ಪೈಂಟ್ ಕೆಲಸಕ್ಕೆ ಬಂದು ಚಿನ್ನಾಭರಣ ಕಳ್ಳತನ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಬಸವನಗುಡಿ ಪೊಲಿಸರು ಬಂಧಿಸಿದ್ದಾರೆ.
ಉಮೇಶ್ ಪ್ರಸಾದ್ ಜಾಧವ್ ಎಂಬಾತನೇ ಬಂಧಿತ ವ್ಯಕ್ತಿಯಾಗಿದ್ದಾನೆ. ಬಂಧಿತನಿಂದ 6 ಲಕ್ಷ ರುಪಾಯಿ ಮೌಲ್ಯದ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.
ಉತ್ತರಪ್ರದೇಶ ಮೂಲಕ ವ್ಯಕ್ತಿಯಾದ ಉಮೇಶ್ ಪ್ರಸಾದ್ ನೌಕರಿ ಅರಸಿಕೊಂಡು ಬೆಂಗಳೂರಿಗೆ ಬಂದಿದ್ದ. ಮನೆಗಳಿಗೆ ಹೋಗಿ ಪೈಂಟ್ ಕೆಲಸ ಮಾಡಿಕೊಂಡಿದ್ದ. ಹೀಗೆ ಕೆಲಸ ಮಾಡುವಾಗಲೇ ಆ ಮನೆಯವರ ಕನ್ಣು ತಪ್ಪಿಸಿ, ಕಬೋರ್ಡಿನಲ್ಲಿ ಇಟ್ಟಿರುತ್ತಿದ್ದ ಚಿನ್ನಾಭರಣಗಳನ್ನು ದೋಚುತ್ತಿದ್ದ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ








