ಕೊರೊನಾ ಸಂಕಷ್ಟ – ಹುಟ್ಟೂರಿನ ಜನರ ನೆರವಿಗೆ ನಿಂತ ‘KGF’ ನಿರ್ಮಾಪಕ
ದೇಶದಲ್ಲಿ ಕೋವಿಡ್ 2ನೇ ಅಲೆ ತಾಂಡವವಾಡ್ತಿದ್ದು, ದಿನೇ ದಿನೇ ಸೋಂಕಿತರ ಸಂಖ್ಯೆ ಸಾವಿನ ಸಂಖ್ಯೆ ಹೆಚ್ಚಾಗ್ತಿದೆ.. ಬಡವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಸಂದರ್ಭದಲ್ಲಿ ಅನೇಕ ಸೆಲೆಬ್ರಿಟಿಗಳು ಜನರಿಗೆ ಸಹಾಯ ಮಾಡಲು ಮುಂದಾಗಿದ್ದಾರೆ.. ಸ್ಯಾಂಡಲ್ ವುಡ್ , ಬಾಲಿವುಡ್ , ಕಾಲಿವುಡ್ , ಟಾಲಿವುಡ್ ನ ತಾರೆಯರು ಜನರಿಗೆ ನೆರವಾಗಿದ್ದಾರೆ..
ಸೋನು ಸೂದ್ , ಸಲ್ಮಾನ್ ಖಾನ್ , ಉಪೇಂದ್ರ , ಸುದೀಪ್ ಶ್ರೀಮುರುಳಿ, ಶೋಭರಾಜ್ , ಸಾಧುಕೋಕಿಲ ಸೇರಿದಂತೆ ಹಲವರು ಸಂಕಷ್ದ ಸಮಯದಲ್ಲಿ ಸಹಾಯಾಸ್ತ ಚಾಚಿದ್ದಾರೆ.. ಇದೀಗ ಹೈ ವೋಲ್ಟೇಜ್ ಸಿನಿಮಾದ ‘KGF’ ನ ಖ್ಯಾತ ನಿರ್ಮಾಪಕ ವಿಜಯ್ ಕಿರಗಂದೂರು ಅವರು ಕೊರೊನಾ ಸಂಕಷ್ಟದ ನೆರವಿಗೆ ಧಾವಿಸಿದ್ದಾರೆ. ತಮ್ಮ ಹುಟ್ಟೂರಾದ ಮಂಡ್ಯದ ಜನರಿಗೆ ಸಹಾಯ ಮಾಡಿದ್ದಾರೆ.
ನಿರ್ಮಾಪಕ ವಿಜಯ್ ಕಿರಗಂದೂರು ಮಂಡ್ಯದ ಕೊರೊನಾ ಸೋಂಕಿತರಿಗೆ ಅನುಕೂಲವಾಗುವಂತೆ, 500 ಎಲ್ ಪಿ ಎಂ ಸಾಮರ್ಥ್ಯದ ಆಕ್ಸಿಜನ್ ಘಟಕ ಅಥವಾ ಸಕಲ ವ್ಯವಸ್ಥೆಯನ್ನು ಒಳಗೊಂಡ 50 ಐಸಿಯು ಬೆಡ್ ವ್ಯವಸ್ಥೆ ಮಾಡಿಸಿಕೊಡಲು ತೀರ್ಮಾನಿಸಿದ್ದಾರೆ.
ಈ ಬಗ್ಗೆ ತಮ್ಮ ನಿರ್ಮಾಣದ ಹೊಂಬಾಳೆ ಗ್ರೂಪ್ ಮೂಲಕ ಹುಟ್ಟೂರಿಗೆ ನೆರವಾಗುವುದಾಗಿ ಪತ್ರ ಬರೆದಿದ್ದಾರೆ. ಈ ಸೌಲಭ್ಯವನ್ನು ಮಂಡ್ಯದ ಜನರು ಉಪಯೋಗಿಸಿಕೊಳ್ಳುವಂತೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಈ ಮೊದಲು ವಿಜಯ್ ಕಿರಗಂದೂರು ತಮ್ಮ ಉದ್ಯೋಗಿಗಳಿಗೆ ಅವರ ಕುಟುಂಬದವರಿಗೆ ಉಚಿತ ಲಸಿಕೆ ನೀಡುವುದಾಗಿ ಘೋಷಿಸಿದ್ದರು. ಇದೀಗ ಮಂಡ್ಯದ ಜನರ ನೆರವಿಗೆ ಧಾವಿಸಿದ್ದಾರೆ.