ಬಿಕಿನಿ ತೊಟ್ಟು ನೀರಿನೊಳಗೆ ಕ್ಯಾಮೆರಾಗೆ ಫೋಸ್ ಕೊಟ್ಟ ಕಿಯಾರಾ – ಸೋಶಿಯಲ್ ಮೀಡಿಯಾದಲ್ಲಿ ಸಂಚಲನ
ಬಾಲಿವುಡ್ ನ ಹಾಟ್ ಅಂಡ್ ಗ್ಲಾಮರಸ್ ನಟಿ ಕಿಯಾರಾ ಅವರು ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದಾರೆ.. ಆಗಾಗ ಹಾಟ್ ಫೊಟೋಗಳನ್ನ ಅಪ್ ಲೋಡ್ ಮಾಡುತ್ತಾ ಪಡ್ಡೆ ಹೈಕ್ಳ ನಿದ್ದೆ ಕೆಡಿಸೋ ಕಿಯಾರಾ ಇದೀಗ ಹಾಟ್ ಬಿಕಿನಿ ಅಂಡರ್ ವಾಟರ್ ಫೋಟೋ ಶೇರ್ ಮಾಡಿ ಸೋಶಿಯಲ್ ಮೀಡಿಯಾಗೆ ಬೆಂಕಿ ಹಚ್ಚಿದ್ದಾರೆ.
ಹೌದು.. ನಟಿ ಕಿಯಾರಾ ಅಡ್ವಾಣಿ ನೀರಿನೊಳಗೆ ಹಾಟ್ ಬಿಕಿನಿ ಫೋಟೋ ಶೂಟ್ ಮಾಡಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋಗಳು ಸಖತ್ ವೈರಲ್ ಆಗಿವೆ. ಅಂಡರ್ ವಾಟರ್ ಬಿಕಿನಿ ಫೋಟೋವನ್ನು ನಟಿ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.
ಹಸಿರು ಬಣ್ಣದ ಬಿಕಿನಿ ಧರಿಸಿರುವ ಕಿಯಾರಾ ನೀರಿನೊಳಗೆ ಮಸ್ತ್ ಪೋಸ್ ನೀಡಿದ್ದಾರೆ. ಇದಕ್ಕೆ ‘ಅಲೆಗಳನ್ನು ತಡೆಯಲು ಸಾಧ್ಯವಿಲ್ಲ ಆದರೆ ಈಜುವುದನ್ನು ಕಲಿಯಬಹುದು’ ಎಂದು ನಟಿ ಕ್ಯಾಪ್ಷನ್ ನೀಡಿದ್ದಾರೆ. ಅಂದ್ಹಾಗೆ ಇದು ಯಲ್ಲಿಯದ್ದು ಯಾವಾಗ ಶೂಟ್ ಮಾಡಿಸಿದ ಫೋಟೋ ಎಂಬ ಪ್ರಶ್ನೆಗಳು ಸಹ ಅನೇಕಾರನ್ನ ಕಾಡಿದ್ದು ಅದಕ್ಕೂ ಉತ್ತರ ಸಿಕ್ಕಿದೆ.. ಇದು ಹಳೆಯ ಫೊಟೋ..
ಆದರೆ ಈ ಫೋಟೋ ಎಲ್ಲಿ ಕ್ಲಿಕ್ ಮಾಡಿರುವುದು ಎನ್ನುವುದನ್ನು ಬಹಿರಂಗ ಪಡಿಸಿಲ್ಲ. ಈ ವರ್ಷದ ಪ್ರಾರಂಭದಲ್ಲಿ ಕಿಯಾರಾ ತಮ್ಮ ಗಾಸಿಪ್ ಬಾಯ್ ಫ್ರೆಂಡ್ ಸಿದ್ಧಾರ್ಥ್ ಮಲ್ಹೋತ್ರ ಜೊತೆ ಮಾಲ್ಡೀವ್ಸ್ ಪ್ರವಾಸಕ್ಕೆ ತೆರಳಿದ್ದರು. ಈ ಫೋಟೋ ಅದೇ ಸಮಯದಲ್ಲಿ ಶೂಟ್ ಮಾಡಿಸಿರಬಹುದು ಎನ್ನಲಾಗಿದೆ. ಸಿನಿಮಾ ವಿಚಾರಕ್ಕೆ ಬಂದ್ರೆ ಬಾಲಿವುಡ್ ನಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಕಿಯಾರಾ ಕೊನೆಯದಾಗಿ ಕಾಂಚನಾ ರೀಮೇಕ್ ಲಕ್ಷ್ಮಿ ಸಿನಿಮಾ ಮೂಲಕ ತೆರೆಮೇಲೆ ಕಾಣಿಸಿಕೊಂಡಿದ್ದರು.
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.