KGF 2 : ಹಾಲಿವುಡ್ ನಲ್ಲೂ ರಾಕಿ ಭಾಯ್ ಹವಾ…!!! ಇಂಗ್ಲಿಷ್ ಗೂ KGF 2 ಡಬ್…!!!
ಭಾರತೀಯ ಸಿನಿಮಾರಂಗವೇ ಕಾದು ಕುಳಿತಿರುವ ಕೆಜಿಎಫ್ 2 ಸಿನಿಮಾಗೆ ವಿಶ್ವಾದ್ಯಂತ ಫ್ಯಾನ್ಸ್ ಇದ್ದಾರೆ… 5 ಭಾಷೆಗಳಲ್ಲಿ ಮೂಡಿಬಂದಿರುವ ರಾಕಿಂಗ್ ಸ್ಟಾರ್ ಯಶ್ ಪ್ರಶಾಂತ್ನೀಲ್ ಕಾಂಬಿನೇಷನ್ ನ ಈ ಸಿನಿಮಾ ಏಪ್ರಿಲ್ 14 ಕ್ಕೆ ವಿಶ್ವಾದ್ಯಂತ ತೆರೆ ಕಾಣಲಿದೆ..
ಆದ್ರೀಗ ಈ ಸಿನಿಮಾದ ಬಗ್ಗೆ ಹರಿದಾಡ್ತಿರುವ ಒಂದು ಸುದ್ದಿ ಸಿಕ್ಕಾಪಟ್ಟೆ ಸಂಚಲನ ಹುಟ್ಟುಹಾಕಿದೆ. ಅದೇನಪ್ಪಾ ಅಂದ್ರೆ ಕೆಜಿಎಫ್ 2 ಇಂಗ್ಲಿಷ್ ನಲ್ಲೂ ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿದೆಯಂತೆ. ಹೌದು ವಿಶ್ವಾದ್ಯಂತ ಈ ಸಿನಿಮಾದ ಕ್ರೇಜ್ ಇರೋದ್ರಿಂದ , ಸಿನಿಮಾವನ್ನ 5 ಭಾಷೆಗಳ ಜೊತೆಗೆ ಇಂಗ್ಲಿಷ್ ನಲ್ಲೂ ರಿಲೀಸ್ ಮಾಡುವ ಪ್ಲಾನ್ ನಲ್ಲಿದೆ ಸಿನಿಮಾ ತಂಡ ಎನ್ನಲಾಗ್ತಿದೆ..
ಈ ಸಿನಿಮಾದಲ್ಲಿ ಸಾಕಷ್ಟು ಕ್ಯೂರಿಯಾಸಿಟಿ ಹುಟ್ಟುಹಾಕಿರೋ ಅಧೀರನ ಪಾತ್ರದಲ್ಲಿ ಸಂಜಯ್ ದತ್ ಕಾಣಿಸಿಕೊಂಡಿದ್ದು , ಅವರ ಲುಕ್ ಸಖತ್ ಟೆರೆರ್ ಆಗಿದೆ.. ಪ್ರಕಾಶ್ ರಾಜ್ , ಬಾಲಿವುಡ್ ನಟಿ ರವೀನಾ ತಂಡನ್ ಸೇರಿದಂತೆ ಹಲವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ… ಶ್ರೀನಿಧಿ ಶೆಟ್ಟಿ ನಾಯಕಿಯಾಗಿದ್ದಾರೆ..
ಸಿನಿಮಾ ಭಾರತದ ಬಹುನಿರೀಕ್ಷೆಯ ಸಿನಿಮಾಗಳಲ್ಲಿ ಮೊದಲ ಸ್ಥಾನದಲ್ಲಿದೆ.. ಟೀಸರ್ ರೆಕಾರ್ಡ್ ಮಾಡಿದ್ದು ,, ಸಿನಿಮಾದ ಹೈಪ್ ಹೆಚ್ಚಿಸಿದೆ.. ರಾಕಿ ಭಾಯ್ ಅಭಿಮಾನಿಗಳಂತೂ ಸಿನಿಮಾ ರಿಲೀಸ್ ಗಾಗಿ ಕಾದು ಕುಳಿತಿದ್ದಾರೆ.. ಸಿನಿಮಾ ರಿಲೀಸ್ ಆದ್ರೆ ಪಕ್ಕಾ ಬಾಕ್ಸ್ ಆಫೀಸ್ ರೆಕಾರ್ಡ್ ಬ್ರೇಕ್ ಮಾಡೋದ್ರಲ್ಲಿ ಯಾವುದೇ ಅನುಮಾನ ಇಲ್ಲ ಎನ್ನಲಾಗ್ತಿದೆ..









