ಕಿಚ್ಚ ಸುದೀಪ್ (Kichcha Sudeep) ಅವರ 46ನೇ ಸಿನಿಮಾದ ಟೀಸರ್ ಸಾಕಷ್ಟು ಸದ್ದು ಮಾಡುತ್ತಿದೆ. ಹೀಗಾಗಿ ಅಭಿಮಾನಿಗಳು ಈ ಚಿತ್ರದ ಮೇಲೆ ಹೆಚ್ಚಿನ ನಿರೀಕ್ಷೆ ಇಟ್ಟಿದ್ದಾರೆ.
ವಿಕ್ರಾಂತ ರೋಣ ಸಿನಿಮಾದ ನಂತರ ಸುದೀಪ್ ಅವರು ಒಪ್ಪಿಕೊಂಡ ಚಿತ್ರ ಇದಾಗಿದ್ದು, ವಿ ಕ್ರಿಯೇಷನ್ಸ್’ ಬ್ಯಾನರ್ ಮೂಲಕ ಕಲೈಪುಲಿ ಎಸ್. ಧಾನು (Kalaippuli S Thanu) ಅವರು ಬಂಡವಾಳ ಹೂಡುತ್ತಿದ್ದಾರೆ. ಸದ್ಯ ಟೀಸರ್ ರಿಲೀಸ್ ಆಗಿ ಅಭಿಮಾನಿಗಳ ಗಮನ ಸೆಳೆಯುತ್ತಿದೆ.
ಕಿಚ್ಚ 46’ ಚಿತ್ರದ ಟೀಸರ್ ನೋಡಲು ಅಭಿಮಾನಿಗಳು ಮಾತ್ರವಲ್ಲದೇ ಚಂದನವನದ ಹಲವಾರು ಸೆಲೆಬ್ರಿಟಿಗಳು ಕೂಡ ಕಾಯುತ್ತಿದ್ದಾರೆ. ಹಲವು ಪ್ರಾಜೆಕ್ಟ್ಗಳಿಗೆ ಕಿಚ್ಚ ಸುದೀಪ್ ಅವರು ಗ್ರೀನ್ ಸಿಗ್ನಲ್ ನೀಡಿದ್ದಾರೆ. ಮೂರು ಬ್ಯಾಕ್ ಟು ಬ್ಯಾಕ್ ಸಿನಿಮಾವನ್ನು ಒಪ್ಪಿಕೊಂಡಿರುವುದಾಗಿ ತಿಳಿಸುವ ಮೂಲಕ ಅವರು ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದರು.
ತುಂಬ ರಗಡ್ ಆಗಿ ‘ಕಿಚ್ಚ 46’ ಟೀಸರ್ ಮೂಡಿಬಂದಿದೆ. ಈ ಸಿನಿಮಾದ ಮೇಕಿಂಗ್ ಕ್ವಾಲಿಟಿ ಬಗ್ಗೆ ಕೆಲವರಿಗೆ ಅನುಮಾನ ಇತ್ತು. ಅದಕ್ಕೆ ತಕ್ಕ ಉತ್ತರ ನೀಡುವ ರೀತಿಯಲ್ಲಿ, ಬಹಳ ಅದ್ದೂರಿಯಾಗಿ ಟೀಸರ್ ಚಿತ್ರೀಕರಿಸಲಾಗಿದೆ. ಇದರಲ್ಲಿನ ಡೈಲಾಗ್ಗಳು ಗಮನ ಸೆಳೆಯುತ್ತಿವೆ. ‘ನಾನು ಯುದ್ಧಕ್ಕೆ ಇಳಿದ ಮೇಲೆ ದಯೆ, ಕ್ಷಮೆ, ಸಂಧಾನ ಇದು ಯಾವುದೂ ಇರುವುದಿಲ್ಲ. ನಾನು ಮನುಷ್ಯ ಅಲ್ಲ. ನಾನು ರಾಕ್ಷಸ’ ಎಂದು ಟೀಸರ್ನ ಕೊನೆಯಲ್ಲಿ ಸುದೀಪ್ ಹೇಳಿದ್ದಾರೆ.







