Kim Jong Un : ಇದೇ ಮೊದಲಬಾರಿಗೆ ಸಾರ್ವಜನಿಕವಾಗಿ ಮಗಳ ಜೊತೆ ಕಾಣಿಸಿಕೊಂಡ ಕಿಮ್ ಜಾಂಗ್ ಉನ್..!!!
ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಇದೇ ಮೊದಲ ಬಾರಿಗೆ ತಮ್ಮ ಮಗಳ ಜೊತೆಗೆ ಸಾರ್ವಜನಿಕವಾಗಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ..
ರಾಜ್ಯ ಏಜೆನ್ಸಿ ಹಂಚಿಕೊಂಡಿರುವ ಚಿತ್ರಗಳಲ್ಲಿ ಕಿಮ್ ಜಾಂಗ್ ಉನ್ ತಮ್ಮ ಮಗಳೊಂದಿಗೆ ಕೈ ಹಿಡಿದುಕೊಂಡು ಪಕ್ಕದಲ್ಲಿ ನಿಂತಿರುವುದು ಕಂಡುಬಂದಿದೆ..
ಕೆಲವು ಫೋಟೋಗಳಲ್ಲಿ ಅವರು ಕ್ಷಿಪಣಿ ಉಡಾವಣೆ ಹಾಗೂ ಮಿಲಿಟರಿ ಕಾರ್ಯಗಳನ್ನು ನೋಡುತ್ತಿರುವುದು ಕಂಡುಬಂದಿದೆ.
ಕಿಮ್ ಜಾಂಗ್ ಉನ್ ತನ್ನ ವೈಯಕ್ತಿಕ ಜೀವನವನ್ನ ಯಾವಾಗಲೂ ರಹಸ್ಯವಾಗಿಯೇ ಇಡುತ್ತಾರೆ.. 2013ರಲ್ಲಿ ಮಾಜಿ ಬಾಸ್ಕೆಟ್ ಬಾಲ್ ತಾರೆ ಡೆನ್ನಿಸ್ ರಾಡ್ ಮನ್ ಬ್ರಿಟಿಷ್ ದಿನಪತ್ರಿಕೆಯೊಂದರಲ್ಲಿ ಕಿಮ್ ಗೆ ‘ಜು ಎ’ ಹೆಸರಿನ ಮಗುವಿದೆ ಎಂದು ತಿಳಿಸಿದ್ದರು. ರಾಡ್ ಮನ್ ಕಿಮ್ ಅವರ ಕುಟುಂಬದೊಂದಿಗೆ ಸಮಯ ಕಳೆದಿದ್ದು, ಕಿಮ್ ಅವರನ್ನು ಒಬ್ಬ ಒಳ್ಳೆಯ ತಂದೆ ಎಂದು ಹೇಳಿದ್ದರು..
ಶುಕ್ರವಾರ ಉತ್ತರ ಕೊರಿಯಾದಲ್ಲಿ ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆಯ ವೇಳೆ ಕಿಮ್ ಜಾಂಗ್ ಉನ್ ಅವರೊಂದಿಗೆ ಕಾಣಿಸಿಕೊಂಡ ಬಾಲಕಿಯ ಹೆಸರನ್ನು ರಾಜ್ಯ ಮಾಧ್ಯಮ ಬಹಿರಂಗಪಡಿಸಿಲ್ಲ.