ಪಶ್ಚಿಮ ಬಂಗಾಳ, ಅಸ್ಸಾಂನಲ್ಲಿ ಮೊದಲ ಹಂತದ ಚುನಾವಣೆ..! ಬಿರುಸಿನ ಮತದಾನ
1 min read
ಪಶ್ಚಿಮ ಬಂಗಾಳ, ಅಸ್ಸಾಂನಲ್ಲಿ ಮೊದಲ ಹಂತದ ಚುನಾವಣೆ..! ಬಿರುಸಿನ ಮತದಾನ
ಪಶ್ಚಿಮ ಬಂಗಾಳ / ಅಸ್ಸಾಂ : ಇಂದು ಪಶ್ಚಿಮ ಬಂಗಾಳ ಹಾಗೂ ಅಸ್ಸಾಂ ರಾಜ್ಯಗಳಲ್ಲಿ ಮೊದಲ ಹಂತದ ವಿಧಾನಸಭಾ ಚುನಾವಣೆ ಬಿರುಸಿನಿಂದ ಆರಂಭವಾಗಿದೆ.
ಅದ್ರಲ್ಲೂ ಸದ್ಯಕ್ಕೆ ಭಾರೀ ಕುತೂಹಲ ಹಾಗೂ ಸಂಚಲನ ಸೃಷ್ಟಿಸಿರುವ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಹಾಗೂ ಆಡಳಿತ ರೂಢ ಪಕ್ಷ TMC ನಡುವೆ ಟಫ್ ಕಾಂಪಿಟೇಶನ್ ಇದ್ದು, ಭರ್ಜರಿ ಮತಯಾಚನೆ, ಹೈಡ್ರಾಮಾಗಳು ನಡೆದುಹೋಗಿವೆ. ಮತದಾರರು ಈ ಬಾರಿ ಯಾರ ಕೈಹಿಡಿಯುತ್ತಾರೆ ಅನ್ನೋ ಕಾತರತೆ ಜೋರಾಗಿದೆ.
ಪಶ್ಚಿಮ ಬಂಗಾಳದ ಒಟ್ಟು 5 ಜಿಲ್ಲೆಗಳ 30 ಸ್ಥಾನಗಳಿಗೆ ಮತದಾನ ನಡೆಯಲಿದೆ. ಅಸ್ಸಾಂನಲ್ಲಿನ ಒಟ್ಟು 126 ವಿಧಾನಸಭಾ ಕ್ಷೇತ್ರಗಳ ಪೈಕಿ 47 ಸ್ಥಾನಗಳಿಗೆ ಮತದಾನ ನಡೆಯಲಿದೆ. ಬೆಳಗ್ಗೆ 7ರಿಂದ ಸಂಜೆ 6ರ ವರೆಗೆ ಮತದಾನ ನಡೆಯಲಿದೆ.
ಬಾಂಗ್ಲಾದೇಶದಲ್ಲಿ ಹಿಂದೂ ದೇಗುಲಕ್ಕೆ ಭೇಟಿ ನೀಡಿದ ನಮೋ..!
ಬಾಂಗ್ಲಾದೇಶದ ಸ್ವಾತಂತ್ರಕ್ಕಾಗಿ ಹೋರಾಡಿ ಜೈಲು ಸೇರಿದ್ದೆ – ಮೋದಿ..!
ದೇಶದಲ್ಲಿ ಕೊರೊನಾ 2ನೇ ಅಲೆಯ ಅಬ್ಬರ – 62,258 ಕೇಸಸ್ ಪತ್ತೆ , ಬಲಿಯಾದವರೆಷ್ಟು..?