Khushi : ನದಿಗೆ ಬಿದ್ದ ಸಮಂತಾ – ವಿಜಯ್ ದೇವರಕೊಂಡ ಇದ್ದ ವಾಹನ

1 min read

ನದಿಗೆ ಬಿದ್ದ ಸಮಂತಾ – ವಿಜಯ್ ದೇವರಕೊಂಡ ಇದ್ದ ವಾಹನ
ಇಬ್ಬರೂ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು
ಕಾಶ್ನೀರದಲ್ಲಿ ಖುಷಿ ಸಿನಿಮಾದ ಶೂಟಿಂಗ್ ವೇಳೆ ಅವಘಡ
ಬೆನ್ನಿಗೆ ಸಣ್ಣ ಪುಟ್ಟ ಗಾಯ , ವೈದ್ಯರಿಂದ ಚಿಕಿತ್ಸೆ

ಟಾಲಿವುಡ್ ನ ಸ್ಟಾರ್ ನಟಿ ಸಮಂತಾ ಹಾಗೂ ಸೆನ್ಷೇಷನಲ್ ಸ್ಟಾರ್ ವಿಜಯ್ ದೇವರಕೊಂಡ ಒಟ್ಟಾಗಿ ಕಾಣಿಸಿಕೊಳ್ತಿರುವ ಸಿನಿಮಾ ಖುಷಿ.. ಈ ಸಿನಿಮಾದ ಶೂಟಿಂಗ್ ಸದ್ಯ ಕಾಶ್ಮೀರದಲ್ಲಿ ನಡೆಯುತ್ತಿದ್ದು , ಕೆಲ ದಿನಗಳಿಂದ ಸಿನಿಮಾತಂಡ ಕಾಶ್ಮೀರದಲ್ಲಿ ಬೀಡುಬಿಟ್ಟಿದೆ..

ಇದೇ ಸಿನಿಮಾದ ಚಿತ್ರೀಕರಣದ ವೇಳೆ ಸಮಂತಾ ವಿಜಯ್ ದೇವರಕೊಂಡ ಇದ್ದ ವಾಹನ ನೀರಿಗೆ ಬಿದ್ದಿದೆ.. ಆದ್ರೆ ಅದೃಷ್ಟವಶಾತ್ ಇಬ್ಬರೂ ಸೇಫಾಗಿದ್ದಾರೆ.. ಹೀಗಾಗಿ ಅಭಿಮಾನಿಗಳು ಸಹ ನಿಟ್ಟುಸಿರು ಬಿಟ್ಟಿದ್ದಾರೆ..

ಖುಷಿ ಚಿತ್ರದ ಶೂಟಿಂಗ್ ಕಾಶ್ಮೀರದಲ್ಲಿ ನಡೆಯುತ್ತಿದ್ದು, ಈ ವೇಳೆ ನಟ ವಿಜಯ್ ದೇವರಕೊಂಡ, ಸಮಂತಾ ಗಾಯಗೊಂಡಿದ್ದಾರೆ. ಸಾಹಸ ದೃಶ್ಯವೊಂದರ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದಾಗ ಈ ಘಟನೆ ನಡೆದಿದೆ. ಸದ್ಯ ಇಬ್ಪರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಚಿತ್ರೀಕರಣಕ್ಕಾಗಿ ವಿಜಯ್ ಹಾಗೂ ಸಮಂತಾ, ನದಿಗೆ ಅಡ್ಡಲಾಗಿ ಕಟ್ಟಿದ್ದ ಹಗ್ಗದ ಮೇಲೆ ವಾಹನವನ್ನು ಓಡಿಸಬೇಕಾಗಿತ್ತು. ಆಗ ವಾಹನವು ನದಿಗೆ ಬಿದ್ದಿದೆ.. ಪರಿಣಾಮ  ವಾಹನದಲ್ಲಿದ್ದ ಸಮಂತಾ ಮತ್ತು ವಿಜಯ್ ದೇವರಕೊಂಡ ಬೆನ್ನಿಗೆ ಗಾಯವಾಗಿದೆ. ಇದೀಗ ಇಬ್ಬರಿಗೂ ಚಿಕಿತ್ಸೆ ನೀಡಲಾಗಿದೆ.

ಖುಷಿ ಸಿನಿಮಾಗಾಗಿ ವಿಜಯ್ ಮತ್ತು ಸಮಂತಾ ಅವರು ಶೂಟಿಂಗ್‌ ನಲ್ಲಿ ಭಾಗಿಯಾದರು. ಶ್ರೀನಗರದ ದಾಲ್ ಲೇಕ್ ಬಳಿ ಶೂಟಿಂಗ್ ಮಾಡುತ್ತಿರುವಾಗ ವಾಹನ ನೀರಿಗೆ ಬಿದ್ದಿದೆ. ಈ ವೇಳೆ ಬೆನ್ನಿಗೆ ಗಾಯವಾಗಿ ನೋವು ಕಾಣಿಸಿಕೊಂಡಿದೆ. ತಕ್ಷಣವೇ ಅವರಿಬ್ಬರು ಸ್ಥಳೀಯ ಹೋಟೆಲ್‌ಗೆ ಹೋಗಿದ್ದು, ಸದ್ಯ ವೈದ್ಯರು ಚಿಕಿತ್ಸೆ ನೀಡಿದ್ದಾರೆ. ಖುಷಿ ಸಿನಿಮಾ ಇದೇ ಡಿಸೆಂಬರ್ 23ಕ್ಕೆ ತೆರೆಗೆ ಬರಲಿದೆ. ತೆಲುಗು, ತಮಿಳು, ಮಲಯಾಳಂ, ಕನ್ನಡದಲ್ಲಿ ಈ ಸಿನಿಮಾ ರಿಲೀಸ್ ಆಗಲಿದೆ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd