ಮಲೆನಾಡಿನಲ್ಲಿ ಮತ್ತೆ ಆವರಿಸಿದ ಮಂಗನಕಾಯಿಲೆ ಭೀತಿ : ಆರೋಗ್ಯ ಇಲಾಖೆಯಿಂದ ಹೈ ಅಲರ್ಟ್..
ಮಲೆನಾಡಿನಲ್ಲಿ ಮತ್ತೆ ಮಂಗನಕಾಯಿಲೆ ಆತಂಕ ಹುಟ್ಟಿಕೊಂಡಿದೆ. ಈ ವರ್ಷದಲ್ಲಿ ಮೊದಲ ಮಂಗನಕಾಯಿಲೆ (KFD) ಪ್ರಕರಣವೊಂದು ಪತ್ತೆಯಾಗಿದ್ದು, ಆತಂಕಕ್ಕೆ ಕಾರಣವಾಗಿದೆ. ಕೊಪ್ಪದಲ್ಲಿದ್ದ ಕೆಲಸ ಮಾಡುತ್ತಿದ್ದ ಬಾಳೆಹೊನ್ನೂರು ಮೂಲದ ವ್ಯಕ್ತಿಯಲ್ಲಿ ಕೆಎಫ್ ಡಿ ಪತ್ತೆಯಾಗಿದೆ. ಜ್ವರದಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಅರೋಗ್ಯ ಇಲಾಖೆ ಟೆಸ್ಟ್ ಗೆ ಕಳಿಸಿತ್ತು. ಈ ವೇಳೆ ಕೆಎಫ್ ಡಿ (ಮಂಗನ ಕಾಯಿಲೆ) ಇರುವುದು ಪತ್ತೆಯಾಗಿದೆ. ವಿಷಯ ತಿಳಿಯುತ್ತಿದ್ದಂತೆ ಜಿಲ್ಲಾ ಆರೋಗ್ಯ ಇಲಾಖೆ ಹೈ ಅಲರ್ಟ್ ಆಗಿದೆ.
ಮಲೆನಾಡಿನಲ್ಲಿ ಮತ್ತೆ ಮಂಗನಕಾಯಿಲೆ ಭೀತಿಯಾಗಿದ್ದು, ಆರೋಗ್ಯ ಇಲಾಖೆಯಿಂದ ಹೈ ಅಲರ್ಟ್ ಘೋಷಿಸಲಾಗಿದೆ. ಪ್ರಕರಣ ಪತ್ತೆಯಾದ ವ್ಯಕ್ತಿಯಿದ್ದ ಸ್ಥಳ ಹಾಗೂ ಸುತ್ತಮುತ್ತ ಪ್ರತಿ ವ್ಯಕ್ತಿಗಳ ಬಗ್ಗೆ ನಿಗಾ ಇಡಲಾಗಿದೆ. ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲೀ ಮಂಗನಕಾಯಿಲೆ ಭೀತಿ ಆವರಿಸಿದೆ.
kfd case : Manganakayile scare again in Malnad : High alert from health department..