ಮೈಸೂರು: 9 ವರ್ಷಗಳ ಹಿಂದೆ ವೈದ್ಯರೊಬ್ಬರ ಅಪಹರಣ ಪ್ರಕರಣ ನಡೆದಿತ್ತು. ಆದರೆ, ಸದ್ಯ ಬರೋಬ್ಬರಿ 9 ವರ್ಷಗಳ ನಂತರ ಆರೋಪಿಯನ್ನು ಬಂಧಿಸಿದ್ದಾರೆ.
ಇಲ್ಲಿಯ ಕುವೆಂಪು ನಗರ ಠಾಣಾ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಫಣಿರಾಜ್ ಬಂಧಿತ ಆರೋಪಿ ಎನ್ನಲಾಗಿದೆ. ಡಾ.ಮಹೇಶ್ ಎಂಬುವವರನ್ನು 2014 ರಲ್ಲಿ ಕಿಡ್ನಾಪ್ ಮಾಡಿ ಮಂಗಳೂರಿಗೆ ಕರೆದೊಯ್ದು ಖಾಲಿ ಪತ್ರಕ್ಕೆ ಸಹಿ ಹಾಕಿಸಿ 3 ಲಕ್ಷ ರೂ. ಸುಲಿಗೆ ಮಾಡಿ ಆರೋಪಿ ಪರಾರಿಯಾಗಿದ್ದ. ಆಗ ಜೀವ ಉಳಿಸಿಕೊಂಡು ಬಂದಿದ್ದ ವೈದ್ಯ ಮಹೇಶ್ ಅವರು ಕುವೆಂಪು ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಸದ್ಯ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.








