12 ಗಂಟೆಗಳಲ್ಲಿ 5000 ಕೆಜಿಎಫ್ ಟಿಕೆಟ್ ಬುಕ್ಕಿಂಗ್ ಎಲ್ಲಿ ಗೊತ್ತಾ ?
1 min read
12 ಗಂಟೆಗಳಲ್ಲಿ 5000 ಕೆಜಿಎಫ್ ಟಿಕೆಟ್ ಬುಕ್ಕಿಂಗ್ ಎಲ್ಲಿ ಗೊತ್ತಾ ?
‘ಕೆಜಿಎಫ್ ಚಾಪ್ಟರ್ 2’ ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿದೆ. ಬಿಡುಗಡೆಗೂ ಮುನ್ನವೇ ಚಿತ್ರ ಬಂಪರ್ ಲಾಟರಿ ಗಳಿಸಬಹುದಾದ ಸಾಧ್ಯತೆ ಇದೆ. ಯಶ್ ಅಭಿನಯದ ‘ಕೆಜಿಎಫ್ ಚಾಪ್ಟರ್ 2’ ಚಿತ್ರದ ಪ್ರೀ ಬುಕ್ಕಿಂಗ್ ಶುರುವಾಗಿದೆ. ಪ್ರೀ ಬುಕ್ಕಿಂಗ್ ಶುರುವಾದಾಗಿನಿಂದಲೇ ಚಿತ್ರ ಹೊಸ ದಾಖಲೆಯನ್ನ ಸೃಷ್ಟಿಸಿದೆ. ಮುಂಗಡ ಬುಕ್ಕಿಂಗ್ ಪ್ರಾರಂಭವಾದ 12 ಗಂಟೆಗಳಲ್ಲಿ UK ನಲ್ಲಿ ಐದು ಸಾವಿರಕ್ಕೂ ಹೆಚ್ಚು ಟಿಕೆಟ್‌ಗಳು ಬುಕ್ ಆಗಿವೆ. ಇದರಿಂದ ರಾಕಿಬಾಯ್ ಗಾಗಿ ವಿದೇಶಿ ಅಭಿಮಾನಿಗಳು ಎಷ್ಟು ಕಾತರದಿಂದ ಕಾಯುತ್ತಿದ್ದಾರೆ ಎಂಬುದನ್ನ ಅಂದಾಜಿಸಬಹುದು.
2018ರಲ್ಲಿ ‘ಕೆಜಿಎಫ್’ ಮೊದಲ ಭಾಗ ಬಂದಿತ್ತು. ಕೊರೊನಾ ಭೀತಿಯಿಂದಾಗಿ ‘ಕೆಜಿಎಫ್ 2’ ಬಿಡುಗಡೆ ಹಲವು ಭಾರಿ ಮುಂದೂಡಲಾಗಿತ್ತು. ಕೊನೆಗೂ ಪ್ರಶಾಂತ್ ನೀಲ್ ನಿರ್ದೇಶನದ ‘ಕೆಜಿಎಫ್ ಚಾಪ್ಟರ್ 2’ ಚಿತ್ರವು ಏಪ್ರಿಲ್ 14 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ಯಶ್, ಶ್ರೀನಿಧಿ ಶೆಟ್ಟಿ, ರವೀನಾ ಟಂಡನ್ ಮತ್ತು ಸಂಜಯ್ ದತ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕನ್ನಡ, ತೆಲುಗು, ಹಿಂದಿ, ಮಲಯಾಳಂ ಮತ್ತು ತಮಿಳು ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ.
ಯಶ್ ಅವರ ‘ಕೆಜಿಎಫ್ 2’ ಬಗ್ಗೆ ಅಭಿಮಾನಿಗಳು ತುಂಬಾ ಉತ್ಸುಕರಾಗಿದ್ದಾರೆ. ಚಿತ್ರಕ್ಕೆ ದೇಶ ಮಾತ್ರವಲ್ಲದೆ ವಿದೇಶಗಳಲ್ಲೂ ಕ್ರೇಜ್ ಕಂಡು ಬರುತ್ತಿದೆ. ಮಾಧ್ಯಮ ವರದಿಗಳ ಪ್ರಕಾರ, ‘ಕೆಜಿಎಫ್ 2’ ಪ್ರಿ-ಬುಕಿಂಗ್ ಪ್ರಾರಂಭವಾದ ಕೇವಲ 12 ಗಂಟೆಗಳಲ್ಲಿ ಯುಕೆ(ಯನೈಟೆಡ್ ಕಿಂಗ್ ಡಮ್)ನಲ್ಲಿ ಐದು ಸಾವಿರಕ್ಕೂ ಹೆಚ್ಚು ಟಿಕೆಟ್‌ಗಳನ್ನು ಮಾರಾಟ ಮಾಡಿದೆ. ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಪೈಟ್ ನಿಡುವ ನಿರೀಕ್ಷೆಯಿದೆ. ‘ಕೆಜಿಎಫ್ 2’ ಗ್ರೀಸ್‌ನಲ್ಲಿ ಬಿಡುಗಡೆಯಾಗುತ್ತಿರುವ ಮೊದಲ ದಕ್ಷಿಣ ಭಾರತದ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
#KGFChapter2 off to a great start at the UK 🇬🇧 Box Office.. https://t.co/2hM8ipFFGq
— Ramesh Bala (@rameshlaus) April 3, 2022
‘ಕೆಜಿಎಫ್ ಚಾಪ್ಟರ್ 2’ ಬಾಕ್ಸ್ ಆಫೀಸ್‌ನಲ್ಲಿ ‘ಆರ್‌ಆರ್‌ಆರ್’ ದಾಖಲೆಯನ್ನು ಮುರಿಯಬಹುದೇ ಎಂಬುದು ಚಿತ್ರ ಬಿಡುಗಡೆಯಾದ ನಂತರ ತಿಳಿಯುತ್ತದೆ. ಆದರೆ ‘ಕೆಜಿಎಫ್ 2’ ಏಪ್ರಿಲ್ 13 ರಂದು ಬಿಡುಗಡೆಯಾಗಲು ವಿಜಯ್ ಅವರ ಬೀಸ್ಟ್ ಮತ್ತು ಏಪ್ರಿಲ್ 14 ರಂದು ಬಿಡುಗಡೆಯಾಗಲಿರುವ ಶಾಹಿದ್ ಕಪೂರ್ ಅವರ ‘ಜೆರ್ಸಿ’ ಅನ್ನು ಎದುರಿಸಬೇಕಾಗಿದೆ. ಇದರಿಂದ ಮೂರು ಚಿತ್ರಗಳ ನಡುವೆ ಪೈಪೋಟಿ ಏರ್ಪಡುವುದು ಸ್ಪಷ್ಟ ಆದರೆ ಈ ಸ್ಪರ್ಧೆಯಲ್ಲಿ ಯಾರು ಗೆಲ್ಲುತ್ತಾರೆ ಎಂಬುದು ಏಪ್ರಿಲ್ 14ರ ನಂತರ ಗೊತ್ತಾಗಲಿದೆ.