KGF 2 ರಿಲೀಸ್ ಯಾವಾಗ..? ಸಿನಿಮಾತಂಡದಿಂದ ಹೊಸ ಅಪ್ ಡೇಟ್ ರಿವೀಲ್..!
ಬೆಂಗಳೂರು: ಇಡೀ ಭಾರತೀಯ ಸಿನಿಮಾರಂಗವೇ ಕಾದು ಕುಳಿತಿರುವ ರಾಕಿಂಗ್ ಸ್ಟಾರ್ ಯಶ್ ಕಿಂಗ್ ಮೇಕರ್ ಪ್ರಶಾಂತ್ ಕಾಂಬಿನೇಷನ್ ನ ಕೆಜಿಎಫ್ ಚಾಪ್ಟರ್ 2 ಸಿನಿಮಾ ಯಾವಾಗ ರಿಲೀಸ್ ಆಗುತ್ತ ಎನ್ನೋ ಪ್ರಶ್ನಗಳು ಎಲ್ಲರನ್ನ ಕಾಡುತ್ತಿದೆ.. ಎಲ್ಲಾ ಅಂದುಕೊಂಡಂತೆ ಆಗಿದ್ರೆ ಸಿನಿಮಾ ಜುಲೈ 16 ಕ್ಕೆ ತೆರೆಕಾಣಬೇಕಿತ್ತು.. ಆದ್ರೆ ಕೋವಿಡ್ 2ನೇ ಅಲೆ , ಲಾಕ್ ಡೌನ್ ನಿಂದಾಗಿ ಸಿನಿಮಾ ರಿಲೀಸ್ ಡೇಟ್ ಪೋಸ್ಟ್ ಪೋನ್ ಆಗುವ ಬಹುತೇಕ ಚಾನ್ಸ್ ಇದೆ.. ಹೀಗಾಗಿ ರಾಖಿ ದೇಶಾದ್ಯಂತ ರಾಖಿ ಬಾಯ್ ಫ್ಯಾನ್ಸ್ ಗೆ ನಿರಾಸೆಯಾಗಿದೆ..
ಈ ನಡುವೆ KGF 2 ಕುರಿತಾದ ಹೊಸ ಅಪ್‍ಡೇಟ್ ಒಂದು ರಿವೀಲ್ ಆಗಿದೆ. ಸದ್ಯ ಕೆಜಿಎಫ್-2 ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಕೆಲಸ ಕಂಪ್ಲೀಟ್ ಆಗಿದೆ ಎಂಬ ವಿಚಾರ ಬಹಿರಂಗಗೊಂಡಿದ್ದು, ಈ ಕುರಿತಂತೆ ಸೌತ್ ಇಂಡಸ್ಟ್ರಿ ಸಿನಿಮಾಗಳ ಬಗ್ಗೆ ಮಾಹಿತಿ ನೀಡುವ ಚಿತ್ರ ವಿಶ್ಲೇಷಕ ಕೌಶಿಕ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಲಾಕ್‍ಡೌನ್ ನಂತರ ದೇಶಾದ್ಯಂತ ಸಿನಿಮಾ ಬಿಡುಗಡೆಯ ದಿನಾಂಕವನ್ನು ಚಿತ್ರತಂಡ ಅಂತಿಮಗೊಳಿಸಲಿದೆ. ಇದು ಪ್ಯಾನ್ ಇಂಡಿಯಾನ್ ಸಿನಿಮಾವಾದರಿಂದ ಬಿಡುಗಡೆಗೆ ಭಾರತಾದ್ಯಂತ ಪರಿಸ್ಥಿತಿ ಅನುಕೂಲಕರವಾಗಿರಬೇಕು ಎಂದು ಟ್ವೀಟ್ ಮಾಡಿದ್ದಾರೆ.
ಗರುಡನ ಸಾವಿನ ಅಂತ್ಯದಲ್ಲಿ ಚಾಪ್ಟರ್ 1 ಮುಕ್ತಾಯಗೊಂಡಿತ್ತು.. ಚಾಪ್ಟರ್ 2 ನಲ್ಲಿ ಅತಿ ಭಯಂಕರ ಅಧೀರನ ಜೊತೆಗೆ ಯಶ್ ಹೊಡೆದಾಡಲಿದ್ದು, ಸಿನಿಮಾದ ಮೇಲೆ ಸಾಕಷ್ಟು ನಿರೀಕ್ಷೆಗಳ ಜೊತೆಗೆ ಕ್ಯೂರಿಯಾಸಿಟಿ ಇರುವುದು , ಚಿತ್ರದ ಕ್ರೇಜ್ ಗೆ ಕಾರಣವಾಗಿದೆ..
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.








