಕಾಡುತ್ತೆ. ಮತ್ತೆ ಅನೇಕ ದಿನಗಳ ಕಾಲ ನಿರುದ್ಯೋಗಿ ಆಗಿದ್ದ ಅವರು ಚಿಕ್ಕ ಪುಟ್ಟ ಕೆಲಸಗಳಿಂದ ಹೊಟ್ಟೆ ತುಂಬಿಸಿಕೊಳ್ತಿದರು. ಇಷ್ಟರಲ್ಲಿ ಅವರಿಗೆ ಸುಮಾರು 55 ವರ್ಷ ವಯಸ್ಸಾಗಿತ್ತು. ವರ್ಷ ವಯಸ್ಸಾಗಿತ್ತು. ಆಗ ಅವರು ಒಂದು ಕಾಫಿ ಡೇ ನಲ್ಲಿ ಪಾತ್ರೆ ತೊಳೆಯುವ ಕೆಲಸಕ್ಕೆ ಸೇರಿಕೊಂಡರು. ಬಳಿಕ 60 ನೇ ವಯಸ್ಸಿಗೆ ಅವರು ರಿಟೈರ್ ಆದರೂ.
ಆಗ ರಿಟೈರ್ ಆದ ನಂತರ ಸರ್ಕಾರದಿಂದ ಅವರಿಗೆ ಮೊದಲ ತಿಂಗಳ ಪೆನ್ಷನ್ 105 ಡಾಲರ್ ಗಳ ಚೆಕ್ ಸಿಕ್ಕಿತ್ತು. ಆಗ ಅವರಿಗೆ ಇಷ್ಟು ದುಡ್ಡಲ್ಲಿ ಹೇಗಪ್ಪಾ ತಿಂಗಳು ಜೀವನ ಸಾಗಿಸೋದು ಎಂಬ ಯೋಚನೆ ಆಯ್ತು. ಅವರು ಮತ್ತಷ್ಟು ಕುಗ್ಗಿ ಹೋದ್ರು. ಬಳಿಕ ಜೀವನ ಸಾಕು ಅನ್ನೋ ನಿರ್ಧಾರಕ್ಕೆ ಬಂದು ಆತ್ಮಹತ್ಯೆಗೆ ನಿರ್ಧಾರ ಮಾಡಿದ್ರು. ಒಂದು ಮರದಡಿ ಕುಳಿತು ಡೆತ್ ನೋಟ್ ಮತ್ತು ಜೀವನದಲ್ಲಿ ಏನೆಲ್ಲಾ ಮಾಡಿದೇ ಅನ್ನೋದನ್ನ ಬರಿಯೋಕೆ ಪ್ರಾರಂಭಿಸಿದ್ರು. ಆಗ ಅವರ ತಲೆಗೆ ಬಂದ ವಿಚಾರ.. ನಾನು ನನ್ನ ಇಷ್ಟು ವರ್ಷಗಳ ಜೀವನದಲ್ಲಿ ಏನೂ ಸಾಧನೆ ಮಾಡಿಲ್ಲಾ.. ಹೊಟ್ಟೆ ತುಂಬಿಸಿಕೊಂಡಿದ್ದು ಬಿಟ್ರೆ ಮಾಡಿದ್ದಾದ್ರೂ ಏನು. ಬಳಿಕ ನಾನು ಮತ್ತೆ ನನ್ನ ಜೀವನವನ್ನ ಹೊಸ ರೀತಿಯಲ್ಲಿ ಹೊಸದಾಗಿ ಬದುಕೋ ಚಾನ್ಸ್ ಇದ್ಯಾ ಅಂತ ಯೋಚನೆ ಮಾಡಿದ್ರು. ಅಲ್ದೇ ನಾನು ಪರಿಣಿತಿ ಹೊಂದಿರುವ ಕೆಲಸ ಎಲ್ರಿಗಿಂತ ನಾನು ಚೆನ್ನಾಗಿ ಮಾಡಬಲ್ಲೆ. ಅದುನ್ನೇ ಯಾಕ್ ಮಾಡಬಾರದು ಅಂತ ಯೋಚನೆ ಮಾಡಿದಾಗಲೇ ಅವರ ತಲೆಗೆ ಹೊಳೆದಿದ್ದು, ಚಿಕನ್ ರೆಸಿಪಿ.
ಈ ಬ್ಯುಸಿನೆಸ್ ಗಾಗಿ ಅವರು 87 ಡಾಲರ್ ಸಾಲ ಪಡೆದು ಒಂದು ಫ್ರೈಯರ್, ಮಸಾಲೆ ಪದಾರ್ಥಗಳನ್ನ ಖರೀದಿಸಿದ್ರು. ಚಿಕನ್ ರೆಸಿಪಿ ತಯಾರಿಸಿ ಮನೆ ಮನೆಗೆ ತೆರಳಿ ಮಾರಾಟ ಮಾಡಲು ಶುರು ಮಾಡಿದ್ರೂ. ಜೊತೆಗೆ ಪ್ರತಿ ರೆಸ್ಟೋರೆಂಟ್ ಗಳಿಗೆ ತೆರಳಿ ತಮ್ಮ ರೆಸಿಪಿ ಪರಿಚಯಿಸಿದ್ರೂ. ಆದ್ರೆ ಎಲ್ಲಾ ರೆಸ್ಟೋರೆಂಟ್ ಗಳಿಂದಲೂ ಸ್ಯಾಂಡರ್ಸ್ ತೆರಸ್ಕೃತರಾದ್ರು. ಒಂದಲ್ಲಾ ಎರೆಡಲ್ಲಾ 1009 ರೆಸ್ಟೋರೆಂಟ್ ಗಳು ಸ್ಯಾಂಡರ್ಸ್ ಅವರ ಪ್ರಸ್ಪಾವನ್ನ ರೆಜೆಕ್ಟ್ ಮಾಡಿದ್ವು. ಆದ್ರು ಛಲ ಪ್ರಯತ್ನ ಬಿಡದ ಸ್ಯಾಂಡರ್ಸ್ ಪ್ರಯತ್ನಕ್ಕೆ ಕೊನೆಗೂ ಫಲ ಸಿಕ್ಕಿತ್ತು. ಹೌದು 1010 ನೇ ರೆಸ್ಟೋರೆಂಟ್ ಸ್ಯಾಂಡರ್ಸ್ ಪ್ರಸ್ತಾಪನೆ ಒಪ್ಪಿ ಚಾನ್ಸ್ ಕೊಟ್ಟಿತ್ತು. ಅಷ್ಟೇ ಇಲ್ಲಿಂದ ಸ್ಯಾಂಡರ್ಸ್ ಹಿಂದುರಿಗಿ ನೋಡಿಯೇ ಇಲ್ಲ. ಇದು ಅವರ ಜೀವನದ ಟರ್ನಿಂಗ್ ಪಾಯಿಂಟ್ ಕೂಡ, ಅದೃಷ್ಟದ ರಹದಾರಿ ಕೂಡ.
ಬಳಿಕ ಸ್ಯಾಂಡರ್ಸ್ ತಮ್ಮ 88ನೇ ವಯಸ್ಸಿನಲ್ಲಿ ಮಲ್ಟಿ ಬಿಲೇನಿಯರ್ ಪಟ್ಟ ಪಡೆದರು. ಸಾರ್ಥಕತೆ ಮೆರೆದ್ರು. KFC 2 ನೇ ಅತಿ ದೊಡ್ಡ ಫುಡ್ ರೆಸ್ಟೋರೆಂಟ್ ಸಾಮ್ರಾಜ್ಯವೇ ಆಗಿ ಹೊರಹೊಮ್ಮಿತು. ಹೀಗೆ KFC ಯ ಫೌಂಡರ್ ಸ್ಯಾಂಡರ್ಸ್ ನ ಯಶೋಗಾಥೆಯ ಹಿಂದೆ ಸೋಲು ಹತಾಶೆಗಳೆ ತುಂಬಿದೆ,. ಆದ್ರೆ ಛಲ ಪ್ರಯತ್ನ ಇದ್ರೆ ಏನ್ ಬೇಕಾದ್ರು ಸಾಧನೆ ಮಾಡಬಹುದು ಅನ್ನೋದಕ್ಕೆ ಸ್ಯಾಂಡರ್ಸ್ ಒಂದು ಉದಾಹರಣೆ.
– ನಮ್ರತಾ ರಾವ್ –
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel