KGF 2 ನಲ್ಲಿ ‘ರಾಖಿ’ ಜೊತೆ ಹೆಜ್ಜೆ ಹಾಕಲಿದ್ದಾರೆ ನೋರಾ ಫತೇಹಿ..! ಹಿಂದಿಗೆ ಧ್ವನಿ ನೀಡಲ್ವಂತೆ ಯಶ್ ..!

1 min read

KGF 2 ನಲ್ಲಿ ರಾಖಿ ಜೊತೆ ಹೆಜ್ಜೆ ಹಾಕಲಿದ್ದಾರೆ ನೋರಾ ಫತೇಹಿ..! ಹಿಂದಿಗೆ ಧ್ವನಿ ನೀಡಲ್ವಂತೆ ಯಶ್ ..!

ಇಡೀ ಭಾರತ ಸಿನಿಮಾರಂಗವೇ ಕಾದು ಕುಳಿತಿರುವ ಕೆಜಿಎಫ್ 2 ಸಿನಿಮಾದ ಅಪ್ ಡೇಟ್ ಒಂದು ಸಿಕ್ಕಿದೆ. ಹೌದು ರಾಕಿಂಗ್ ಸ್ಟಾರ್ ಯಶ್ ಹಾಗೂ ಕಿಂಗ್ ಮೇಕರ್ ಪ್ರಶಾಂತ್ ನೀಲ್ ಕಾಂಬಿನೇಷನ್ ನ ಕೆಜಿಎಫ್ ಚಾಪ್ಟರ್ 2 ಮೇಲೆ ಸಿಕ್ಕಾಪಟ್ಟೆ ನಿರೀಕ್ಷೆ ಇದೆ. ಎಲ್ಲಾ ಅಂದುಕೊಂಡಂತೆ ಸರಿಯಾಗಿದ್ದಿದ್ದರೆ  ಜುಲೈ 16 ಕ್ಕೆ ಸಿನಿಮಾ ಪಕ್ಕಾ ರಿಲೀಸ್ ಆಗಲಿದೆ ಎನ್ನಬಹುದಾಗಿತ್ತು.

ಆದ್ರೆ ಕೊರೊನಾ 2ನೇ ಅಲೆಯಿಂದಾಗಿ ಮತ್ತೆ ಜನರು ಸಂಕಷ್ಟಕ್ಕೆ ಈಡಾಗಿದ್ದಾರೆ. ಮತ್ತೊಮ್ಮೆ ಸಿನಿಮಾ ಚಟುವಟಿಕೆಗಳು ಸಂಪೂರ್ಣ ಸ್ಥಗಿತವಾಗಿದ್ದು, ಪರಿಸ್ಥಿತಿ ಹೀಗೇ ಇದ್ರೆ ಸಿನಿಮಾ ನಿಗದಿತ ದಿನಾಂಕಕ್ಕೆ ರಿಲೀಸ್ ಆಗದೇ ಪೋಸ್ಟ್ ಪೋನ್ ಆಗಬಹುದು.

ಅಂದ್ಹಾಗೆ ಏನು ಆ ಹೊಸ ಅಪ್ ಡೇಟ್..?  

KGF ಚಾಪ್ಟರ್ ಒಂದರಲ್ಲಿ ಐಟಂ ಸಾಂಗ್ ನಲ್ಲಿ ಹಿಂದಿಯಲ್ಲಿ ಮೌನಿ ರಾಯ್ ಹಾಗೂ ಇತರೇ ಭಾಷೆಯಳಲ್ಲಿ ಮಿಲ್ಕಿ ಬ್ಯೂಟಿ ತಮನ್ನಾ ಕಾಣಿಸಿಕೊಂಡಿದ್ದರು. ಅದರಂತೆ ಈ ಚಾಪ್ಟರ್ ನಲ್ಲೂ ಒಂದು ಐಟಂ ಸಾಂಗ್ ಇರಲಿದೆಯಂತೆ.. ಈ ಬಾರಿ ಕನ್ನಡದ ಐಟಂ ಸಾಂಗ್ ಗೆ ರಾಖಿ ಭಾಯ್ ಜೊತೆ ಬಾಲಿವುಡ್ ನ ಚೆಲುವೆ ನೋರಾ ಫತೇಹಿ ಡ್ಯಾನ್ಸ್ ಸ್ಟೆಪ್ ಹಾಕಲಿದ್ದಾರಂತೆ.  ಆದ್ರೆ ಈ ಬಗ್ಗೆ ಅಧಿಕೃತ ಘೋಷಣೆ ಬಾಕಿಯಿದೆ.

ಇನ್ನೂ ಮತ್ತೊಂದು ವಿಚಾರ ಅಂದ್ರೆ KGF 2 ನ ಹಿಂದಿ ಡಬ್ಬಿಂಗ್ ಗೆ ಖುದ್ದು ಯಶ್ ಅವರೇ ಧ್ವನಿ ನೀಡಲಿದ್ದಾರೆ ಎನ್ನಲಾಗಿತ್ತು. ಆದ್ರೆ ಯಶ್ ಅವರು ಈ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. ಆಕ್ಸೆಂಟ್ ಬದಲಾಗುವುದರಿಂದ ಜನರಿಗೆ ಡೈಲಾಗ್ಸ್ ಅರ್ಥ ಮಾಡಿಕೊಳ್ಳಲು ಕಷ್ಟವಾಗಬಹುದು ಎಂದು ಯಶ್ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

ಅಂದ್ಹಾಗೆ ಅವರಿಗೆ ಹಿಂದಿಯಲ್ಲಿ ಖ್ಯಾತ ವಾಯ್ಸ್ ಡಬ್ಬಿಂಗ್ ಆರ್ಟಿಸ್ಟ್  ಸಾಂಕೇತ್ ಮಾತ್ರೆ ಧ್ವನಿ ನೀಡುತ್ತಿದ್ದಾರೆ ಎನ್ನಲಾಗಿದೆ.

ಈ ಸಿನಿಮಾದಲ್ಲಿ ರಾಕಿಂಗ್ ಸ್ಟಾರ್ ಯಶ್ ಜೊತೆಗೆ ಶ್ರೀನಿಧಿ ಶೆಟ್ಟಿ ನಾಯಕಿಯಾಗಿದ್ರೆ, ರವೀನಾ ತಂಡನಾ, ಸಂಜಯ್ ದತ್ , ಪ್ರಕಾಶ್ ರಾಜ್ , ವಶಿಷ್ಠ ಸಿಂಹ , ಮಾಳವಿಕ ಮುಂತಾದ ದೊಡ್ಡ ದೊಡ್ಡ ನಟರ ತಾರಾಬಳಗವಿದೆ.

ಮೋದೀಜಿಗೆ ದೇಶ ಮುನ್ನಡೆಸಲು ತಿಳಿದಿಲ್ಲ.. ಸಚಿನ್‌ಗೆ ಬ್ಯಾಟಿಂಗ್ ಮಾಡಲು ತಿಳಿದಿಲ್ಲ.. – ನೆಟ್ಟಿಗರಿಗೆ ಕಂಗನಾ ತಿರುಗೇಟು

BIGGBOSS 8 :  ನಿಧಿ ಬಳಿ  ಜೈಲಿನಲ್ಲಿ ಕ್ಷಮೆಯಾಚಿಸಿದ ಸಂಬರಗಿ..!

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd