ಮತ್ತೊಂದು ದಾಖಲೆ ಬರೆದ “KGF 2” ಟೀಸರ್..!

1 min read

ಮತ್ತೊಂದು ದಾಖಲೆ ಬರೆದ “KGF 2” ಟೀಸರ್..!

ಇಡೀ ಭಾರತೀಯ ಸಿನಿಮಾರಂಗವೇ ಜಾತಕ ಪಕ್ಷಿಯಂತೆ ಎದುರು ನೋಡ್ತಿರುವ ಚಿತ್ರ ಅಂದ್ರೆ ಅದು ಪ್ರಶಾಂತ್ ನೀಲ್ ನಿರ್ದೇಶನದ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 2.. ಈ ಸಿನಿಮಾ ಯಾವಾಗ ರಿಲೀಸ್ ಆಗುತ್ತೆ ಅಂತ ಭಾರತದಾದ್ಯಂತ ಅಷ್ಟೇ ಅಲ್ಲ ಬೇರೆ ದೇಶಗಳ ಅಭಿಮಾನಿಗಳು ಕೂಡ ಕಾತರದಿಂದ ಕಾಯ್ತಾಯಿದ್ದಾರೆ.. ಈ ಸಿನಿಮಾ ಏಪ್ರಿಲ್ 14ರಂದು ರಿಲೀಸ್ ಆಗಲಿದೆ. ಅದ್ರಲ್ಲೂ ಚಾಪ್ಟರ್ 1ಕ್ಕಿಂದ ಸಖತ್ ಹೈಪ್ ಕ್ರಿಯೇಟ್ ಮಾಡಿದೆ.. ದೇಶಾದ್ಯಂತ ರಾಖಿ ಭಾಯ್ ಹವಾ ಎದ್ದಿದೆ..

ಆದ್ರೆ ಕಳೆದ ವರ್ಷ ರಿಲೀಸ್ ಆಗಿದ್ದ KGF ಚಾಪ್ಟರ್ 2 ಟೀಸರ್ ರಿಲೀಸ್ ಆಗಿ ದೊಡ್ಡ ದೊಡ್ಡ ಸಿನಿಮಾಗಳ ರೆಕಾರ್ಡ್ ಬ್ರೇಕ್ ಮಾಡಿ ವಿಶ್ವ ದಾಖಲೆ ಬರೆದಿತ್ತು.. ಇದೀಗ ಈ ಟಿಸರ್ ಸಿನಿಮಾ ರಿಲೀಸ್ ಗೂ ಮುನ್ನ ಮತ್ತೊಂದು ಹೊಸ ದಾಖಲೆಯನ್ನ ಬರೆದಿದೆ..

ಕೆಜಿಎಫ್ 2 ಟೀಸರ್ ಯೂಟ್ಯೂಬ್ ನಲ್ಲಿ ಬರೋಬ್ಬರಿ 9 ಮಿಲಿಯನ್ ಮಂದಿಯಿಂದ ಲೈಕ್ಸ್ ಪಡೆದುಕೊಂಡಿದೆ.. ಇದುವರೆಗೂ ಯಾವುದೇ ಕನ್ನಡದ ಸಿನಿಮಾದ ಟೀಸರ್ಗೆ ಇಷ್ಟೊಂದು ಲೈಕ್ಸ್ ಸಿಕ್ಕಿದ ಇತಿಹಾಸವಿಲ್ಲ. ಕನ್ನಡ ಅಷ್ಟೇ ಭಾರತೀಯ ಸಿನಿಮಾ ಇಂಡಸ್ಟ್ರಿಯಲ್ಲೇ ಹೊಸ ಇತಿಹಾಸ ಬರೆದಂತಾಗಿದೆ..

ಕೇವಲ 325 ದಿನಗಳಲ್ಲಿ KGF 2 ಟೀಸರ್ ಈ ದಾಖಲೆ ಬರೆದಿದೆ..

ಅಂದ್ಹಾಗೆ “ಕೆಜಿಎಫ್ ಚಾಪ್ಟರ್ 2” ಸಿನಿಮಾ ಮುಂದೆ ಬಾಲಿವುಡ್ ನಟ ಅಮೀರ್ ಖಾನ್ ಅವರ “ಲಾಲ್ ಸಿಂಗ್ ಚಡ್ಡಾ” ವೆಬ್ ಸೀರೀಸ್ ಧೈರ್ಯ ಮಾಡಿ ಹೋರಾಟಕ್ಕೆ ನಿಂತಿದೆ..

ಹೌದು ಲಾಲ್ ಸಿಂಗ್ ಚಡ್ಡಾ RRR , ಗಂಗೂಭಾಯಿ ಕಾಥೇಯವಾಡಿ, ಕಿಲಾಡಿಯಂತಹ ಪ್ಯಾನ್ ಇಂಡಿಯಾ ಬಿಗ್ ಬಜೆಟ್ ಸಿನಿಮಾಗಳಿಗೆ ಹೆದರಿ 2 -3 ಸಲ ರಿಲೀಸ್ ಡೇಟ್ ಮುಂದೂಡಿ ಕಡೆಗೆ ಬಂದು ಬಂದು ಕೆಜಿಎಫ್ 2 ರಿಲೀಸ್ ದಿನದಂದೇ ಸಿನಿಮಾ ರಿಲೀಸ್ ಮಾಡುವುದಕ್ಕೆ ಪ್ಲಾನ್ ಮಾಡಿದೆ..

ಅಲ್ಲದೇ ಅಮೀರ್ ಖಾನ್ ಯಶ್ ಹಾಗೂ ಕೆಜಿಎಫ್ ಟೀಮ್ ಬಳಿ ಪತ್ರದ ಮೂಲಕವೂ ಕ್ಷಮೆಯಾಚಿಸಿದ ನಂತರವೇ ರಿಲೀಸ್ ಡೇಟ್ ಅನೌನ್ಸ್ ಮಾಡಿದ್ರು.. ಇದಾದ ಬೆನ್ನಲ್ಲೇ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಯಶ್ ಅಮಿರ್ ಜಿ ನಿರ್ಧಾರ ಸ್ವಾಗತಾರ್ಹ ಆದ್ರೆ ಥಿಯೇಟರ್ ವಿಚಾರದಲ್ಲೀ ರಾಜಿಯಾಗೋ ಪ್ರಶ್ನೆಯೇ ಇಲ್ಲ ಎಂದು ಖಡಕ್ ಆಗಿಯೂ ಉತ್ತರ ಕೊಟ್ಟಿದ್ರು..

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd