KGF 2 : ಡಾಕ್ಟರ್ ಸ್ಟ್ರೇಂಜ್ ಗೂ ಬಗ್ಗಲ್ಲ…!!! ಯಾರಿಗೂ ಜಗ್ಗಲ್ಲ..!! KGF 2 ಹವಾ ನಿಂತಿಲ್ಲ..!!
ಬಾಕ್ಸ್ ಆಫೀಸ್ ನಲ್ಲಿ ಡಾಕ್ಟರ್ ಸ್ಟ್ರೇಂಜ್ ರಾಕಿ ಭಾಯ್ ಗೆ ಟಕ್ಕರ್ ಕೊಡೋಕೆ ಬಂದ್ರು ರಾಕಿ ಭಾಯ್ ಹವಾ ಮಾತ್ರ ಕೊಂಚವೂ ತಗ್ಗಿಲ್ಲ.. ಈಗಲೂ ಬಾಕ್ಸ್ ಆಫೀಸ್ ರೂಲ್ ಮಾಡುತ್ತಿರುವುದು KGF 2 ನೇ..
ಸಿನಿಮಾ 27 ನೇ ದಿನವೂ ಬಾಕ್ಸ್ ಆಫೀಸ್ ಡಾಮಿನೇಟ್ ಮಾಡ್ತಿದೆ.. ವರ್ಲ್ಡ್ ವೈಡ್ ಸಿನಿಮಾ 1200 ಕೋಟಿ ಕಲೆಕ್ಷನ್ ದಾಟಿದ್ರೂ ಇನ್ನೂ ಕ್ರೇಜ್ ತಗ್ಗಿಲ್ಲ.. ಅದ್ರಲ್ಲೂ ಹಾಲಿವುಡ್ ಸಿನಿಮಾ ಡಾಕ್ಟರ್ ಸ್ಟ್ರೇಂಜ್ ನ ಎಫೆಕ್ಟ್ ಕೂಡ ಸಿನಿಮಾಗೆ ತಟ್ಟಿಲ್ಲ..
25ನೇ ದಿನ ಹಾಗೂ 26ನೇ ದಿನಕ್ಕೆ ಹೋಲಿಸಿದರೆ, 27ನೇ ದಿನ ‘ಕೆಜಿಎಫ್ 2’ ಕಲೆಕ್ಷನ್ ಇಳಿಕೆ ಕಂಡಿದೆ. 25 ಹಾಗೂ 26ನೇ ದಿನ ಬಾಕ್ಸಾಫೀಸ್‌ನಲ್ಲಿ ಬರೋಬ್ಬರಿ 24.65 ಹಾಗೂ 25.42 ಕೋಟಿ ಗಳಿಕೆ ಕಂಡಿತ್ತು. ಆದರೆ, 27ನೇ ದಿನ ಸಿನಿಮಾ ಕಲೆಕ್ಷನ್ 8.07 ಕೋಟಿ ಗಳಿಸಿದೆ.








