8ಕ್ಕೆ ಕೆಜಿಎಫ್-2 ಟೀಸರ್ : ನ್ಯೂಸ್ ಪೇಪರ್ ಪೋಸ್ಟ್ ಮಾಡಿ ಗುಡ್ ನ್ಯೂಸ್ ಕೊಟ್ಟ ಪ್ರಶಾಂತ್
ಬೆಂಗಳೂರು : ಕೆಜಿಎಫ್ ಸಿನಿಮಾ ನೋಡಿದ ಎಲ್ಲರಲ್ಲೂ ಕೆಲ ಪ್ರಶ್ನೆಗಳು ಉಳಿದುಕೊಳ್ತಾವೆ ಹಾಗೇ ಕೆಲ ಪ್ರಶ್ನೆಗಳು ಕಾಡಲು ಶುರು ಮಾಡುತ್ವೆ. ಅದರಲ್ಲಿ ಪ್ರಮುಖವಾಗಿ ರಾಖಿಭಾಯ್ ವಿಲನ್ನಾ..? ಅಥವಾ ಹೀರೋನಾ..? ಅಂತ.
ಕೆಜಿಎಫ್ ಸಿನಿಮಾ ನೋಡಿದ ಬಹುತೇಕರಲ್ಲಿ ಈ ಪ್ರಶ್ನೆ ಕಾಡುತ್ತಿರುತ್ತೆ. ಈ ಪ್ರಶ್ನೆಗಳಿಗೆ ಕೆಜಿಎಫ್ ಬ್ರಹ್ಮ ಪ್ರಶಾಂತ್ ನೀಲ್ ಯಶ್ ಬರ್ತ್ ಡೇ ಅಂದ್ರೆ ಜನವರಿ ಏಂಟರಂದು ಉತ್ತರ ನೀಡುವ ಸಾಧ್ಯತೆಗಳಿವೆ. ಅಂದ್ರೆ ಜನವರಿ ಏಂಟರಂದು ಸಿನಿಮಾ ರಸಿಕರು ಎದುರು ನೋಡುತ್ತಿರೋ ಕೆಜಿಎಫ್ -2 ಸಿನಿಮಾದ ಟೀಸರ್ ರಿಲೀಸ್ ಆಗಲಿದೆ.
ಹೌದು..! ಚಿತ್ರದ ಟೀಸರ್ ರಿಲೀಸ್ ಮಾಡುವ ಬಗ್ಗೆ ಸ್ವತಃ ಪ್ರಶಾಂತ್ ನೀಲ್ ಅವರೇ ಟ್ವಿಟ್ಟರ್ ನಲ್ಲಿ ಮಾಹಿತಿ ನೀಡಿದ್ದಾರೆ.
ನೀಲ್ ತಮ್ಮ ಟ್ವೀಟ್ ನಲ್ಲಿ, ಕಪ್ಪ ಬಿಳುಪಿನ ಕೆಜಿಎಫ್ ಟೈಮ್ಸ್ ಎಂಬ ಮಾಸಿಕ ಪತ್ರಿಕೆಯನ್ನ ಪೋಸ್ಟ್ ಮಾಡಿದ್ದಾರೆ. ಹಾಗೇ ರಿವೀಲಿಂಗ್ ದಿ ಎರಾ ಆಫ್ ಕೆಜಿಎಫ್ ಅಂತ ಬರೆದುಕೊಂಡಿದ್ದಾರೆ.
ಕೆಜಿಎಫ್ ಟೈಮ್ಸ್ ಎಂದು ರಿಲೀಸ್ ಮಾಡಿರುವ ಫೋಟೋದಲ್ಲಿ ನಾಯಕನಾ ಅಥವಾ ಖಳನಾಯಕನಾ..? ಎಂಬ ಹೆಡ್ ಲೈನ್ ಇದೆ. ಒಬ್ಬ ನಾಯಕನನ್ನು ಅವನ ಒಳ್ಳೆಯ ಕಾರ್ಯಗಳಿಂದ ಮತ್ತು ಖಳನಾಯಕನನ್ನು ಅವರ ಕೆಟ್ಟ ಕಾರ್ಯಗಳಿಂದ ನಿರ್ಣಯಿಸಲಾಗುತ್ತದೆ. ಒಬ್ಬ ವ್ಯಕ್ತಿ ಅವೆರಡನ್ನು ನಿರ್ವಹಿಸಿದ್ರೆ ಅರನು ನಾಯಕನಾ ಅಥವಾ ಖಳನಾಯಕನಾ..? ಅಂತ ಬರೆಯಲಾಗಿದೆ. ಹಾಗೇ ಕೆಜಿಎಫ್ ಚಾಪ್ಟರ್ ಒಂದರಲ್ಲಿರುವ ಕೆಲ ಡೈಲಾಗ್ ಗಳನ್ನು ಮುದ್ರಿಸಲಾಗಿದೆ.
ಇನ್ನೊಂದು ಟ್ವೀಟ್ ನಲ್ಲಿ ಕೆಜಿಎಫ್ -1 ಸಿನಿಮಾದ ಫೋಟೋವೊಂದನ್ನ ಪೋಸ್ಟ್ ಮಾಡಿ, ದಿ ಕೌಂಡೌನ್ ಟು ದಿ ಓಪನಿಂಗ್ ಆಫ್ ದಿ ಎಂಪೀರ್ ಡೋರ್ ಬಿಗಿನ್ಸ್ ನೌ ಅಂತ ಬರೆದುಕೊಂಡಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel










