ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ ಚಾಪ್ಟರ್-1 ಚಿತ್ರ ಕನ್ನಡವಷ್ಟೇ ಅಲ್ಲದೆ, ಬಿಡುಗಡೆ ಆದ ಇತರೆ ಭಾಷೆಗಳಲ್ಲೂ ಬಾಕ್ಸ್ ಆಫೀಸ್ ಚಿಂದಿ ಉಡಾಯಿಸಿತ್ತು. ಅದರಲ್ಲೂ ತೆಲುಗು ರಾಜ್ಯಗಳಾದ ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲೂ ಕೆಜಿಎಫ್ ಹಾಗೂ ರಾಕಿ ಭಾಯ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
ಈಗ ಇದೇ ಕೆಜಿಎಫ್ ಚಾಪ್ಟರ್ 1 ಚಿತ್ರವನ್ನ ತೆಲುಗು ಚಾನೆಲ್ ಒಂದು ಅಕ್ರಮವಾಗಿ ಪ್ರಸಾರ ಮಾಡಿದೆ. ತೆಲುಗಿನ Every ಅನ್ನುವ ಲೋಕಲ್ ಚಾನೆಲ್ ನಲ್ಲಿ ಸಿನಿಮಾ ಪ್ರಸಾರವಾಗಿದ್ದು, ಈಗ ಕೆಜಿಎಫ್ ಟೀಮ್, ಆ ಚಾನೆಲ್ ವಿರುದ್ಧ ಕಾನೂನು ಹೋರಾಟ ನಡೆಸಲು ಮುಂದಾಗಿದೆ.
A telugu local channel named #Every^ is playing KGF film illegally. We will move legally against them and sue for their actions. While the satellite deal is on talks and almost finalised, a cable channel does this. We have ample proof woth screen shots, videos of the same. pic.twitter.com/UlxxguPWzg
— Karthik Gowda (@Karthik1423) May 8, 2020
ಈ ಬಗ್ಗೆ ಕೆಜಿಎಫ್ ನ ವಿತರಕ ಕಾರ್ತಿಕ್ ಗೌಡ ಟ್ವೀಟ್ ಮಾಡಿದ್ದು, ಸ್ಯಾಟಲೈಟ್ ಹಕ್ಕುಗಳ ಮಾರಾಟದ ಬಗ್ಗೆ ಮಾತುಕತೆ ಫೈನಲ್ ಹಂತದಲ್ಲಿರುವಾಗಲೇ ಇಂತಹ ಘಟನೆ ನಡೆದಿದೆ. ಆ ಚಾನೆಲ್ ವಿರುದ್ಧ ನಾವು ಕಾನೂನು ಹೋರಾಟ ಮಾಡುತ್ತೇವೆ. ನಮ್ಮ ಬಳಿ ಚಿತ್ರ ಪ್ರಸಾರವಾಗುತ್ತಿರುವ ಸ್ಕ್ರೀನ್ ಶಾಟ್, ವಿಡಿಯೋ ಸಾಕ್ಷ್ಯಾಧಾರಗಳಿವೆ ಎಂದಿದ್ದಾರೆ.