‘KGF 2 50days to go’… ಕ್ರೀಡಾ ಮನರಂಜನಾ ಸುದ್ದಿ ನಿಮಗಾಗಿ
01. ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಸಿನಿಮಾ ತಂಡಕ್ಕೆ ಸೆಡ್ಡು ಹೊಡೆದು ರಾಖಿ ಭಾಯ್ ಅಭಿಮಾನಿಗಳು ಪ್ರಚಾರದ ಅಖಾಡಕ್ಕೆ ಇಳಿಸಿದ್ದಾರೆ. ಏಪ್ರಿಲ್ 14ಕ್ಕೆ ಕೆಜಿಎಫ್ 2 ಸಿನಿಮಾ ರಿಲೀಸ್ ಆಗಲಿದ್ದು, ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ‘KGF 2 50days to go’ ಅಭಿಯಾನವನ್ನು ಆರಂಭಿಸಿದ್ದಾರೆ.
KGF -2 ಚಿತ್ರತಂಡಕ್ಕೆ ಸೆಡ್ಡು ಅಖಾಡಕ್ಕಿಳಿದ ರಾಖಿ ಭಾಯ್ ಫ್ಯಾನ್ಸ್
02. ಎರಡು ಬಾರಿ ರಾಷ್ಟ್ರ ಪ್ರಶಸ್ತಿ ವಿಜೇತೆ ಮಲಯಾಳಂನ ಖ್ಯಾತ ನಟಿ ಲಲಿತಾ ಅವರು ವಿಧಿವಶರಾಗಿದ್ದಾರೆ. ‘ಕೂಟುಕುಟುಂಬಂ’ ಸಿನಿಮಾದ ಮೂಲಕ 1969ರಲ್ಲಿ ಮಲಯಾಳಂ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಲಲಿತಾ ಅವರು, ಮಲಯಾಳಂನ ಬಹುತೇಕ ಸೂಪರ್ ಸ್ಟಾರ್ ಗಳ ಜತೆ ನಟಿಸಿದ್ದಾರೆ.
Lalita | ರಾಷ್ಟ್ರ ಪ್ರಶಸ್ತಿ ವಿಜೇತೆ ನಟಿ ಲಲಿತಾ ನಿಧನ
03. ಪವರ್ ಸ್ಟಾರ್ ಪವನ್ ಕಲ್ಯಾಣ್ ಅಭಿನಯದ ಭೀಮ್ಲಾ ನಾಯಕ್ ಸಿನಿಮಾ ಟ್ರೈಲರ್ ಬಗ್ಗೆ ಮೆಗಾಪವರ್ ಸ್ಟಾರ್ ರಾಮ್ ಚರಣ್ ರಿವ್ಯೂ ನೀಡಿದ್ದಾರೆ. ಭೀಮ್ಲಾ ನಾಯಕ್ ಟ್ರೈಲರ್ ಎಲೆಕ್ಟ್ರಿಫೈಯಿಂಗ್ ರೀತಿ ಇದೆ. ಪವನ್ ಕಲ್ಯಾಣ್ ಅವರ ಪ್ರತಿ ಡೈಲಾಗ್, ಆಕ್ಷನ್ ಪವರ್ ಫುಲ್ ಆಗಿದೆ ಎಂದಿದ್ದಾರೆ.
Ram Charan | ಪವರ್ ಸ್ಟಾರ್ ಟ್ರೈಲರ್ ಗೆ ಮೆಗಾಪವರ್ ರಿವ್ಯೂ
04. ಟೀಂ ಇಂಡಿಯಾ ಸ್ಟಾರ್ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿಗೆ ಸಂಬಂಧಿಸಿದ ಫೋಟೋವೊಂದು ಸದ್ಯ ಇಂಟರ್ ನೆಟ್ ನಲ್ಲಿ ಹಲ್ ಚಲ್ ಸೃಷ್ಠಿ ಮಾಡಿದೆ.. ಸ್ವತಃ ಕೊಹ್ಲಿಯೇ ಟ್ವಿಟ್ಟರ್ ನಲ್ಲಿ ಶೇರ್ ಮಾಡಿರುವ ಫೋಟೋಗೆ ನೆಟ್ಟಿಗರಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವೇ ನಿಮಿಷಗಳಲ್ಲಿ ಲಕ್ಷಾಂತರ ಲೈಕ್‌ಗಳು ಮತ್ತು ಸಾವಿರಾರು ಕಾಮೆಂಟ್‌ಗಳು ಬಂದಿವೆ.
Kohli | ಈ ಫೋಟೋದಲ್ಲಿ ವಿರಾಟ್ ಎಲ್ಲಿದ್ದಾರೆ..?
05. ರೋಹಿತ್ ಶರ್ಮಾ ಪ್ರಸ್ತುತ ಮೂರು ಮಾದರಿ ಕ್ರಿಕೆಟ್ ನ ನಾಯಕರಾಗಿದ್ದಾರೆ. ಇದರಿಂದಾಗಿ ಅವರು ವರ್ಷ ಪೂರ್ತಿ ಕ್ರಿಕೆಟ್ ಆಡಬೇಕು. ಇದು ರೋಹಿತ್ ಶರ್ಮಾ ಗೆ ಅತಿ ದೊಡ್ಡ ಸವಾಲ್ ಆಗಿರಲಿದೆ ಎಂದು ಟೀಂ ಇಂಡಿಯಾದ ಹಿರಿಯ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಹೇಳಿದ್ದಾರೆ.
Dinesh karthik | ರೋಹಿತ್ ಗೆ ಈಗ 34 ವರ್ಷ.. ಇನ್ನೇಷ್ಟು ದಿನ ಕ್ರಿಕೆಟ್ ಆಡಬಲ್ಲ
kgf-2-50days-to-go-film sports news








