ಮೊದಲ ಭಾರತೀಯ ಸಿನಿಮಾ… ಕೆಜಿಎಫ್ ಕಂಡು ಹಾಡನ್ನೇ ಬರೆದ ಲಂಡನ್ ಅಭಿಮಾನಿ – ಭಾವನಾತ್ಮಕವಾಗಿ ಪ್ರತಿಕ್ರಿಯಿಸಿದ ಯಶ್..!
ಭಾರತೀಯ ಸಿನಿಮಾ ರಂಗ ಅದ್ರಲ್ಲೂ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಹೊಸ ಸಂಚಲನ ಸೃಷ್ಟಿ ಮಾಡಿರುವ ಕೆಜಿಎಫ್ ಸಿನಿಮಾದ ಚಾಪ್ಟರ್ 2 ಯಾವಾಗ ಬರುತ್ತೆ ಅಂತ ಅಭಿಮಾನಿಗಳು ಕಾಯ್ತಾ ಇದ್ದಾರೆ.. ಪರಬಾಷಿಗರೂ ಕೂಡ ರಾಕಿ ಭಾಯ್ ಖದರ್ ಫಿದಾ ಆಗಿದ್ದಾರೆ.. ವಿದೇಶಗಳಲ್ಲೂ ದೂಳೆಬ್ಬಿಸಿರುವ ಕೆಜಿಎಫ್ ಸಿನಿಮಾ ಸಾಲು ಸಾಲು ರೆಕಾರ್ಡ್ ಗಳನ್ನ ಬ್ರೇಕ್ ಮಾಡಿದೆ. ಚಾಪ್ಟರ್ 2 ಟೀಸರ್ ಸಿಕ್ಕಾಪಟ್ಟೆ ಕ್ಯೂರಿಯಾಸಿಟಿ ಕ್ರಿಯೇಟ್ ಮಾಡಿದೆ. ಸಿನಿಮಾ ರಿಲೀಸ್ ಗಾಗಿ ಅಭಿಮಾನಿಗಳ ಜಾಕತ ಪಕ್ಷಿಗಳಂತೆ ಕಾಯ್ತಾ ಇದ್ದಾರೆ. ಇತ್ತೀಚೆಗೆ ದುಬಾರಿ ಮೊತ್ತಕ್ಕೆ ಜೀ ವಾಹಿನಿ ಕೆಜಿಎಫ್ ಚಾಪ್ಟರ್ 2 ನ ಸ್ಯಾಟೆಲೈಟ್ ರೈಟ್ಸ್ ಖರೀದಿ ಮಾಡಿದೆ..
ಇದೀಗ ಲಂಡನ್ ನ ಕೆಜಿಎಫ್ ಅಭಿಮಾನಿ ಸಿನಿಮಾ ನೋಡಿ ಹಾಡಿ ಹೊಗಳಿದ್ದಾರೆ.. ಅಲ್ಲದೇ ಇದು ಅವರ ಮೊದಲ ಬಾರತೀಯ ಸಿನಿಮಾವಾಗಿದೆ. ಅಷ್ಟೇ ಅಲ್ಲ ಸಿನಿಮಾ ಮೆಚ್ಚಿಕೊಂಡು ಹಾಡನ್ನೇ ರಚಿಸುವ ಮೂಲಕ ಸಿನಿಮಾ ಎಷ್ಟರ ಮಟ್ಟಿಗೆ ಹಿಡಿಸಿದೆ ಎನ್ನುವುದನ್ನ ತೋರಿಸಿದ್ದಾರೆ.. ಇನ್ನೂ ವಿದೇಶಿ ಅಭಿಮಾನಿಯ ಪ್ರೀತಿಗೆ ರಾಕಿ ಬಾಯ್ ಭಾವುಕರಾಗಿದ್ದಾರೆ.. ಹೌದು ಸೋಷಿಯಲ್ ಮೀಡಿಯಾದಲ್ಲಿ ರಾಶಕಿಂಗ್ ಸ್ಟಾರ್ ಯಶ್ ಲಂಡನ್ ಅಭಿಮಾನಿ ಪೋಸ್ಟ್ ಗೆ ಭಾವುಕರಾಗಿ ಪ್ರತಿಕ್ರಿಯೆ ನೀಡಿದ್ದು, ಧನ್ಯವಾದ ಅರ್ಪಿಸಿದ್ದಾರೆ.
ಲಂಡನ್ ಮೂಲದ ಅಭಿಮಾನಿಯು , ನಾನು ವೀಕ್ಷಿಸಿದ ಪ್ರಥಮ ಭಾರತೀಯ ಚಿತ್ರ ಕೆಜಿಎಫ್, ಈ ಸಿನಿಮಾವನ್ನು ನಾನು ತುಂಬಾ ಪ್ರೀತಿಸುತ್ತೇನೆ. ಈ ಸಿನಿಮಾ ಬಗ್ಗೆ ನಾನೇ ಹಾಡೊಂದನ್ನು ರಚಿಸಿದ್ದೇನೆ. ನೀವೆಲ್ಲ ಕೇಳಿ ಎಂಜಾಯ್ ಮಾಡುತ್ತೀರೆಂದು ಭಾವಿಸುತ್ತೇನೆ ಎಂದು ಕೆಜಿಎಫ್ ಸಿನಿಮಾ ಬಗ್ಗೆ ಟ್ವೀಟ್ ಮಾಡಿ ಅಭಿಪ್ರಾಯ ತಿಳಿಸಿದ್ದರು.
ಇದಕ್ಕೆ ಯಶ್ ಪ್ರತಿಕ್ರಿಯಿಸಿ, ನಮ್ಮ ಸಿನಿಮಾದ ಬಗ್ಗೆ ನೀವು ಇಷ್ಟೊಂದು ತಿಳಿದುಕೊಳ್ಳುವ ಮೂಲಕ ನನ್ನನ್ನು ವಿಸ್ಮಯಗೊಳಿಸಿದ್ದೀರಿ. ಇದರಲ್ಲಿ ಕೇವಲ ಮಿಡಿತ ಮಾತ್ರ ಇಲ್ಲ, ನಿಮ್ಮ ಪ್ರೀತಿ ತೋರಿಸಲು ಪ್ರಯತ್ನಿಸಿದ್ದೀರಿ. ಹಾಡನ್ನು ನಾನು ತುಂಬಾ ಆನಂದಿಸಿದೆ. ಇಲ್ಲಿದೆ ರಾಖಿ ಭಾಯ್ ಬಂದ, ರೆಡಿ ಆರ್ ಯಾ…? ಎಂದು ಟ್ವೀಟ್‍ಗೆ ಪ್ರತಿಕ್ರಿಯಿಸಿದ್ದಾರೆ.
ಇದನ್ನು ಕಂಡ ಅಭಿಮಾನಿ ರೀಟ್ವೀಟ್ ಮಾಡಿ ಖುಷಿಪಟ್ಟಿದ್ದಾರೆ. ಆಮ್ ಟೀಚರ್ ಪೌಲ್ ಎಂಬ ಟ್ವಿಟ್ಟರ್ ಖಾತೆಯಿಂದ ಸಿನಿಮಾ ಕುರಿತು ಅಭಿಪ್ರಾಯ ತಿಳಿಸಿದ್ದಾರೆ. ಅಲ್ಲದೆ ಕೆಜಿಎಫ್ ಸಿನಿಮಾ ಕುರಿತು ತಾವು ರಚಿಸಿದ ರ್ಯಾಪ್ ಸಾಂಗ್ ನ್ನು ಯೂಟ್ಯೂಬ್‍ನಲ್ಲಿ ಹಾಕಿ, ಲಿಂಕ್ ಶೇರ್ ಮಾಡಿಕೊಂಡಿದ್ದಾರೆ. ರಾಕಿ ಬಾಯ್ ವಿದೇಶಿ ಅಭಿಮಾನಿಯ ಪ್ರೀತಿ ಕಂಡು ಭಾರತೀಯ ಅಭಿಮಾನಿಗಳು ಕೂಡ ಖುಷಿಪಟ್ಟಿದ್ದಾರೆ.








