KGF ಬಾಬು ನಿವಾಸದ ಮೇಲೆ ಬೆಳ್ಳಂಬೆಳಿಗ್ಗೆ ಐಟಿ ರೇಡ್
KGF ಬಾಬು @ ಯೂಸುಫ್ ಶರೀಫ್
2023 ವಿಧಾನಸಭಾ ಚುನಾವಣೆ ಕಾಂಗ್ರೆಸ್ ಟಿಕೆಟ್ ಅಬ್ಯರ್ಥಿ
ರುಕ್ಸಾನಾ ಪ್ಯಾಲೇಸ್ ಮತ್ತು ನಿವಾಸದಲ್ಲಿ ಐಟಿ ದಾಳಿ
ಮಹತ್ವದ ದಾಖಲೆಗಳ ಪರಿಶೀಲನೆ ಮುಂದುವರಿಕೆ
2023 ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿರುವ KGF ಬಾಬು ನಿವಾಸದ ಮೇಲೆ ಐಟಿ ರೇಡ್ ನಡೆದಿದೆ..
ಇಂದು ಬೆಳ್ಳಂಬೆಳಿಗ್ಗೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಉಮ್ರಾ ಡೆವಲಪರ್ಸ್ ಕಂಪನಿಯ ಮಾಲೀಕರಾದ KGF ಬಾಬು ನಿವಾಸದಲ್ಲಿ ದಾಳಿ ನಡೆಸಿ ಸಿಆರ್ ಪಿಎಫ್ ಭದ್ರತೆಯಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ.
ಅಂದ್ಹಾಗೆ ಈ ಹಿಂದೆ KGF ಬಾಬು ( ಯೂಸುಫ್ ಶರೀಫ್) ಕಾಂಗ್ರೆಸ್ ಅಬ್ಯರ್ಥಿಯಾಗಿ ಪರಾಭವಗೊಂಡಿದ್ದು ಇದೀಗ 2023 ರ ಚುನಾವಣೆಯಲ್ಲಿ ಸ್ಪರ್ಧಿಸಲು ತಯಾರಾಗುತ್ತಿದ್ದಾರೆ ಎನ್ನಲಾಗಿದೆ..
ವಸಂತನಗರದಲ್ಲಿರುವ ರುಕ್ಸಾನಾ ಪ್ಯಾಲೇಸ್ ಮತ್ತು ನಿವಾಸದಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ಮುಂದುವರೆಸಿದ್ದಾರೆ.. ಬೆಳಗ್ಗಿ ಸುಮಾರು 7.30 ಕ್ಕೆ ದಾಳಿ ನಡೆದಿರುವ ಮಾಹಿತಿ ಸಿಕ್ಕಿದೆ..
4 ಇನೋವಾ ಕಾರುಗಳಲ್ಲಿ ಅಧಿಕಾರಿಗಳು ಬಂದು ದಾಳಿ ನಡೆಸಿದ್ದಾರೆ.. ಮಹತ್ವದ ದಾಖಲಾತಿಗಳು ಪರಿಶೀಲನೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ..
ಅಂದ್ಹಾಗೆ KGF ಬಾಬು ಸಾವಿರಾರು ಕೋಟಿ ರೂಪಾಯಿ ಆಸ್ತಿ ಹೊಂದಿದ್ದಾರೆ. ನಾಮಪತ್ರ ಸಲ್ಲಿಕೆ ವೇಳೆ ತಮ್ಮ ಬಳಿ 1741 ಕೋಟಿ ರೂ ಆಸ್ತಿ ಇರುವುದಾಗಿ ಘೋಷಣೆ ಮಾಡಿದ್ದರು.. ಆದ್ರೆ ಅವರ ಆದಾಯ ತೆರಿಗೆಯಲ್ಲಿ ವ್ಯತ್ಯಯ ಕಂಡುಬಂದಿದೆ ಎನ್ನಲಾಗಿದೆ.. ಹೀಗಾಗಿಯೇ ಐಟಿ ದಾಳಿ ನಡೆದಿದೆ ಎನ್ನಲಾಗಿದೆ.. ಅಂದ್ಹಾಗೆ KGF ಬಾಬು ಜೊತೆಗೆ , ಸ್ನೇಹಿತರ ನಿವಾಸದ ಮೇಲೂ ಸೇರಿದಂತೆ ಒಟ್ಟು 7 ಕಡೆಗಳಳಲ್ಲಿ ಐಟಿ ದಾಳಿ ನಡೆದಿದೆ..








