1,743 ಕೋಟಿ ರೂ. ಒಡೆಯ ಕೆಜಿಎಫ್ ಬಾಬುಗೆ `ಕೈ’ ಟಿಕೆಟ್

1 min read
kgf-babu saaksha tv

1,743 ಕೋಟಿ ರೂ. ಒಡೆಯ ಕೆಜಿಎಫ್ ಬಾಬುಗೆ `ಕೈ’ ಟಿಕೆಟ್ kgf-babu saaksha tv

ಬೆಂಗಳೂರು : ಕೆಜಿಎಫ್ ಬಾಬು ಅಂತಲೇ ಪ್ರಸಿದ್ಧಿ ಪಡೆದಿರುವ ಯೂಸೂಫ್ ಷರೀಫ್ ಗೆ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಮಣೆ ಹಾಕಿದೆ.

ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಕೆಜಿಎಫ್ ಬಾಬು ಬೆಂಗಳೂರು ನಗರ ಕ್ಷೇತ್ರದಿಂದ ಕಣಕ್ಕೆ ಇಳಿದಿದ್ದಾರೆ.

ಕೆಜಿಎಫ್ ಬಾಬು ಈಗಾಗಲೇ ಬೆಂಗಳೂರು ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದು, ಬರೋಬ್ಬರಿ 1,743 ಕೋಟಿ ರೂ. ಆಸ್ತಿ ಘೋಷಣೆ ಮಾಡಿದ್ದಾರೆ.

kgf-babu saaksha tv

ಕೆಜಿಎಫ್ ಬಾಬು ನಾಮಪತ್ರ ಸಲ್ಲಿಕೆ ಮಾಡುವ ವೇಳೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಜೊತೆಗೂಡಿ ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ಹಾಜರಿದ್ದರು.

ಇನ್ನು ಕೆಜಿಎಫ್ ಬಾಬು ನಾಮಪತ್ರ ವೇಳೆ ಸಲ್ಲಿಸಲಾದ ಪ್ರಮಾಣಪತ್ರದಲ್ಲಿ ತಮ್ಮ ಬಳಿ ಬರೋಬ್ಬರಿ 100 ಕೋಟಿ ರೂ. ಮೌಲ್ಯದ ಚರಾಸ್ಥಿ ಹಾಗೂ 1,643.59 ಕೋಟಿ ರೂ. ಸ್ಥಿರಾಸ್ತಿ (ಒಟ್ಟು 1743 ಕೋಟಿ) ಹೊಂದಿರುವುದಾಗಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd