ಬಾಕ್ಸ್ ಆಫೀಸ್ ನಲ್ಲಿ ಕೆಜಿಎಫ್ ವೈಲೆನ್ಸ್ – ಸಾವಿರ ಕೋಟಿ ಗಳಿಸಿದ ಕನ್ನಡ ಚಿತ್ರ…
ಕೆಜಿಎಫ್ ಚಾಪ್ಟರ್ 2. ಯಶ್ ವೃತ್ತಿ ಜೀವನಕ್ಕೂ ಕನ್ನಡ ಚಿತ್ರರಂಗಕ್ಕೂ ದೆಸೆಯನ್ನೇ ಬದಲಿಸಿದ ಸಿನಿಮ. ಕನ್ನಡ ಚಿತ್ರರಂಗದಲ್ಲಿ ಇದುವರೆಗೂ ನಿರ್ಮಾಣವಾಗದ ದಾಖಲೆಯನ್ನೆ ಕೆಜಿಎಫ್ ಚಿತ್ರ ಬರೆದಿದೆ. ಬರೊಬ್ಬರಿ 1000 ಕೋಟಿ ಕಲೆಕ್ಟ್ ಮಾಡುವ ಮೂಲಕ ಭಾರತೀ ಸಿನಿ ಇತಿಹಾಸದಲ್ಲಿ ಕೆಜಿಎಫ್ ಚಿತ್ರತಂಡ ಇತಿಹಾಸವನ್ನೆ ರಚಿಸಿದೆ.
2 ವಾರ ಕಳೆದು 3ನೇ ವಾರಕ್ಕೆ ಕಾಲಿಟ್ಟರೂ ರಾಕಿ ಭಾಯ್ ಹವಾ ಕಡಿಮೆಯಾಲ್ಲ. ಯಾವ ಯಾವ ಭಾಷೆಯಲ್ಲಿ ಎಷ್ಟು ಕೋಟಿ ಗಳಿಸಿದೆ ಎನ್ನುವುದನ್ನ ನೋಡುವುದಾದರೆ ಕರ್ನಾಟಕದಲ್ಲಿ 153.8 ಕೋಟಿ, ತೆಲುಗು ರಾಜ್ಯದಲ್ಲಿ 125.7 ಕೋಟಿ, ತಮಿಳುನಾಡು 94.24 ಕೋಟಿ, ಕೇರಳದಲ್ಲಿ 53.8 ಕೋಟಿ, ಇತರೆಡೆ 402.9 ಕೋಟಿ, ಒಟ್ಟು 816.3 ಕೋಟಿ ಕಮಾಯಿ ಮಾಡಿದೆ. ವಿದೇಶದಲ್ಲಿ 164.2 ಕೋಟಿ ರೂಪಾಯಿ ಗಳಿಸಿದೆ. ಒಟ್ಟು 980.5 ಕೋಟಿ ಕಲೆಕ್ಷನ್ ಮಾಡಿದೆ. ಪ್ರಸ್ತುತ ಹಿಂದಿ ಬಾಕ್ಸ್‌ಆಪೀಸ್‌ನಲ್ಲಿ 353.06 ಕೋಟಿ ಸುನಾಮಿಯನ್ನೇ ಸೃಷ್ಟಿಸಿದೆ.
https://twitter.com/rameshlaus/status/1520233880078667776?ref_src=twsrc%5Etfw%7Ctwcamp%5Etweetembed%7Ctwterm%5E1520233880078667776%7Ctwgr%5E%7Ctwcon%5Es1_&ref_url=https%3A%2F%2Fwww.hindustantimes.com%2Fentertainment%2Fothers%2Fkgf-chapter-2-box-office-yash-film-crosses-rs-1000-cr-gross-worldwide-is-4th-indian-film-to-achieve-the-feat-101651290223526.html
ಸಿನಿಮಾ ಬಾಕ್ಸ್ ಆಫೀಸ್ ಪಂಡಿತರಾದ ರಮೇಶ್ ಬಾಲಾ ಆವರು ಶನಿವಾರದ ಅಪ್ಡೇಟ್ ಕುರಿತು ಮಾಹಿತಿಯನ್ನ ಟ್ವೀಟರನಲ್ಲಿ ಹಂಚಿಕೊಂಡಿದ್ದು ವರ್ಲ್ಡ್ ವೈಡ್ ಬಾಕ್ಸ್ ಆಫೀಸ್ ನಲ್ಲಿ 1000 ಕೋಟಿ ಗಳಿಸಿದೆ. ಬಾಹುಬಲಿ 2, RRR, ಮತ್ತು ದಂಗಲ್ ಬಳಿಕ ಭಾರತೀಯ ಚಿತ್ರರಂಗದಲ್ಲಿ ದಾಖಲೆ ಬರೆದ 4 ನೆ ಚಿತ್ರವಾಗಿ ಯಶ್ ನಟನೆಯ ಕೆಜಿಎಫ್ 2 ಚಿತ್ರ ಸೇರಿಕೊಂಡಿದೆ.








