ಕೆಜಿಎಫ್ – 2 ಟೀಸರ್… ರಾಕಿಂಗಃ.. ರಾಕಿಂಗಸ್ಯ.. ರಾಕಿಂಗೋಭ್ಯಃ

1 min read

ರಾಕಿಂಗ್ ಸ್ಟಾರ್ ಅಭಿಮಾನಿಗಳಿಗೆ ಡಬಲ್ ಧಮಾಕಾ..!

ಸೋಷಿಯಲ್ ಮೀಡಿಯಾದಲ್ಲಿ ರಾಖಿ ಭಾಯ್ ದೇ ಹವಾ…!

ಲೇಟ್ ಆಗಿ ಬಂದ್ರೂ ಲೇಟೆಸ್ಟ್ ಆಗಿ ಎಂಟ್ರಿ ಕೊಟ್ಟ ಕೆ ಜಿಎಫ್ -2 ಟೀಸರ್

ವಿದೇಶಿಗರಲ್ಲೂ ಸ್ಯಾಂಡಲ್ ವುಡ್ ಸಿನಿಮಾದ ಕ್ರೇಜ್

ಕೆಜಿಎಫ್ ನ ಫ್ಯಾನ್ ಅಂತೆ ಮಳಯಾಳಂ ನ ಈ ಸ್ಟಾರ್ ನಟ

ಅವಧಿಗೂ ಮುನ್ನವೇ ರಿಲೀಸ್ ಆಯ್ತು ಟೀಸರ್ : ಲೀಕ್ ಮಾಡಿದೋರಿಗೆ ಹೇಳಿದ್ದೇನು ನಮ್ಮ ರಾಖಿ ಭಾಯ್…!

ಟೀಸರ್ ನಲ್ಲಿ ಅಧೀರನ ಮುಖ ಅಸ್ಪಷ್ಟ : ರವೀನಾ ಟಂಡನ್ ಲುಕ್ ಸೂಪರ್ರೋ ಸೂಪರ್..!

ರಿಲೀಸ್ ಆದ 49 ನಿಮಿಷದಲ್ಲೇ 5 ಮಿಲಿಯನ್ ವೀವ್ಸ್

ಕೆಜಿಎಫ್ ಟೀಸರ್ ಗೆ ಏನಂತಾರೆ ಜನ..! ನೆಟ್ಟಿಗರ ಹಾರ್ಟ್ ಬೀಟ್ ಹೆಚ್ಚಿಸಿದ ಈ ಟೀಸರ್ ಹೇಗಿದೆ..!

ಯೂಟ್ಯೂಬ್ ನಲ್ಲಿ ಧೂಳೆಬ್ಬಿಸಿ ರೆಕಾರ್ಡ್ ಗಳ ಬ್ರೇಕ್ ಮಾಡಿ ಅಬ್ಬರಿಸುತ್ತಿರುವ ಕೆಜಿಎಫ್ ಟೀಸರ್ ನಲ್ಲಿ ಏನೆಲ್ಲಾ ವಿಶೇಷತೆಗಳಿದೆ ಗೊತ್ತಾ…!

ಕೆಜಿಎಫ್ ಟೀಸರ್ ನ ರಿವೀವ್ ಮಾಡೋಕು ಮುನ್ನ ರಾಕಿಂಗ್ ಸ್ಟಾರ್ ಯಶ್ ಗೆ ನಮ್ಮ ಕಡೆ ಇಂದ ಹುಟ್ಟು ಹಬ್ಬದ ಶುಭಾಷಯಗಳು….!

ನೀವೂ ಸಹ ಕಮೆಂಟ್ ಮೂಲಕ ರಾಖಿ ಭಾಯ್ ಗೆ ವಿಷಸ್ ತಿಳಿಸಿ…

ಇಂದು ರಾಖಿ ಭಾಯ್ ಯಶ್ ಗೆ ಬರ್ತ್ ಡೇ ಸಂಭ್ರಮ… ಅವರ ಅಭಿಮಾನಿಗಳಿಗೆ ಹುಟ್ಟುಹಬ್ಬಕ್ಕೆ ಬಿಗ್ ಗಿಫ್ಟ್ ಸಿಕ್ಕಿದೆ. ಅದೇ ಕೆ ಜಿ ಎಫ್ -2 ಟೀಸರ್… ಎಸ್ ಇಂದು ಬರ್ತ್ ಡೇ ದಿನ ಟೀಸರ್ ರಿಲೀಸ್ ಆಗಬೇಕಿತ್ತು. ಆದ್ರೆ ಅವಧಿಗೂ ಮುನ್ನವೇ ಟೀಸರ್ ರಿಲೀಸ್ ಆದ ಕಾರಣ ಪ್ರಶಾಂತ್ ನೀಲ್ ಅವರು ಎಚ್ಚೆತ್ತು ಟೀಸರ್ ಅನ್ನ ನಿನ್ನೆ ರಾತ್ರಿಯೇ ರಿಲೀಸ್ ಮಾಡ್ಬಿಟರು.. ಗುರುವಾರ ರಾತ್ರಿ 9:29 ಕ್ಕೆ ಟೀಸರ್ ಬಿಡುಗಡೆ ಮಾಡಲಾಯ್ತು… ಇತ್ತ ಟೀಸರ್ ರಿಲೀಸ್ ಕೌಂಟ್ ಡೌನ್ ಆಗ್ತಿದ್ರೆ ಅತ್ತ ಫ್ಯಾನ್ಸ್ ಗಳ ಹಾರ್ಟ್ ಬೀಟ್ ಹೆಚ್ಚಾಗ್ತಿತ್ತು. ಟೀಸರ್ ರಿಲೀಸ್ ಆಗ್ತಿದ್ದಂತೆ… ಅಬ್ಬಬ್ಬಾ ಏನ್ ಕಮೆಂಟ್ ಗಳು, ಲೈಕ್ಸ್ ಗಳು… ಯಾರ ಸ್ಟೇಟಸ್ ನೋಡುದ್ರು, ಫೇಸ್ ಬುಕ್ ಪೋಸ್ಟ್ ನೋಡಿದ್ರು, ಕೆಜಿಎಫ್ 2 ಟೀಸರ್ ದೇ ಹವಾ.. ಯೂಟ್ಯೂಬ್, ಟ್ವಿಟ್ಟರ್, ಇನ್ಸ್ಟಾಗ್ರಾಮ್ ಎಲ್ಲಿ ನೋಡಿದ್ರೂ ರಾಖಿ ಭಾಯ್ ದೇ ಹವಾ… ಏನ್ ಟೀಸರ್ ಗುರು… ಸೂಪರ್…. ಲೇಟಾಗಿ ಎಂಟ್ರಿ ಕೊಟ್ರೂ ಅಣ್ಣ ಮಾಸ್ ಆಇ ಎಂಟ್ರಿಕೊಟ್ಟಿದ್ದಾರೆ… ಕನ್ನಡ ಸಿನಿಮಾ ಹವಾ…. ಹೀಗೆ ತರಹೇವಾರಿ ಕಮೆಂಟ್ ಗಳ ಮೂಲಕ ಕೇವಲ ಕನ್ನಡಾಭಿಮಾನಿಗಳಷ್ಟೇ ಅಲ್ಲ ಪರ ಭಾಷಾ ಅಭಿಮಾನಿಗಳು ರಾಖಿ ಭಾಯ್ ಕೆ ಜಿಎಫ್ 2 ಟೀಸರ್ , ಕಿಂಗ್ ಮೇಕರ್ ಪ್ರಶಾಂತ್ ನೀಲ್ ಅವರನ್ನ ಕೊಂಡಾಡ್ತಿದ್ದಾರೆ.kgf-2 teaser

ಇನ್ನೂ ಸಿನಿಮಾ ಟೀಸರ್ ಹೇಗಿದೆ ಅಂತ ನೋಡೋದಾದ್ರೆ..!

ಟೀಸರ್ನಲ್ಲಿ ನರಾಚಿಯ ಏರಿಯಲ್ ಲುಕ್ ಗಳನ್ನ ನೋಡ್ತಿದ್ರೆ ನಡುಕ ಹುಟ್ಟುತ್ತೆ. ಆಧುನಿಕ ಸ್ಟೆನ್ ಗನ್ ಗಳನ್ನು ಬಳಸಿ ವೈರಿಗಳ ಸೆದೆ ಬಡಿಯುತ್ತಿರುವ ರಾಕಿ ಭಾಯ್, ಬಿಸಿಯಾದ ಗನ್ ನಿಂದ ಸಿಗರೇಟು ಹೊತ್ತಿಸುವ ಸ್ಟೈಲ್ ನಿಂದ ಅಭಿಮಾನಿಗಳಿಗೆ ಹುಚ್ಚು ಹಿಡಿಸುತ್ತಿದ್ದಾರೆ. ರಾಖಿ ಭಾಯ್ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ಇನ್ನೂ ಅತಿ ರೋಂಚನಾಕಾರಿ ಅಧೀರನ ಲುಕ್ ಅಷ್ಟು ಸ್ಪಷ್ಟವಾಗಿ ಕಾಣದೇ ಹೋದ್ರೂ ಅಭಿಮಾನಿಗಳ ನಿರೀಕ್ಷೆ ಹುಸಿಯಾಗಿಸಿಲ್ಲ.. ಇತ್ತ ಕ್ಯೂರಿಯಾಸಿಟಿ ಹೆಚ್ಚಿಸಿದ್ದ ರಿವೀನಾ ತಂಡನ್ ಲುಕ್ ಸಹ ಸಖತ್ತಾಗಿದೆ. ಪಾರ್ಲಿಮೆಂಟ್ನಲ್ಲಿ ಗತ್ತಿನಿಂದ ಹೆಜ್ಜೆ ಹಾಕುತ್ತಿರುವ ನಟಿ ರವೀನಾ ಟಂಡನ್ ಎಂಟ್ರಿಗೆ ವಾವ್ ಅಂತಿದ್ದಾರೆ ನೆಟಿಜನ್ಸ್.

ಇತ್ತ ರಾಖಿ ಭಾಯ್ ಗಾಗಿ ಕಾಯ್ತಾಯಿರೋ ಮೀರಾ, ರಾಕಿ ಭಾಯ್ ವಿರೋಧಿ ಅಲೆ ಆರ್ಭಟಕ್ಕೆ ಓ ಮೈ ಗಾಡ್ ಅಂತಿದ್ದಾರೆ ಫ್ಯಾನ್ಸ್… ಸಿನಿಮಾ ಯಾವಾಗ ರಿಲೀಸ್ ಅಂತ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನ ಕೇಳ್ತಿದ್ದಾರೆ. ಇನ್ನೂ ಸಿನಿಮಾದ ಸೆನ್ಷೇಷನಲ್ ಮ್ಯೂಸಿಕ್, ಹಿನ್ನೆಲೆ ಸಂಗೀತ ಅಭಿಮಾನಿಗಳನ್ನ ರೋಮಾಂಚನ ಗೊಳಿಸಿದೆ.

ಟೀಸರ್ ಲೀಕ್ ಮಾಡಿದವರಿಗೆ ಯಶ್ ಹೇಳಿದ್ದೇನು..!
ಯಾರೋ ಪುಣ್ಯಾತ್ಮರು ಮಹಾನುಭಾವರು ಟೀಸರ್ ಲೀಕ್ ಮಾಡಿದ್ದಾರೆ. ಅವರಿಗೆ ಏನು ಸಂತೋಷ ಸಿಗುತ್ತೋ ಗೊತ್ತಿಲ್ಲ, ದೇವರು ಅವರಿಗೆ ಒಳ್ಳೆಯದು ಮಾಡಲಿ ಅಂತ ರಾಖಿ ಭಾಯ್ ತಮ್ಮದೇ ರೀತಿಯಲ್ಲಿ ಸಿಂಪಲ್ ಆಗಿ ಹೇಳಿದ್ರೂ ಅವರ ಮಾತಲ್ಲಿ ಆ ಗತ್ತು ಬೇಸರ ಎದ್ದು ಕಾಣ್ತಿತ್ತು..kgf-2 teaser

ಹೊಂಬಾಳೆ ಫಿಲಂಸ್ ಯ್ಯೂಟ್ಯೂಬ್ ಚಾನಲ್ ನಲ್ಲಿ ಟೀಸರ್ ಬಿಡುಗಡೆಯಾಗಿದೆ. ನೆಟ್ಟಿಗರು ಅಭಿಮಾನಿಗಳಷ್ಟೇ ಅಲ್ಲ ಸೆಲೆಬ್ರಿಟಿಗಳು ಸಹ ಟೀಸರ್ ನೋಡಿ ಮೆಚ್ಚಿಕೊಂಡಿದ್ದಾರೆ. ರಾಖಿ ಭಾಯ್ ಲುಕ್ ಗೆ ಸರಿ ಸಾಟಿ ಯಾರು ಅಂತ ಮಾತನಾಡಿಕೊಳ್ತಿದ್ದಾರೆ ಅಭಿಮಾನಿಗಳು. ಇನ್ನೂ ಯೂಟ್ಯೂಬ್ ನಲ್ಲಿ ಟ್ರೆಂಡಿಂಗ್ ನಲ್ಲಿರೋ ಟೀಸರ್ ಈಗಾಗಲೇ ಮಿಲಿಯನ್ ಗಟ್ಟಲೇ ವೀವ್ಸ್, ಲೈಕ್ಸ್ ಗಳು ಸಿಕ್ಕಿವೆ. ಕಮೆಂಟ್ಸ್ ಗಳು ಹರಿದುಬರ್ತಿವೆ. ಕೆಜಿಎಫ್ ಟೀಸರ್ ರಿಲೀಸ್ ಆದ ಕೇವಲ 49 ನಿಮಿಷದಲ್ಲಿ 5 ಮಿಲಿಯನ್ ವೀಕ್ಷಣೆ ಕಂಡಿದೆ. ಇಡೀ ಬಾರತೀಯ ಸಿನಿಮಾ ರಂಗವೇ ಜಾತಕ ಪಕ್ಷಿಯಂತೆ ಕಾಯುತ್ತಿರೋ ಕೆಜಿಎಫ್ ಸದ್ಯ ಯೂಟ್ಯೂಬ್ ಟ್ವಿಟ್ಟರ್ ಸೇರಿ ಸೋಷಿಯಲ್ ಮೀಡಿಯಾದಲ್ಲಿ ಟಾಪ್ ಲಿಸ್ಟ್ ನಲ್ಲಿ ಟ್ರೆಂಡಿಂಗ್ ಆಗ್ತಿದೆ.

ಟೀಸರ್ ಬಿಡುಗಡೆಯಾದ 49 ನಿಮಿಷದಲ್ಲಿ 5 ಮಿಲಿಯನ್ ವೀಕ್ಷಣೆ ಕಂಡಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲಿ ರಿಲೀಸ್ ಆಗಲಿರುವ ಈ ಚಿತ್ರದ ಟೀಸರ್ ಸದ್ಯಕ್ಕೆ ಒಂದೇ ಭಾಷೆಯಲ್ಲಿ ಬಂದಿದೆ. ಇಂಗ್ಲಿಷ್ ಭಾಷೆಯಲ್ಲಿ ಹಿನ್ನೆಲೆ ಧ್ವನಿ ಹೊಂದಿದೆ.

ಕೆಜಿಎಫ್ ಟೀಸರ್ನಲ್ಲಿ ಯಶ್, ರವೀನಾ ಟಂಡನ್, ಸಂಜಯ್ ದತ್ ಅವರ ಲುಕ್ ಪ್ರೇಕ್ಷಕರನ್ನ ಮೋಡಿ ಮಾಡಿದೆ. ಪ್ರಶಾಂತ್ ನೀಲ್ ನಿರ್ದೇಶಿಸಿರುವ ಈ ಚಿತ್ರವನ್ನು ವಿಜಯ್ ಕಿರಗಂದೂರ್ ನಿರ್ಮಿಸಿದ್ದರು. ಶ್ರೀನಿಧಿ ಶೆಟ್ಟಿ ನಾಯಕಿಯಾಗಿ ನಟಿಸಿದ್ದಾರೆ.

ಇತ್ತ ಸ್ಟಾರ್ ಗಳು ಸಹ ನಾನು ಕೆಜಿಎಫ್ ಅಭಿಮಾನಿ ಅನ್ನೋ ಅಷ್ಟರ ಮಟ್ಟಿಗೆ ಈ ಸಿನಿಮಾ ಹೈಪ್ ಕ್ರಿಯೇಟ್ ಮಾಡಿಬಿಟ್ಟಿದೆ. ಸ್ಯಾಂಡಲ್ ವುಡ್ ಅಷ್ಟ ಅಲ್ಲೇ ಟಾಲಿವುಡ್, ಬಾಲಿವುಡ್, ಮಾಲಿವುಡ್, ಕಾಲಿವುಡ್ ಎಲ್ಲಾ ಕಡೆ ಕೆಜಿಎಫ್ ದೇ ಹವಾ ಸೃಷ್ಟಿಯಾಗಿದೆ. ಮಳಯಾಳಂ ನ ಸ್ಟಾರ್ ನಟ ಪೃಥ್ವಿರಾಜ್ ಸುಕುಮಾರನ್ ಸಹ ನಮ್ಮ ‘ಕೆಜಿಎಫ್’ ನ ಅಭಿಮಾನಿ’ ಅಂತೆ.. ಹೌದು ಹೀಗಂತ ಸ್ವತಃ ಅವರೇ  ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ.

ಇನ್ನೂ ಟೀಸರ್ ಗೆ ವಿದೇಶಿಗರೂ ಸಹ ಫಿದಾ ಆಗಿದ್ದಾರೆ ವಿದೇಶಿ ಯೂಟ್ಯೂಬ್ ಚಾನಲ್ ನಲ್ಲಿ ವಿದೇಶಿಗರೂ ಕೆಜಿಎಫ್-2 ಚಿತ್ರದ ಟೀಸರ್ ಅನ್ನ ಕೊಂಡಾಡಿದ್ದಾರೆ. ಅದ್ಭುತವಾದ ಟೀಸರ್ ಎಂದು ಬಣ್ಣಿಸಿದ್ದಾರೆ.

 

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd