‘ಮಿಸ್ ಇಂಡಿಯಾ’ 2020ರ ಕಿರೀಟ ಮುಡಿಗೇರಿಸಿಕೊಂಡ ತೆಲಂಗಾಣ ಸುಂದರಿ..!
2020ನೇ ಸಾಲಿನ ಫೆಮಿನಾ ಮಿಸ್ ಇಂಡಿಯಾ ವಿನ್ನರ್ ಅನೌನ್ಸ್ ಆಗಿದೆ. ಈ ಬಾರಿ ಮಿಸ್ ಇಂಡಿಯಾ ಕಿರೀಟವನ್ನ ತೆಲಂಗಾಣದ ಸುಂದರಿ ಮುಡಿಗೇರಿಸಿಕೊಂಡಿದ್ದಾರೆ. ತೆಲಂಗಾಣ ಮೂಲದ ಮಾನಸ ವಾರಣಾಸಿ ಮಿಸ್ ಇಂಡಿಯಾ ಆಗಿ ಹೊರಹೊಮ್ಮಿದ್ದಾರೆ. ವಿಶೇಷ ಅಂದ್ರೆ 2019ರಲ್ಲಿ ಮಿಸ್ ಇಂಡಿಯಾ ಆಗಿ ಹೊರಹೊಮ್ಮಿದ್ದ ರಾಜಸ್ಥಾನದ ಸುಮನ್ ರತನ್ ಸಿಂಗ್ ರಾವ್ ಅವರು ನೂತನ ಮಿಸ್ ಇಂಡಿಯಾ ಮಾನಸ ಅವರಿಗೆ ‘ಮಿಸ್ ಇಂಡಿಯಾ 2020′ ಪಟ್ಟಾಭಿಷೇಕ ಮಾಡಿ ಕಿರೀಟ ಮುಡಿಗೇರಿಸಿದರು.
ಬಿಗ್ ಬಾಸ್ ಕನ್ನಡ -8 : ದೊಡ್ಮನೆಗೆ ‘ಅಗ್ನಿಸಾಕ್ಷಿ ಅಂಜಲಿ’ ಎಂಟ್ರಿ ..!
23 ವರ್ಷದ ಮಾನಸ ವಾರಣಾಸಿ ತೆಲಂಗಾಣದ ಹೈದರಾಬಾದ್‌ನಲ್ಲಿ ನೆಲೆಸಿದ್ದು, ಇಂಜಿನಿಯರ್ ಪದವಿ ಮುಗಿಸಿದ್ದಾರೆ. ಇವರು ವೃತ್ತಿಯಲ್ಲಿ ಹಣಕಾಸು ಮಾಹಿತಿ ವಿನಿಮಯ ವಿಶ್ಲೇಷಕಿ ಆಗಿದ್ದಾರೆ. ಇನ್ನೂ ಇವರು 2021ರ ಡಿಸೆಂಬರ್ ತಿಂಗಳಲ್ಲಿ ನಡೆಯಲಿರುವ ಐತಿಹಾಸಿಕ 70ನೇ ವರ್ಷದ ಮಿಸ್ ವರ್ಲ್ಡ್ ವೇದಿಕೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.
ಇನ್ನೂ ಹರಿಯಾಣದ ಮಾನಿಕಾ ಶಿಯೋಕಾಂಡ್ ಮಿಸ್ ಗ್ರ್ಯಾಂಡ್ ಇಂಡಿಯಾ 2020 ಪಟ್ಟ ಪಡೆದುಕೊಂಡರು. ಉತ್ತರ ಪ್ರದೇಶದ ಮಾನ್ಯಾ ಸಿಂಗ್ ಮಿಸ್ ಇಂಡಿಯಾ 2020 ರನ್ನರ್ ಅಪ್ ಆಗಿ ಕಿರೀಟವನ್ನು ಪಡೆದುಕೊಂಡರು.
ಬಿಗ್ ಬಾಸ್ ಕನ್ನಡ – 8 ಆರಂಭಕ್ಕೆ ಡೇಟ್ ಫಿಕ್ಸ್..! ಈ ಸೀಸನ್ ನಲ್ಲಿ ಕೆಲ ಬದಲಾವಣೆಗಳಾಗಲಿವೆ..!
“ಹೂ ಈಸ್ ಈಶ್ವರಪ್ಪ, ಅವ್ರ ಸರ್ಟಿಫಿಕೇಟ್ ಬೇಕಿಲ್ಲ : ಸಿದ್ದರಾಮಯ್ಯ ಟಾಂಗ್
ಭಾರತದ ‘ಜಲ್ಲಿಕಟ್ಟು’ – ‘ಆಸ್ಕರ್’ ರೇಸ್ ನಿಂದ ಔಟ್..!
ಬಿಗ್ ಬಾಸ್ ಕನ್ನಡ -8 : ದೊಡ್ಮನೆಗೆ ‘ಅಗ್ನಿಸಾಕ್ಷಿ ಅಂಜಲಿ’ ಎಂಟ್ರಿ ..!
ಬಿಗ್ ಬಾಸ್ ಕನ್ನಡ – 8 ಆರಂಭಕ್ಕೆ ಡೇಟ್ ಫಿಕ್ಸ್..! ಈ ಸೀಸನ್ ನಲ್ಲಿ ಕೆಲ ಬದಲಾವಣೆಗಳಾಗಲಿವೆ..!
ಭಾರತದ ‘ಜಲ್ಲಿಕಟ್ಟು’ – ‘ಆಸ್ಕರ್’ ರೇಸ್ ನಿಂದ ಔಟ್..!
ಚಿತ್ರರಂಗ ಬೀದಿಗೆ ಇಳಿಯೋದ್ರಿಂದ ರೈತರ ಸಮಸ್ಯೆ ಪರಿಹಾರ ಆಗಲ್ಲ : ಶಿವಣ್ಣ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel