ಗಲ್ಲಾಪೆಟ್ಟಿಗೆ ದೋಚುತ್ತಿರುವ ಕೋಟಿಗೊಬ್ಬ-3 ಸಿನ್ಮಾ ಹೇಗಿದೆ..?

1 min read

ಗಲ್ಲಾಪೆಟ್ಟಿಗೆ ದೋಚುತ್ತಿರುವ ಕೋಟಿಗೊಬ್ಬ-3 ಸಿನ್ಮಾ ಹೇಗಿದೆ..?

ಲೇಟ್ ಆದ್ರೂ ಲೇಟೆಸ್ಟ್ ಆಗಿ ಎಂಟ್ರಿಕೊಟ್ಟಿರುವ ಕೋಟಿಗೊಬ್ಬ – 3 ಸಿನಿಮಾ ಗಲ್ಲಾಪಟ್ಟಿಗೆಯಲ್ಲಿ ಭಾರಿ ಸೌಂಡ್ ಮಾಡ್ತಿದೆ.

ಸಿನಿಮಾ ನೋಡಿದ ಪ್ರೇಕ್ಷಕ ಕಿಚ್ಚನ ಅಭಿನಯಕ್ಕೆ ಫುಲ್ ಮಾರ್ಕ್ಸ್ ಕೊಡ್ತಿದ್ದಾರೆ. ಸಿನಿಮಾ ಪಕ್ಕಾ ಪೈಸಾ ವಸೂಲ್ ಅಂತಾ ಹೇಳ್ತಿದ್ದಾರೆ.

ಹಾಗಾದ್ರೆ ಸಿನಿಮಾ ಹೇಗಿದೆ..?ಕಥೆ ಏನು..? ಅನ್ನೋದನ್ನ ಈ ವಿಡಿಯೋದಲ್ಲಿ ನಾವು ನಿಮ್ಗೆ ಹೇಳ್ತೀವಿ.

ಸತ್ಯ ಮತ್ತು ಶಿವ ಎನ್ನುವ ಎರಡು ಪಾತ್ರದಲ್ಲಿ ಸತ್ಯ ಎನ್ನುವ ಕ್ಯಾರೆಕ್ಟರ್ ಮಾತ್ರ ಕೋಟಿಗೊಬ್ಬ -2 ಕ್ಲೈಮ್ಯಾಕ್ಸಿನಲ್ಲಿ ಉಳಿದುಕೊಂಡಿರುತ್ತದೆ.

ಸತ್ಯ ಮತ್ತು ಪ್ರೇಕ್ಷಕನನ್ನು ಗೊಂದಲಕ್ಕೆ ದೂಡುವ ಇನ್ನೊಂದು ಪಾತ್ರ ಯಾವುದು ಎನ್ನುವ ಸಸ್ಪೆನ್ಸ್ ಅನ್ನು ನಿರ್ದೇಶಕರು ಅಚ್ಚುಕಟ್ಟಾಗಿ ಈ ಚಿತ್ರದಲ್ಲಿ ತೆರೆಯ ಮೇಲೆ ತಂದಿದ್ದಾರೆ.

ಜೊತೆಗೆ, ಘೋಸ್ಟ್ ಪಾತ್ರವನ್ನು ತಂದು, ಇನ್ನಷ್ಟು ಹುಳ ಬಿಟ್ಟಿದ್ದಾರೆ.

kiccha sudeepa saaksha tv

ಪೆÇೀಲೆಂಡ್ ನಲ್ಲಿ ನಡೆಯುವ ಸಾಲುಸಾಲು ಬಾಂಬ್ ಬ್ಲ್ಯಾಸ್ಟ್, ಕೋಟ್ಯಾಂತರ ರೂಪಾಯಿ ಬೆಲೆಬಾಳುವ ಆಭರಣಗಳ ಕಳ್ಳತನದ ಹಿಂದೆ ಘೋಸ್ಟ್ ಪಾತ್ರವಿದೆ ಎಂದು ಇಂಟರ್ ಪೋಲ್ ಪೊಲೀಸರು ಮತ್ತು ವಿಲನ್, ಅವನನ್ನೇ ಹೋಲುವ ಸತ್ಯನ ಹಿಂದೆ ಬೀಳುತ್ತಾರೆ.

ಸತ್ಯ-ಶಿವ-ಘೋಸ್ಟ್ ಪಾತ್ರಗಳು ಎಲ್ಲವೂ ಒಂದೇನಾ, ಘೋಸ್ಟ್ ಪಾತ್ರಧಾರಿ ಸಿನಿಮಾದಲ್ಲಿ ಹೀರೋನಾ..? ವಿಲನ್ನಾ..? ಈ ಪ್ರಶ್ನೆಗಳ ಮಧ್ಯೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಮೂಲಕ ಸತ್ಯ-ಘೋಸ್ಟ್ ಪಾತ್ರಗಳು ಪ್ರೇಕ್ಷಕರನ್ನು ಸೀಟಿನಂಚಿನಲ್ಲಿ ಕೂರಿಸುತ್ತದೆ. ಇಲ್ಲಿ ಮೂಡೋ ಪ್ರಶ್ನೆಗಳಿಗೆ ಕ್ಲೈಮಾಕ್ಸ್ ನಲ್ಲಿ ಉತ್ತರ ಸಿಗಲಿದೆ.

ಇನ್ನು ಚಿತ್ರದಲ್ಲಿ ಎಲ್ಲಾ ಪಾತ್ರಧಾರಿಗಳು ಅಚ್ಚುಕಟ್ಟಾಗಿ ನಟಿಸಿದ್ದಾರೆ. ಮ್ಯೂಸಿಕ್, ರಿಚ್ ಮೇಕಿಂಗ್ ಸಿನಿಮಾಗೆ ಪ್ಲಾಸ್ ಪಾಯಿಂಟ್. ಮೊದಲಾರ್ಧದಲ್ಲಿ ಲ್ಯಾಗ್ ಸೀನ್ ಗಳನ್ನು ಬಿಟ್ಟರೇ ಇನ್ನುಳಿದಂತೆ ಸಿನಿಮಾ ಪಕ್ಕಾ ಫ್ಯಾಮಿಲಿ ಎಂಟರ್ ಟೈನರ್.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd