KGF 2 – ಅನಂತ್ ನಾಗ ಜಾಗಕ್ಕೆ ಬಂದ್ರಾ ಪ್ರಕಾಶ್ ರಾಜ್…! ಪಾತ್ರದ ಅಸಲಿಯತ್ತೇನು..?
KGF ಚಾಪ್ಟರ್ 2 ಸಿನಿಮಾದಲ್ಲಿ ಬಹುಭಾಷಾ ನಟ ಪ್ರಕಾಶ್ ರಾಜ್ ಅವರು ಎಂಟ್ರಿಯಾದಾಗಿನಿಂದಲೂ ಸಾಕಷ್ಟು ಚರ್ಚೆಗಳು ಪ್ರಾರಂಭವಾಗಿದೆ. ಅನಂತ್ ನಾಜ್ ಜಾಗಕ್ಕೆ ಪ್ರಕಾಶ್ ರೈ ಅವರು ರಿಪ್ಲೇಸ್ ಆಗಿದ್ದಾರಾ.. ಎಂಬ ಗೊಂದಲಗಳು ಶುರುವಾಗಿದ್ದು, KGF ಮೇಕರ್ಸ್ ವಿರುದ್ಧ ಅನಂತ್ ನಾಗ್ ಫ್ಯಾನ್ಸ್ ಅಸಮಾದಾನಗಳನ್ನ ಹೊರಹಾಕಿದ್ದರು. ಸಿನಿಮಾದಿಂದ ಅನಂತ್ ನಾಗ್ ಹೊರನಡೆದಿದ್ದು, ಇದಕ್ಕೆ ಸಿನಿಮಾ ಮೇಕರ್ಸ್ ಜೊತೆಗಿನ ವೈಮನಸ್ಸು ಕಾರಣ ಎನ್ನಲಾಗಿತ್ತು.
ಆದ್ರೆ ಸಿನಿಮಾ ತಂಡ ಹಲವು ಬಾರಿ ಈ ಕುರಿತು ಸ್ಪಷ್ಟನೆ ನೀಡಿ ಅನಂತ್ ನಾಗ್ ಅವರ ಜಾಗಕ್ಕೆ ಪ್ರಕಾಶ್ ರಾಜ್ ಅವರನ್ನ ಕರೆತರಲಾಗಿಲ್ಲ. ಬದಲಾಗಿ ಅನಂತ್ ಅವರ ಪಾತ್ರವೇ ಬೇರೆ ಎಂದು ಹೇಳಿತ್ತು. ಇದೀಗ ಕಡೆಗೂ ಸಿನಿಮಾದಲ್ಲಿ ಅನಂತ್ ನಾಗ್ ಅವರ ಪಾತ್ರದ ರಹಸ್ಯ ರಿವೀಲ್ ಆಗಿದ್ದು, ಕೆಜಿಎಫ್ ಪ್ರಿಯರ ಕುತೂಹಲಕ್ಕೂ ತೆರೆಬಿದ್ದಿದೆ. ಅಂದ್ಹಾಗೆ ಪ್ರಕಾಶ್ ರಾಜ್ ಅವರು ಈ ಸಿನಿಮಾದಲ್ಲಿ ವಿಜಯೇಂದ್ರ ಇಂಗಳಗಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಹೌದು ಚಾಪ್ಟರ್ 1 ರಲ್ಲಿ ಅನಂತ್ ನಾಗ್ ಆನಂದ್ ಇಂಗಳಗಿಯಾಗಿ ಆ ಪಾತ್ರದ ಮೂಲಕ ಜನರ ಗಮನ ಸೆಳೆದಿದ್ದರು. ಇದೀಗ ವಿಜಯೇಂದ್ರ ಇಂಗಳಗಿಯಾಗಿ ಪ್ರಕಾಶ್ ರೈ ಕಾಣಿಸಿಕೊಳ್ತಿದ್ದಾರೆ.
ಹೌದು ಮಾರ್ಚ್ 26ಕ್ಕೆ ಪ್ರಕಾಶ್ ರೈ ಅವರ ಹುಟ್ಟುಹಬ್ಬದ ವಿಶೇಷವಾಗಿ ಹೊಂಬಾಳೆ ಫಿಲಂಸ್ ಅನಂತ್ ನಾಗ್ ಅವರ ಪೋಸ್ಟರ್ ರಿಲೀಸ್ ಮಾಡಿ , ಸಿನಿಮಾದಲ್ಲಿ ಅವರ ಪಾತ್ರದ ಲುಕ್ ರಿವೀಲ್ ಮಾಡಿದೆ. ಬಿಡುಗಡೆ ಮಾಡಿರುವ ಪೋಸ್ಟರ್ನಲ್ಲಿ ಪ್ರಕಾಶ್ ರಾಜ್ ಪಾತ್ರದ ಹೆಸರು ಬಹಿರಂಗವಾಗಿದೆ. ಇದರಿಂದ ಅನಂತ್ ನಾಗ್ ಪಾತ್ರವೇ ಬೇರೆ , ಪ್ರಕಾಶ್ ರಾಜ್ ಪಾತ್ರವೇ ಬೇರೆ ಎಂಬುದು ಸ್ಪಷ್ಟವಾಗಿದೆ.
ಇನ್ನೂ ಪೋಸ್ಟರ್ ಹೆಸರನ್ನ ನೋಡಿದ್ರೆ ಈ ಸಿನಿಮಾದಲ್ಲಿ ಪ್ರಕಾಶ್ ರಾಜ್ ಅಂದ್ರೆ ವಿಜಯೇಂದ್ರ ಇಂಗಳಗಿ ಪಾತ್ರ ಆನಂದ್ ಇಂಗಳಗಿ ಮಗ ಇರಬಹುದಾ ಎಂಬ ಪ್ರಶ್ನೆ ಇದೆ. ಇನ್ನೂ ಮಾಳವಿಕಾಗೆ ಮುಂದಿನ ಕಥೆ ಅವರೇ ಮುಂದುವರೆರೋದು ವೈರಲ್ ಫೋಟೋಸ್ ಗಳಲ್ಲಿ ಗೊತ್ತಾಗ್ತಿದೆ.
ಹಿರಿಯ ಗಾಯಕಿ ಆಶಾ ಭೋಸ್ಲೆಗೆ ಮಹಾರಾಷ್ಟ್ರ ಭೂಷಣ್ -2020 ಪ್ರಶಸ್ತಿ