kirataka -2
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಸೂಪರ್ ಹಿಟ್ ಸಿನಿಮಾ ಕಿರಾತಕ. ಈ ಸಿನಿಮಾ ಯಶ್ ಅವರ ಇಮೇಜ್ ಅನ್ನೇ ಬದಲಾಯಿಸಿಬಿಟ್ಟಿತ್ತು. ಕಿರಾತಕ ಸಿನಿಮಾ ದೊಡ್ಡ ಹಿಟ್ ಆಗಿತ್ತು. ಯಶ್ ವೃತ್ತಿ ಜೀವನದಲ್ಲಿ ಹೊಸ ಟ್ರೆಂಡ್ ಹುಟ್ಟುಹಾಕಿದ ಈ ಚಿತ್ರದಿಂದ ಯಶ್ ಅವರ ಅಭಿಮಾನಿಗಳ ಬಳಗ ಮತ್ತಷ್ಟು ವೃದ್ಧಿಯಾಗಿತ್ತು. ಅಂದ್ಹಾಗೆ ಸ್ಯಾಂಡಲ್ ವುಡ್ ಅಷ್ಟೇ ಅಲ್ಲದೇ ಪರಭಾಷೆಗಳಲ್ಲಿ ಧೂಳೆಬ್ಬಿಸಿದ ಕೆಜಿಎಫ್ ಚಾಪ್ಟರ್ 1 ಶೂಟಿಂಗ್ ಮುಗಿಯುತ್ತಿದ್ದಂತೆ ಯಶ್ ಅವರು ‘ಮೈ ನೇಮ್ ಈಸ್ ಕಿರಾತಕ’ ಎಂಬ ಹೊಸ ಪ್ರಾಜೆಕ್ಟ್ ಆರಂಭಿಸಿದರು. ಇದು ಕಿರಾತಕ ಸೀಕ್ವೆಲ್ ಎಂದೇ ಹೇಳಲಾಗಿತ್ತು. ಹೀಗಾಗಿ ಈ ಚಿತ್ರದ ಬಗ್ಗೆ ಸಿಕ್ಕಾಪಟ್ಟೆ ಕ್ರೇಜ್ ಕ್ರಿಯೇಟ್ ಆಗಿತ್ತು. ಆದ್ರೆ ಕೆಜಿಎಫ್ ಸಕ್ಸಸ್ ನಂತರ ಈ ಸಿನಿಮಾ ಇದ್ದಕ್ಕಿಂದತೆ ಮೂಲೆ ಸೇರಿಬಿಡ್ತು. ಆದ್ರೀಗ, ಕಿರಾತಕ 2 ಸಿನಿಮಾದ ಚಿತ್ರೀಕರಣ ಮುಗಿದಿದೆ.
ಶಂಕರಣ್ಣನ 66ನೇ ಹುಟ್ಟುಹಬ್ಬ : ‘ಆಟೋರಾಜ’ನ ನೆನೆದ ರಾಜಕೀಯ ಗಣ್ಯರು
ಹೌದು ಯಶ್ ಕೆ ಜಿಎಫ್ 2 ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದ ಶೂಟಿಂಗ್ ನಲ್ಲಿ ಯಾವಗ ಭಾಗಿಯಾಗಿದ್ರು ಅಂತ ಆಶ್ಚರ್ಯ ಆಗುತ್ತೆ. ಆದ್ರೆ ಈ ಸಿನಿಮಾದಲ್ಲಿ ನಾಯಕ ರಾಕಿಂಗ್ ಸ್ಟಾರ್ ಯಶ್ ಅಲ್ಲ. ಈ ಸಿನಿಮಾದಲ್ಲಿ ಯಶ್ ಶೆಟ್ಟಿ ನಾಯಕನಾಗಿ ಕಾಣಿಸಿಕೊಳ್ತಾಯಿದ್ದಾರೆ. ಇನ್ನೂ ಕೆಜಿಎಫ್, ಆ ದೃಶ್ಯ , ಸೂಜಿದಾರ, ಸೇರಿದಂತೆ ಹಲವು ಚಿತ್ರಗಳಲ್ಲಿ ವಿಭಿನ್ನ ಪಾತ್ರಗಳು ಹಾಗೂ ಖಳನಾಯಕನ ಪಾತ್ರಗಳ ಮೂಲಕ ಗುರುತಿಸಿಕೊಂಡಿರುವ ಯಶ್ ಶೆಟ್ಟಿ ಇದೀಗ ಕಿರಾತಕ 2 ಸಿನಿಮಾದಲ್ಲಿ ನಾಯಕನಾಗಿ ಕಾಣಿಸಿಕೊಳ್ತಿದ್ದು, ಶೂಟಿಂಗ್ ಸಹ ಮುಗಿಸಿದ್ದಾರೆ. ಅಂದ್ಹಾಗೆ ಈ ಚಿತ್ರ ಕಿರಾತಕ ಚಿತ್ರದ ಸೀಕ್ವೆಲ್ ಅಲ್ಲ. ಹೌದು ಯಶ್ ನಟಿಸಬೇಕಿದ್ದ ‘ಮೈ ನೇಮ್ ಈಸ್ ಕಿರಾತಕ’ ಗೂ ಯಶ್ ಶೆಟ್ಟಿ ನಟನೆಯ ಕಿರಾತಕ 2 ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲವಂತೆ. ಆದ್ರೆ ಸಿನಿಮಾಗಳು ಬೇರೆಯಾದ್ರೂ ನಿರ್ದೇಶಕರು ಮಾತ್ರ ಒಬ್ಬರೇ.
kirataka -2
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel