ನಟ ಯಶ್ (Yash)ಗೆ ಜಗತ್ತಿನಾದ್ಯಂತ ಅಭಿಮಾನಿಗಳನ್ನು ಹೊಂದಿದ್ದಾರೆ. ಹೀಗಾಗಿಯೇ ಕೆಜಿಎಫ್ 2 ಸಿನಿಮಾ ಹಲವು ರಾಷ್ಟ್ರಗಳಲ್ಲಿ ಬಿಡುಗಡೆಯಾಗಿತ್ತು. ಸದ್ಯ ಈ ಚಿತ್ರವು ಜಪಾನ್ ನಲ್ಲಿ ಬಿಡುಗಡೆಯಾಗುತ್ತಿದೆ. ಈ ಕುರಿತು ನಟ ಯಶ್ ಅವರು ವಿಡಿಯೋ ಬಿಡುಗಡೆ ಮಾಡಿದ್ದಾರೆ. ಜಪಾನಿ ಭಾಷೆಯಲ್ಲಿ ಅವರು ಮಾತನಾಡಿದ್ದಾರೆ. ಅಲ್ಲದೇ, ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ.
‘ಕೆಜಿಎಫ್ 2’ ಯಶ್ ಅವರ ವೃತ್ತಿ ಬದುಕನ್ನೇ ಬದಲಾಯಿಸಿದೆ. ‘ಕೆಜಿಎಫ್ 1’ ಹಾಗೂ ‘ಕೆಜಿಎಫ್ 2’ ಚಿತ್ರ ಜಪಾನಿ ಭಾಷೆಗೆ ಡಬ್ ಆಗಿ ಅಲ್ಲಿನ ಥಿಯೇಟರ್ನಲ್ಲಿ ಬಿಡುಗಡೆ ಆಗುತ್ತಿದೆ. ಈ ಮೂಲಕ ಚಿತ್ರದ ಗಳಿಕೆ ಮತ್ತಷ್ಟು ಹೆಚ್ಚಲಿದೆ. ಈ ಬಗ್ಗೆ ವಿಡಿಯೋ ಮಾಡಿರುವ ಯಶ್ ಆರಂಭದಲ್ಲಿ ಜಪಾನಿ ಭಾಷೆಯಲ್ಲಿ ಮಾತನಾಡಿದ್ದಾರೆ. ‘ನಮಸ್ತೆ ಜಪಾನ್. ನನ್ನ ‘ಕೆಜಿಎಫ್ 1’ ಹಾಗೂ ‘ಕೆಜಿಎಫ್ 2’ ಸಿನಿಮಾ ಜಪಾನ್ನಲ್ಲಿ ರಿಲೀಸ್ ಆಗುತ್ತಿದೆ. ‘ಕೆಜಿಎಫ್’ ಸಿನಿಮಾದಲ್ಲಿ ಸಾಕಷ್ಟು ಮನರಂಜನೆ ಇದೆ. ತಪ್ಪದೆ ನೋಡಿ ಎಂದು ಮನವಿ ಮಾಡಿದ್ದಾರೆ.








