ನಟ ಯಶ್ ನಾಯಕನಾಗಿ ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ 2 ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಬಿರುಗಾಳಿ ಎಬ್ಬಿಸಿದೆ.
ಕಲೆಕ್ಷನ್ ಮಾತ್ರವಲ್ಲದೆ ಪ್ರೇಕ್ಷಕರಿಂದಲೂ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಬಾಲಿವುಡ್ ನಲ್ಲಿ ರೂ. 400 ಕೋಟಿಗೂ ಅಧಿಕ ಲೂಟಿ ಮಾಡಿದೆ.
ಸಿನಿಮಾ 39 ದಿನ ಕಳೆದರು ಬಾಕ್ಸಾಫೀಸ್ನಲ್ಲಿ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ವರ್ಲ್ಡ್ ವೈಡ್ ಯಶ್ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಕೆಜಿಎಫ್ 2 ಸಿನಿಮಾ ಒಟ್ಟು 1221.13 ಕೋಟಿ ಬಾಚಿದೆ.
ಇತ್ತೀಚೆಗಷ್ಟೇ ಒಟಿಟಿಯಲ್ಲಿ `ಕೆಜಿಎಫ್ 2′ ಚಿತ್ರ ತೆರೆಕಂಡಿತ್ತು. ಆದರು ಗಳಿಕೆಯಲ್ಲಿ ಎಲ್ಲೂ ಹಿಂದೆ ಬೀಳದೇ ಥಿಯೇಟರ್ನಲ್ಲಿ ಯಶ್ ಚಿತ್ರ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಬಾಲಿವುಡ್ ಸಿನಿಮಾಗೆ ಈಗಲೂ ಖಡಕ್ ಪೈಪೋಟಿ ಕೊಡುತ್ತಾ ಯಶ್ ಚಿತ್ರ ಮುಂದೆ ಸಾಗುತ್ತಿದೆ.