ಬಿಗ್ ಬಾಸ್ ಕನ್ನಡ -8 : ದೊಡ್ಮನೆಗೆ ‘ಅಗ್ನಿಸಾಕ್ಷಿ ಅಂಜಲಿ’ ಎಂಟ್ರಿ ..!
ಕನ್ನಡದ ಜನಪ್ರಿಯ ಧಾರವಾಹಿಯಾಗಿ ಕಿರುತೆರೆಯ ಅಭಿಮಾನಿಗಳನ್ನ ಸಿಕ್ಕಾಪಟ್ಟೆ ರಂಜಿಸಿದ್ದ ಅಗ್ನಿಸಾಕ್ಷಿಯ ಅಂಜಲಿ ಇದೀಗ ಬಿಗ್ ಬಾಸ್ ಮನೆಗೆ ಪಾದಾರ್ಪಣೆ ಮಾಡಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಹೌದು ಅಗ್ನಿಸಾಕ್ಷಿಯಲ್ಲಿ ಅಂಜಲಿಯಾಗಿ ಜನರ ಗಮನ ಸೆಳೆದಿದ್ದ ಕಿರುತೆರೆ ನಟಿ ಸುಕೃತಾ ಬಿಗ್ ಬಾಸ್ ಸೀಸನ್ 8 ರಲ್ಲಿ ಸ್ಪರ್ಧಿಯಾಗಿ ಆಡಲಿದ್ದಾರೆ ಎನ್ನಲಾಗ್ತಿದೆ.
ಬಿಗ್ ಬಾಸ್ ಕನ್ನಡ – 8 ಆರಂಭಕ್ಕೆ ಡೇಟ್ ಫಿಕ್ಸ್..! ಈ ಸೀಸನ್ ನಲ್ಲಿ ಕೆಲ ಬದಲಾವಣೆಗಳಾಗಲಿವೆ..!
ಬಿಗ್ ಬಾಸ್ ಕನ್ನಡ ಸೀಸನ್-8 ಇದೇ ತಿಂಗಳ ಕೊನೆಯಲ್ಲಿ ಅಂದರೆ ಫೆಬ್ರವರಿ 28ಕ್ಕೆ ಪ್ರಾರಂಭವಾಗಲಿರೋದು ಬಹುತೇಕ ಫೈನಲ್ ಆಗಿದೆ. ಈ ಬಾರಿಯ ಬಿಗ್ ಬಾಸ್ ಗೆ ಯಾರೆಲ್ಲ ಹೋಗ್ತಾರೆ ಎನ್ನುವ ಚರ್ಚೆ ಜೋರಾಗಿ ನಡೆಯುತ್ತಿದೆ. ಈಗಾಗಲೇ ಸಾಕಷ್ಟು ಕಲಾವಿದರ ಹೆಸರುಗಳು ವೈರಲ್ ಆಗಿದೆ. ಯಾರೆಲ್ಲಾ ಇರಬಹುದು ಎನ್ನುವ ಕುತೂಹಲದ ನಡುವೆ ಈ ಲಿಸ್ಟ್ ನಲ್ಲಿ ಕಿರುತೆರೆಯ ಖ್ಯಾತ ನಟಿ ಸುಕೃತಾ ನಾಗ್ ಇರ್ತಾರೆ ಎನ್ನುವ ಮಾತುಗಳು ಕೇಳಿಬರುತ್ತಿದೆ.
ಭಾರತದ ‘ಜಲ್ಲಿಕಟ್ಟು’ – ‘ಆಸ್ಕರ್’ ರೇಸ್ ನಿಂದ ಔಟ್..!
ಇನ್ನೂ ನಟಿ ವಿನಯಾ ಪ್ರಸಾದ್, ಕೆಲ ಟಿಕ್ ಟಾಕ್ ಸ್ಟಾರ್ ಗಳು, ಡ್ರೋನ್ ಪ್ರತಾಪ್, ಖ್ಯಾತ ನಿರೂಪಕಿ ರಾಧಾ ಹಿರೇಗೌಡ , ಬ್ರಹ್ಮಗಂಟು ಗೀತಾ ಹೀಗೇ ಅನೇಕರ ಹೆಸರುಗಳು ಸ್ಫರ್ಧಿಗಳ ಲಿಸ್ಟ್ ನಲ್ಲಿದ್ದು, ಇದೆಲ್ಲಕ್ಕೂ ಉತ್ತರ ಫೆಬ್ರವರಿ 28 ಕ್ಕೆ ಸಿಗಲಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel