ಕೊರೊನಾ ಭೀತಿ ನಡುವೆ ಫ್ಯಾಂಟಮ್ ಶೂಟಿಂಗ್ ಶುರು
ಸ್ಯಾಂಡಲ್ ವುಡ್ ಬಾದ್ ಷಾ ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ಫ್ಯಾಂಟಮ್. ಕೊರೊನಾ ಹಿನ್ನೆಲೆ ಸ್ಥಗಿತಗೊಂಡಿದ್ದ ಈ ಸಿನಿಮಾದ ಶೂಟಿಂಗ್ ಇದೀಗ ಮತ್ತೆ ಆರಂಭವಾಗಿದೆ. ಹೈದರಾಬಾದ್ ನ ಅನ್ನಪೂರ್ಣ ಸ್ಟುಡಿಯೋದಲ್ಲಿ ಕಿಚ್ಚನ ಫ್ಯಾಂಟಮ್ ಸಿನಿಮಾದ ಚಿತ್ರೀಕರಣ ಶುರುವಾಗಿದೆ. ಇಷ್ಟು ದಿನ ಕೊರೊನಾ ಅಂತ ಮನೆ ಬಿಟ್ಟು ಹೋಗದ ಅಭಿನಯ ಚಕ್ರವರ್ತಿ, ಈಗ ವಿಕ್ರಾಂತ್ ರೋಣನಾಗಿ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಇತ್ತ ವಿಕ್ರಾಂತ್ ರೋಣ’ನ ಥ್ರಿಲ್ಲಿಂಗ್ ಕಥೆಯನ್ನ ನಿರ್ದೇಶಕ ನಿರೂಪ್ ಭಂಡಾರಿ ಸೆರೆಹಿಡಿಯೋ ಕೆಲಸ ಶುರು ಮಾಡಿದ್ದಾರೆ.
ಅಂದಹಾಗೆ ಚಿತ್ರದ ಶೂಟಿಂಗ್ ಗಾಗಿ ಹೈದ್ರಬಾದ್ ನಲ್ಲಿ ಕಳೆದ 5 ತಿಂಗಳಿಂದ ಸೆಟ್ ಹಾಕೋ ಕೆಲಸ ನಡೀತಿದ್ದು ಈಗ ಕಂಪ್ಲೀಟ್ ಆಗಿದೆ. 6 ಕೋಟಿ ವೆಚ್ಚದಲ್ಲಿ 150 ಜನ ಕೆಲಸಗಾರದಿಂದ ಸೆಟ್ ಸಿದ್ದವಾಗಿದ್ದು, ನಿರ್ಮಾಪಕ ಜಾಕ್ ಮಂಜು ವಿಘ್ನೇಶ್ವರನಿಗೆ ಪೂಜೆ ಸಲ್ಲಿಸಿ ಸಿನಿಮಾದ ಶೂಟಿಂಗ್ ಕೈಗೆತ್ತಿಕೊಂಡಿದ್ದಾರೆ.
40 ರಿಂದ 50 ದಿನಗಳ ಕಾಲ ಅನ್ನಪೂರ್ಣ ಸ್ಟುಡಿಯೋದಲ್ಲಿ ಒಂದೇ ಶೆಡ್ಯೂಲ್ ನಲ್ಲಿ ಶೂಟಿಂಗ್ ಮಾಡೋಕೆ ಚಿತ್ರತಂಡ ನಿರ್ಧರಿಸಿದೆ.








