ಹುಚ್ಚಾಟ ಮುಂದುವರೆಸಿದ ಕಿಮ್ ಜಾಂಗ್ ಉನ್ – ಮತ್ತೊಂದು ಕ್ಷಿಪಣಿ ಪರೀಕ್ಷೆ..!
ಉತ್ತರಕೊರಿಯಾ : ಹುಚ್ಚ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ರಾಷ್ಟ್ರ ಉತ್ತರ ಕೊರಿಯಾ ಮತ್ತೊಂದು ಕ್ಷಿಪಣಿಯ ಪರೀಕ್ಷೆ ನಡೆಸಿದೆ.
ಹೌದು ಪೂರ್ವ ಕರಾವಳಿಯಲ್ಲಿ ಹೊಸ ಕ್ಷಿಪಣಿಯನ್ನು ಪರೀಕ್ಷಿಸಲಾಗಿದೆ ಎಂದು ಉತ್ತರ ಕೊರಿಯಾ ಮಾಹಿತಿ ನೀಡಿದೆ. ಉತ್ತರ ಕೊರಿಯಾದ ಅಧಿಕೃತ ಕೇಂದ್ರ ಸುದ್ದಿ ಸಂಸ್ಥೆಯ ರೊಡಾಂಗ್ ಸಿನ್ಮುನ್ ಪತ್ರಿಕೆಯು ಈ ಬಗ್ಗೆ ತಿಳಿಸಿದೆ. ಇದರ ಫೋಟೊಗಳನ್ನು ಹಂಚಿಕೊಂಡಿದೆ.
ಉತ್ತರ ಕೊರಿಯಾ ಪೂರ್ವ ಕರಾವಳಿಯಲ್ಲಿ 2 ನೂತನ ಮಾದರಿಯ ಯುದ್ಧತಂತ್ರವನ್ನು ಒಳಗೊಂಡ ಕ್ಷಿಪಣಿಗಳ ಪರೀಕ್ಷೆಯನ್ನು ನಡೆಸಿದೆ.
ಉತ್ತರ ಕೊರಿಯಾದ ಸೇನಾ ಶಕ್ತಿಯನ್ನು ಹೆಚ್ಚಿಸಲು ಈ ಕ್ಷಿಪಣಿಯನ್ನು ಅಭಿವೃದ್ಧಿ ಪಡಿಸಲಾಗಿದೆ ಎಂದು ಕ್ಷಿಪಣಿ ಪ್ರಯೋಗದ ಮೇಲ್ವಿಚಾರಕ ರಿ ಪ್ಯಾಂಗ್ ಚೋಲ್ ತಿಳಿಸಿದ್ದಾರೆ.
ಅಂದ್ಹಾಗೆ ಈ ಕ್ಷಿಪಣಿಗಳನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ನಿರ್ಬಂಧಿಸಿತ್ತು. ಸಾಲದ್ದಕ್ಕೆ ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ಕೂಡ ಉತ್ತರ ಕೊರಿಯಾಗೆ ಮೊದಲೇ ಎಚ್ಚರಿಕೆ ನೀಡಿದ್ದರು.
ಉದ್ವಿಗ್ನ ಪರಿಸ್ಥಿತಿ ಸೃಷಿಸಿದರೆ ಅದರ ಪರಿಣಾಮ ಎದುರಿಸಲು ಉತ್ತರ ಕೊರಿಯಾ ಸಿದ್ಧವಿರಲಿ ಎಂದು ವಾರ್ನಿಂಗ್ ಕೊಟ್ಟಿದ್ರೂ. ಆದ್ರು ಹುಚ್ಚ ಕಿಮ್ ಜಾಂಗ್ ಉನ್ ತಾನು ನಡೆದಿದ್ದೇ ಹಾದಿ ನಾನ್ ಮಾಡಿದ್ದೇ ರೈಟ್ ಅನ್ನೋ ಹಾಗೆ ಹುಚ್ಚಾಟ ಮುಂದುವರೆಸಿದ್ದಾರೆ.
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ – 22 ಕಚ್ಚಾ ಬಾಂಬ್ ಪತ್ತೆ..!
ಪಶ್ಚಿಮ ಬಂಗಾಳ, ಅಸ್ಸಾಂನಲ್ಲಿ ಮೊದಲ ಹಂತದ ಚುನಾವಣೆ – ಮೋದಿ ಜನರಿಗೆ ಕೊಟ್ಟ ಸಂದೇಶವೇನು…?
ಪಶ್ಚಿಮ ಬಂಗಾಳ, ಅಸ್ಸಾಂನಲ್ಲಿ ಮೊದಲ ಹಂತದ ಚುನಾವಣೆ..! ಬಿರುಸಿನ ಮತದಾನ
ಬಾಂಗ್ಲಾದೇಶದಲ್ಲಿ ಹಿಂದೂ ದೇಗುಲಕ್ಕೆ ಭೇಟಿ ನೀಡಿದ ನಮೋ..!
NETFLIX , AMAZON ಸೇರಿ ಹಲವು ಒಟಿಟಿಗಳ ಮೇಲಿನ ಬಾಕಿ ಕೇಸ್ ಗಳಿಗೆ ತಡೆ ನೀಡಿದ ಸುಪ್ರೀಂ..!